ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ವಿಶ್ವಕಪ್ ಪಾಯಿಂಟ್ ಟೇಬಲ್’ನಲ್ಲಿ ಎಷ್ಟನೇ ಸ್ಥಾನದಲ್ಲಿದೆ?

ICC Cricket World Cup 2023 Points Table: ಭಾರತ ತಂಡವು ನ್ಯೂಜಿಲೆಂಡ್’ನ್ನು ಸೋಲಿಸುವ ಮೂಲಕ ವಿಶ್ವಕಪ್ 2019ರ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ. ಅಲ್ಲದೆ ಈ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Written by - Bhavishya Shetty | Last Updated : Oct 23, 2023, 03:07 PM IST
    • ವಿಜಯರಥದ ಮೇಲೆ ಸವಾರಿ ಮಾಡುತ್ತಿದೆ ಇಂಡಿಯಾ
    • ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ
    • ಭಾರತ ವಿಶ್ವಕಪ್ 2023ರಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದ ಏಕೈಕ ತಂಡ
ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ವಿಶ್ವಕಪ್ ಪಾಯಿಂಟ್ ಟೇಬಲ್’ನಲ್ಲಿ ಎಷ್ಟನೇ ಸ್ಥಾನದಲ್ಲಿದೆ?  title=
ICC Cricket World Cup 2023 Points Table

ICC Cricket World Cup 2023 Points Table: ವಿಶ್ವಕಪ್ 2023ರಲ್ಲಿ ಟೀಂ ಇಂಡಿಯಾ ವಿಜಯದ ರಥದ ಮೇಲೆ ಸವಾರಿ ಮಾಡುತ್ತಿದೆ. ನ್ಯೂಜಿಲೆಂಡ್ ತಂಡವನ್ನು ನಾಲ್ಕು ವಿಕೆಟ್‌’ಗಳಿಂದ ಸೋಲಿಸಿದ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಭಾರತ ತಂಡವು ನ್ಯೂಜಿಲೆಂಡ್’ನ್ನು ಸೋಲಿಸುವ ಮೂಲಕ ವಿಶ್ವಕಪ್ 2019ರ ಸೆಮಿಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ. ಅಲ್ಲದೆ ಈ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಗೆಲುವಿನ ನಾಗಾಲೋಟದ ಮಧ್ಯೆಯೇ ತಂಡವನ್ನು ತೊರೆದ ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್ ! ರೋಹಿತ್ ಶರ್ಮಾ ಈ ನಿರ್ಧಾರಕ್ಕೆ ಕಾರಣ ? 

ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ. ಇಲ್ಲಿಂದ ಒಂದು ಪಂದ್ಯವನ್ನಾದರೂ ಗೆದ್ದರೆ ಭಾರತ ಸೆಮಿಫೈನಲ್ ತಲುಪುವುದು ಬಹುತೇಕ ಖಚಿತ.

ಭಾರತ ಈಗ ವಿಶ್ವಕಪ್ 2023ರಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದ ಏಕೈಕ ತಂಡವಾಗಿದೆ. ಐದು ಪಂದ್ಯಗಳನ್ನು ಗೆದ್ದಿರುವ ಭಾರತ ಒಟ್ಟು 10 ಅಂಕ ಪಡೆದಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಭಾರತದ ನೆಟ್ ರನ್ ರೇಟ್ +1.353 ಆಗಿದೆ.

ನ್ಯೂಜಿಲೆಂಡ್ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವು ಮತ್ತು ಒಂದು ಸೋಲಿನೊಂದಿಗೆ ಎಂಟು ಅಂಕಗಳನ್ನು ಪಡೆದಿದೆ. ಈ ತಂಡದ ನೆಟ್ ರನ್ ರೇಟ್ +1.481 ಆಗಿದೆ. ಇನ್ನು ದಕ್ಷಿಣ ಆಫ್ರಿಕಾ ನಾಲ್ಕು ಪಂದ್ಯಗಳ ಗೆಲುವಿನಿಂದ ಆರು ಅಂಕಗಳನ್ನು ಪಡೆದು ಮೂರನೇ ಸ್ಥಾನದಲ್ಲಿದೆ. ಈ ತಂಡದ ನೆಟ್ ರನ್ ರೇಟ್ +2.212 ಆಗಿದೆ. ಆಸ್ಟ್ರೇಲಿಯಾ ಎರಡು ಗೆಲುವಿನೊಂದಿಗೆ ನಾಲ್ಕು ಅಂಕಗಳನ್ನು ಪಡೆದುಕೊಂಡಿದ್ದು, ನೆಟ್ ರನ್ ರೇಟ್ -0.193 ಇದೆ.

ಇನ್ನು ಪಾಕಿಸ್ತಾನ ಮತ್ತು ಇಂಗ್ಲೆಂಡ್‌’ಗೆ ಪ್ರತಿ ಪಂದ್ಯವೂ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ನಾಲ್ಕರಲ್ಲಿ ಮೂರು ಪಂದ್ಯಗಳನ್ನು ಸೋತಿದ್ದು, ಕೇವಲ ಎರಡು ಅಂಕಗಳನ್ನು ಹೊಂದಿದೆ. ಇನ್ನುಮುಂದೆ ಆಡಲಿರುವ ಎಲ್ಲಾ ಐದು ಪಂದ್ಯಗಳನ್ನು ಗೆದ್ದರೆ 12 ಅಂಕಗಳನ್ನು ಪಡೆಯುತ್ತದೆ. ಆದರೆ ಇಂಗ್ಲೆಂಡ್ ತನ್ನ ನೆಟ್ ರನ್ ದರವನ್ನು (-1.248) ಸುಧಾರಿಸಬೇಕಾಗಿದೆ.

ಇನ್ನೊಂದೆಡೆ, ಪಾಕಿಸ್ತಾನ ಎರಡು ಗೆಲುವು ಮತ್ತು ಎರಡು ಸೋಲುಗಳೊಂದಿಗೆ ಕೇವಲ ನಾಲ್ಕು ಅಂಕಗಳನ್ನು ಹೊಂದಿದೆ. ಪಾಕಿಸ್ತಾನಕ್ಕೂ ಐದು ಪಂದ್ಯಗಳು ಬಾಕಿ ಇದ್ದು, ಇಲ್ಲಿಂದ ಐದು ಪಂದ್ಯಗಳನ್ನು ಗೆದ್ದರೆ ಮಾತ್ರ ಸೆಮಿಫೈನಲ್‌’ಗೆ ಲಗ್ಗೆ ಇಡಬಹುದು. ಪ್ರಸ್ತುತ ನೆಟ್ ರನ್ ರೇಟ್ (-0.456) ಕೆಟ್ಟದಾಗಿದೆ. ಮುಂಬರುವ ಪಂದ್ಯವನ್ನು ಪಾಕಿಸ್ತಾನ ದೊಡ್ಡ ಅಂತರದಿಂದ ಗೆದ್ದರೆ ಸೆಮೀಸ್ ಪ್ರವೇಶಿಸಬಹುದು.

ವಿಶ್ವಕಪ್ 2023ರಲ್ಲಿ, ಪಂದ್ಯಗಳು ರೌಂಡ್ ರಾಬಿನ್ ಆಧಾರದ ಮೇಲೆ ನಡೆಯುತ್ತಿವೆ. ಇದರಲ್ಲಿ ಎಲ್ಲಾ 10 ತಂಡಗಳು ಪರಸ್ಪರ ಒಂದೊಂದು ಪಂದ್ಯವನ್ನು ಆಡಲಿವೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ತಲುಪಲಿವೆ. ಎರಡು ತಂಡಗಳು ಸಮಾನ ಅಂಕಗಳನ್ನು ಹೊಂದಿದ್ದರೆ ಉತ್ತಮ ನೆಟ್ ರನ್ ರೇಟ್ ಹೊಂದಿರುವ ತಂಡವು ಸೆಮಿಫೈನಲ್‌’ಗೆ ಪ್ರವೇಶಿಸುತ್ತದೆ. ಮೊದಲ ಸೆಮಿಫೈನಲ್ ಪಂದ್ಯವನ್ನು 15 ನವೆಂಬರ್ 2023 ರಂದು ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಮೊದಲ ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳ ನಡುವೆ ಈ ಪಂದ್ಯ ನಡೆಯಲಿದೆ.

ಇದನ್ನೂ ಓದಿ: “ನನ್ನನ್ನು ಪಾಕಿಸ್ತಾನಿ ಎಂದು ಕರೆಯಬೇಡಿ!”… ಪಾಕ್ ಮಾಜಿ ಕ್ರಿಕೆಟಿಗ ಹೀಗಂದಿದ್ದೇಕೆ?

2023ರ ನವೆಂಬರ್ 16ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌’ನಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್ ಪಂದ್ಯದಲ್ಲಿ ಗೆಲ್ಲುವ ಎರಡು ತಂಡಗಳು ನವೆಂಬರ್ 19 ರಂದು ಅಹಮದಾಬಾದ್‌’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯವನ್ನು ಆಡಲಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News