T20: ಧೋನಿಯ ದಾಖಲೆ ಉಡೀಸ್ ಮಾಡಿ ‘ಟಿ20 ಕಿಂಗ್’ ಪಟ್ಟ ಮುಡಿಗೇರಿಸಿಕೊಂಡ ಪಾಕಿಸ್ತಾನದ ಈ ಆಟಗಾರ!

Pakistan vs New Zealand 2nd T20I: ಬಾಬರ್ ಅಜಮ್ ಅವರು ಭಾರತದ ಮಾಜಿ ನಾಯಕ ಮತ್ತು ಅನುಭವಿ ವಿಕೆಟ್ ಕೀಪರ್ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ. ಬಾಬರ್ ಅಜಮ್ ನಾಯಕತ್ವದಲ್ಲಿ ಪಾಕಿಸ್ತಾನವು 42 ನೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಗೆದ್ದುಕೊಂಡಿದೆ. ಇವರು ಇದುವರೆಗೆ 68 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ನಾಯಕತ್ವ ವಹಿಸಿದ್ದು, ಈ ಪೈಕಿ 42 ಪಂದ್ಯಗಳನ್ನು ಗೆದ್ದಿದ್ದಾರೆ.

Written by - Bhavishya Shetty | Last Updated : Apr 16, 2023, 09:48 PM IST
    • ಬಾಬರ್ ಅಜಮ್ ನಾಯಕತ್ವದಲ್ಲಿ ಪಾಕಿಸ್ತಾನವು 42 ನೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಗೆದ್ದುಕೊಂಡಿದೆ
    • ಭಾರತದ ಅನುಭವಿ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯೊಂದನ್ನು ಮುರಿದಿದ್ದಾರೆ
    • ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕರ ಪೈಕಿ ಬಾಬರ್ ಅಜಮ್ ಜಂಟಿಯಾಗಿ ಅಗ್ರಸ್ಥಾನಕ್ಕೆ ತಲುಪಿದ್ದಾರೆ.
T20: ಧೋನಿಯ ದಾಖಲೆ ಉಡೀಸ್ ಮಾಡಿ ‘ಟಿ20 ಕಿಂಗ್’ ಪಟ್ಟ ಮುಡಿಗೇರಿಸಿಕೊಂಡ ಪಾಕಿಸ್ತಾನದ ಈ ಆಟಗಾರ! title=
Babar Azam

Pakistan vs New Zealand 2nd T20I: ಪಾಕಿಸ್ತಾನವು ಆತಿಥ್ಯ ವಹಿಸಿದ್ದ T20 ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ 38 ರನ್‌’ಗಳ ಸೋಲನ್ನು ಅನುಭವಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 4 ವಿಕೆಟ್‌ ನಷ್ಟಕ್ಕೆ 192 ರನ್ ಗಳಿಸಿದೆ. ಆ ಬಳಿಕ ಗೆಲುವಿನ ಬೆನ್ನತ್ತಿದ ನ್ಯೂಜಿಲೆಂಡ್ ತಂಡ 7 ವಿಕೆಟ್‌ ನಷ್ಟಕ್ಕೆ 154 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅಜೇಯ 101 ರನ್ ಗಳಿಸಿ ಪಂದ್ಯ ಶ್ರೇಷ್ಠರಾದರು. ಇದರ ಜೊತೆ ಭಾರತದ ಅನುಭವಿ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯ ದಿನ ಚಿನ್ನದ ವಿಚಾರದಲ್ಲಾಗಲಿದೆ ಈ ಬದಲಾವಣೆ! ಖರೀದಿಸುವಾಗ ನೆನಪಿರಲಿ ಈ ವಿಚಾರ

ಬಾಬರ್ ಅಜಮ್ ಅವರು ಭಾರತದ ಮಾಜಿ ನಾಯಕ ಮತ್ತು ಅನುಭವಿ ವಿಕೆಟ್ ಕೀಪರ್ ಎಂಎಸ್ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ. ಬಾಬರ್ ಅಜಮ್ ನಾಯಕತ್ವದಲ್ಲಿ ಪಾಕಿಸ್ತಾನವು 42 ನೇ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಗೆದ್ದುಕೊಂಡಿದೆ. ಇವರು ಇದುವರೆಗೆ 68 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನದ ನಾಯಕತ್ವ ವಹಿಸಿದ್ದು, ಈ ಪೈಕಿ 42 ಪಂದ್ಯಗಳನ್ನು ಗೆದ್ದಿದ್ದಾರೆ. 21 ಪಂದ್ಯಗಳಲ್ಲಿ ಸೋಲನುಭವಿಸಿದ್ದು, 5 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.

ಗೆಲುವಿನ ವಿಚಾರದಲ್ಲಿ 28ರ ಹರೆಯದ, ಟಿ20 ಅಂತಾರಾಷ್ಟ್ರೀಯ ಪಂದ್ಯದ ನಾಯಕ ಬಾಬರ್ ಅಜಮ್ ಧೋನಿಯನ್ನು ಹಿಂದಿಕ್ಕಿದ್ದಾರೆ. ಧೋನಿ ಭಾರತ ತಂಡವನ್ನು 72 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ್ದು, 41ರಲ್ಲಿ ಗೆಲುವು ಸಾಧಿಸಿದ್ದಾರೆ. ಅದರಲ್ಲಿ 32 ಪಂದ್ಯಗಳಲ್ಲಿ ಸೋಲನುಭವಿಸಿದರೆ ಒಂದು ಪಂದ್ಯ ಟೈ ಆಗಿದ್ದು, 2 ಪಂದ್ಯಗಳ ಫಲಿತಾಂಶ ಬಂದಿಲ್ಲ. ಬಾಬರ್ ಅಜಮ್ ಈಗ ವಿಶ್ವದ ಅತ್ಯಂತ ಯಶಸ್ವಿ ಟಿ20 ನಾಯಕನಾಗಲು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ.

ಇದನ್ನೂ ಓದಿ: MS Dhoni: ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಗೆ ಕಿಸ್ ಕೊಟ್ಟ ಈ ಸ್ಟಾರ್ ನಟಿಯ ಅತ್ತೆ! ಫೋಟೋ ನೋಡಿ

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕರ ಪೈಕಿ ಬಾಬರ್ ಅಜಮ್ ಜಂಟಿಯಾಗಿ ಅಗ್ರಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡಿನ ಮಾಜಿ ನಾಯಕ ಇಯಾನ್ ಮಾರ್ಗನ್ (42) ಮತ್ತು ಅಫ್ಘಾನಿಸ್ತಾನದ ಮಾಜಿ ನಾಯಕ ಅಸ್ಗರ್ ಸ್ಟಾನಿಕ್ಜೈ (42) ಸಹ ಅವರಿಗೆ ಸರಿಸಮಾನರಾಗಿದ್ದಾರೆ. ಪಾಕಿಸ್ತಾನ ತನ್ನ ಆತಿಥ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇನ್ನೂ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಬೇಕಿದೆ. ಈ ಮೂಲಕ ಬಾಬರ್ ಅಜಮ್ ಅವರಿಗೆ ವಿಶ್ವ ದಾಖಲೆ ಮಾಡುವ ಉತ್ತಮ ಅವಕಾಶ ಇದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News