Virender Sehwag: ಸಚಿನ್‌ ಅಲ್ಲ! ಈ ಲೆಜೆಂಡರಿ ಆಟಗಾರನೇ ಶ್ರೇಷ್ಠ ಕ್ರಿಕೆಟಿಗ ಎಂದ ವೀರೇಂದ್ರ ಸೆಹ್ವಾಗ್

The Greatest Cricketer According to Virender Sehwag: ಕೊಹ್ಲಿ ಕಳೆದ 15ವರ್ಷಗಳಿಂದ ಎಲ್ಲಾ ಫಾರ್ಮ್ಯಾಟ್‌ಗಲ್ಲಿ ಭಾರತದ ತಂಡದ ನಿರಂತರ ಭಾಗವಾಗಿದ್ದಾರೆ. ಕೊಹ್ಲಿ ಏಕದಿನ ಮತ್ತು ಟಿ-20 ಎರಡಲ್ಲೂ 50ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಶೇ.49.2ರ ಸರಾಸರಿ ಹೊಂದಿದ್ದಾರೆ.

Written by - Puttaraj K Alur | Last Updated : Feb 15, 2024, 11:09 AM IST
  • ವಿರಾಟ್‌ ಕೊಹ್ಲಿ ಟೀಂ ಇಂಡಿಯಾದ ಲೆಜೆಂಡರಿ ಶ್ರೇಷ್ಠ ಆಟಗಾರನೆಂದ ವೀರೇಂದ್ರ ಸೆಹ್ವಾಗ್
  • ಸಚಿನ್‌ ತೆಂಡೂಲ್ಕರ್‌ & ಎಂ.ಎಸ್.ಧೋನಿಗಿಂತಲೂ ಶ್ರೇಷ್ಠ ಕ್ರಿಕೆಟಿಗನ ಹೆಸರಿಸಿದ ಸೆಹ್ವಾಗ್‌
  • ವೈಯಕ್ತಿಕ ಕಾರಣಗಳಿಂದ ವಿರಾಮದಲ್ಲಿರುವ ಕೊಹ್ಲಿಗೆ ಶುಭಾಶಯ ತಿಳಿಸಿದ ಸೆಹ್ವಾಗ್
Virender Sehwag: ಸಚಿನ್‌ ಅಲ್ಲ! ಈ ಲೆಜೆಂಡರಿ ಆಟಗಾರನೇ ಶ್ರೇಷ್ಠ ಕ್ರಿಕೆಟಿಗ ಎಂದ ವೀರೇಂದ್ರ ಸೆಹ್ವಾಗ್ title=
ಕೊಹ್ಲಿಗೆ ಶುಭಾಶಯ ತಿಳಿಸಿದ ಸೆಹ್ವಾಗ್!

Virat Kohli's Impact on Indian Cricket: ಭಾರತೀಯ ಕ್ರಿಕೆಟ್‌ ದಂತಕಥೆ ವೀರೇಂದ್ರ ಸೆಹ್ವಾಗ್‌ ಅವರು ತಮ್ಮ ಮಾಜಿ ಸಹ ಆಟಗಾರರನ್ನು ವಿಶೇಷವಾಗಿ ಹೊಗಳಿದ್ದಾರೆ. ಕ್ರಿಕೆಟ್‌ ದೇವರು, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ಗಿಂತಲೂ ಈ ಆಟಗಾರ ʼಶ್ರೇಷ್ಠ ಕ್ರಿಕೆಟಿಗʼನೆಂದು ಹೇಳಿದ್ದಾರೆ. ಸೆಹ್ವಾಗ್‌ ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರರಾಗಿದ್ದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ 2 ತ್ರಿಶತಕ ಬಾರಿಸಿದ ಏಕೈಕ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಂ.ಧೋನಿ ನೇತೃತ್ವದಲ್ಲಿ 2007ರ ಟಿ-20 ವಿಶ್ವಕಪ್‌ ಮತ್ತು 2011ರ ಏಕದಿನ ವಿಶ್ವಕಪ್‌ ವಿಜೇತ ತಂಡ ಪ್ರಮುಖ ಭಾಗವಾಗಿದ್ದರು.

ಸೆಹ್ವಾಗ್‌ ಒಂದು ದಶಕಕ್ಕೂ ಹೆಚ್ಚು ಕಾಲ ರಾಷ್ಟ್ರೀಯ ತಂಡದಲ್ಲಿ ಆಡಿದ್ದಾರೆ. ಮುಖ್ಯವಾಗಿ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್‌ ಗಂಗೂಲಿ ಮತ್ತು ರನ್‌ ಮಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ ನಾಯತ್ವದಲ್ಲಿಯೂ ಅವರು ಆಡಿದ್ದಾರೆ. ಅವರು ತಮ್ಮ ವೈಟ್‌-ಬಾಲ್‌ ವೃತ್ತಿಜೀವನದ ಬಹುಪಾಲು ಸಚಿನ್‌ ತೆಂಡೂಲ್ಕರ್‌ ಅವರೊಂದಿಗೆ ಓಪನಿಂಗ್‌ ಬ್ಯಾಟ್ಸಮನ್‌ ಆಗಿ ಆಡಿದ್ದಾರೆ. ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗಿದ್ದ ಸೆಹ್ವಾಗ್‌ ಶ್ರೇಷ್ಠ ಓಪನಿಂಗ್‌ ಬ್ಯಾಟ್ಸಮನ್‌ ಅನ್ನೋ ಹೆಗ್ಗಳಿಕೆ ಹೊಂದಿದ್ದಾರೆ. 

ಇದನ್ನೂ ಓದಿ: ಐಸಿಸಿ ಆಲ್ ರೌಂಡರ್ ಏಕದಿನ ರ್‍ಯಾಂಕಿಂಗ್ : ಆಫ್ಘಾನಿಸ್ತಾನದ ಮೊಹಮ್ಮದ್ ನಬಿ ಅಗ್ರಸ್ಥಾನದಲ್ಲಿ

ಈತನೇ ಶೇಷ್ಠ ಕ್ರಿಕೆಟಿಗ ಎಂದ ಸೆಹ್ವಾಗ್!‌

ಟೀಂ ಇಂಡಿಯಾದ ಲೆಜೆಂಡರಿ ಆಟಗಾರ ವಿರಾಟ್‌ ಕೊಹ್ಲಿಯನ್ನು ʼಶ್ರೇಷ್ಠ ಕ್ರಿಕೆಟಿಗʼ ಎಂದು ವೀರೇಂದ್ರ ಸೆಹ್ವಾಗ್‌ ಬಣ್ಣಿಸಿದ್ದಾರೆ. ಇತ್ತೀಚೆಗಿನ ಸ್ಫೋರ್ಟ್ಸ್‌ ಟಾಕ್‌ ಜೊತೆಗಿನ ಸಂವಾದದ ರ್ಯಾಪಿಡ್‌ ಫೈರ್‌ ರೌಂಡ್‌ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಕೊಹ್ಲಿ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 

ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಅಲಭ್ಯವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಸೆಹ್ವಾಗ್, ನಾನು ಅವರಿಗೆ ಶುಭ ಹಾರೈಸುತ್ತೇನೆ ಅಂತಾ ಹೇಳಿದ್ದಾರೆ. ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್‌ ವಿರುದ್ಧದ 5 ಟೆಸ್ಟ್‌ ಪಂದ್ಯಗಳ ಸಂಪೂರ್ಣ ಸರಣಿಯನ್ನು ಕೊಹ್ಲಿ ಮಿಸ್‌ ಮಾಡಿಕೊಂಡಿದ್ದಾರೆ. 2011ರಲ್ಲಿ ಭಾರತದ ಇಂಗ್ಲೆಂಡ್‌ ಪ್ರವಾಸದ ನಂತರ ಇದು ಮೊದಲ ಬಾರಿಗೆ ಕೊಹ್ಲಿ ಸಂಪೂರ್ಣ ಟೆಸ್ಟ್‌ ಸರಣಿಯಿಂದ ದೂರ ಉಳಿದಿದ್ದಾರೆ. 

ಇದನ್ನೂ ಓದಿ: T20 ವಿಶ್ವಕಪ್‌ಗೆ ರೋಹಿತ್ ಶರ್ಮಾ ಕ್ಯಾಪ್ಟನ್‌, ಈ ಸ್ಟಾರ್‌ ಆಲ್‌ರೌಂಡರ್‌ಗೆ ಉಪನಾಯಕನ ಜವಾಬ್ದಾರಿ ಕೊಟ್ಟ BCCI..!

ಕೊಹ್ಲಿ ತಮ್ಮ ಟೆಸ್ಟ್‌ ಪಾದಾರ್ಪಣೆಯ ನಂತರ ಇದೇ ಮೊದಲ ಬಾರಿಗೆ ತವರಿನಲ್ಲಿ ಸಂಪೂರ್ಣ ಟೆಸ್ಟ್‌ ಸರಣಿಯನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಕೊಹ್ಲಿ ಕಳೆದ 15ವರ್ಷಗಳಿಂದ ಎಲ್ಲಾ ಫಾರ್ಮ್ಯಾಟ್‌ಗಲ್ಲಿ ಭಾರತದ ತಂಡದ ನಿರಂತರ ಭಾಗವಾಗಿದ್ದಾರೆ. ಕೊಹ್ಲಿ ಏಕದಿನ ಮತ್ತು ಟಿ-20 ಎರಡಲ್ಲೂ 50ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಶೇ.49.2ರ ಸರಾಸರಿ ಹೊಂದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಒಟ್ಟು 80 ಶತಕಗಳನ್ನು ಹೊಂದಿದ್ದು, ಸಚಿನ್‌ ತೆಂಡೂಲ್ಕರ್(‌100) ಮಾತ್ರ ಅತಿಹೆಚ್ಚು ಶತಕಗಳನ್ನು ಭಾರಿಸಿದ ವಿಶ್ವದ ಏಕೈಕ ಆಟಗಾರರಾಗಿದ್ದಾರೆ. ಕಳೆದ ವರ್ಷ ನ್ಯೂಜಿಲ್ಯಾಂಡ್‌ ವಿರುದ್ಧ 2023ರ ವಿಶ್ವಕಪ್‌ ಸೆಮಿಫೈನ್‌ನಲ್ಲಿ ಕೊಹ್ಲಿ ತಮ್ಮ 50ನೇ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕಗಳನ್ನು ಗಳಿಸಿದ ಸಚಿನ್‌ ಅವರ ದಾಖಲೆಯನ್ನು ಮುರಿದಿದ್ದರು.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News