ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವೋ ಪ್ರೋ ಕಬಡ್ಡಿ ಲೀಗ್‌ನ ಶನಿವಾರದ ಪಂದ್ಯಗಳಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಗುಜರಾತ್ ಜಯಂಟ್ಸ್ ತಂಡಗಳು ಜಯ ಗಳಿಸಿವೆ.
ದಿನದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ತೆಲುಗು ಟೈಟಾನ್ಸ್ ವಿರುದ್ಧ 51-27 ಅಂತರದಲ್ಲಿ ಜಯ ಗಳಿಸಿದರೆ, ಮೂರನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧ 42-38 ಅಂತರದಲ್ಲಿ ಜಯ ಗಳಿಸಿತು.
ಪ್ರಥಮಾರ್ಧದಲ್ಲಿ ಹಿನ್ನಡೆ ಕಂಡಿದ್ದ ಗುಜರಾತ್ ಜಯಂಟ್ಸ್ ದ್ವಿತಿಯಾರ್ಧದಲ್ಲಿ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಉತ್ತಮ ಪೈಪೋಟಿ ನೀಡಿತು. ರಾಕೇಶ್ ರೈಡಿಂಗ್‌ನಲ್ಲಿ 18 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಹರಿಯಾಣ ಸ್ಟೀಲರ್ಸ್ ಪರ ಮೀತು ಶರ್ಮಾ 16 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರುಮಾಡಲಾಗಲಿಲ್ಲ.
ಇದನ್ನೂ ಓದಿ: ʼಗಂಧದಗುಡಿʼ ರಿಸ್ಕ್, ಇದೇಲ್ಲ ಬೇಕಾ ಅಪ್ಪು ಎಂದಿದ್ದೆ.. ಅವರ ಉತ್ತರ ಅದ್ಭುತ..!
We asked Rakesh what 𝐞𝐤 𝐬𝐞 𝐛𝐡𝐚𝐥𝐞 𝐝𝐨 meant and he did this 🤯#vivoProKabaddi #HSvGG #FantasticPanga @GujaratGiants pic.twitter.com/HD3F536GOb
— ProKabaddi (@ProKabaddi) October 22, 2022
ಮೀತು ಶರ್ಮಾ (6) ಹಾಗೂ ಮಂಜೀತ್ (4) ಅದ್ಭುತ ರೈಡಿಂಗ್ ಜೊತೆಯಲ್ಲಿ ಜಯದೀಪ್ ದಹಿಯಾ (5) ಅವರ ಟ್ಯಾಕಲ್ ಅಂಕಗಳ ನೆರವಿನಿಂದ ಹರಿಯಾಣ ಸ್ಟೀಲರ್ಸ್ ತಂಡ ಗುಜರಾತ್ ಜಯಂಟ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 22-16 ಅಂತರದಲ್ಲಿ ಮುನ್ನಡೆದಿತ್ತು. ಗುಜರಾತ್ ಜಯಂಟ್ಸ್ ಪರ ನಾಯಕ ಚಂದ್ರನ್ ರಂಜಿತ್ ಹಾಗೂ ರಾಕೇಶ್ ತಲಾ 4 ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಇತ್ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು. ಆದರೆ ರೈಡಿಂಗ್ ಮತ್ತು ಟ್ಯಾಕಲ್‌ನಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಹರಿಯಾಣ ಸ್ಟೀಲರ್ಸ್ ಮುನ್ನಡೆ ಕಂಡಿತು.
ಪ್ಯಾಂಥರ್ಸ್‌ಗೆ ಬೃಹತ್ ಜಯ
ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 51-27 ಅಂತರದಲ್ಲಿ ಜಯ ಗಳಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ವಿವೋ ಪ್ರೊ ಕಬಡ್ಡಿ ಲೀಗ್‌ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಜೈಪುರ ತಂಡದ ಪರ ಅರ್ಜುನ್ ದೇಶ್ವಾಲ್ 12 ಅಂಕಗಳನ್ನು ಗಳಿಸಿ ತಂಡದ ಬೃಹತ್ ಜಯಕ್ಕೆ ನೆರವಾದರು. ರಾಹುಲ್ ಚೌಧರಿ ಕೂಡ 8 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಸಾಹುಲ್ ಹಾಗೂ ಅಂಕುಶ್ ಟ್ಯಾಕಲ್‌ನಲ್ಲಿ ಒಟ್ಟು 12 ಅಂಕಗಳನ್ನು ಗಳಿಸಿದ್ದು ತಂಡದ ಯಶಸ್ಸಿನ ಪ್ರಮುಖ ಹೈಲೈಟ್ಸ್ ಆಗಿತ್ತು. ಟೈಟಾನ್ಸ್ ಪರ ಆದರ್ಶ್ (9) ಹಾಗೂ ಮೊನು ಗೋಯತ್ (5) ರೈಡಿಂಗ್‌ನಲ್ಲಿ ಮಿಂಚಿದರೂ ಇತರರ ಆಟಗಾರರ ಬೆಂಬಲ ಇರಲಿಲ್ಲ.
ಇದನ್ನೂ ಓದಿ: ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ: ಹೆಂಡತಿ ಪೊಲೀಸ್ ವಶಕ್ಕೆ
ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 29-10 ಅಂಕಗಳ ಅಂತರದಲ್ಲಿ ಬೃಹತ್ ಮುನ್ನಡೆ ಕಂಡಿತ್ತು. ಅರ್ಜುನ್ ದೇಶ್ವಾಲ್ ಹಾಗೂ ರಾಹುಲ್ ಚೌಧರಿ ರೈಡಿಂಗ್‌ನಲ್ಲಿ ತಲಾ 7 ಅಂಕಗಳನ್ನು ಗಳಿಸಿ ಬೃಹತ್ ಮುನ್ನಡೆಗೆ ನೆರವಾದರು. ಟ್ಯಾಕಲ್‌ನಲ್ಲಿ ಸಾಹುಲ್ ಕುಮಾರ್ 4 ಅಂಕಗಳನ್ನು ಗಳಿಸಿದರು. ತೆಲುಗು ಟೈಟಾನ್ಸ್ ಪರ ಮೊನು ಗೋಯತ್ ರೈಡಿಂಗ್‌ನಲ್ಲಿ 4 ಅಂಕಗಳನ್ನು ಗಳಿಸಿದರು. ಜೈಪುರ ಪಿಂಕ್ ಪ್ಯಾಂಥರ್ಸ್ ಒಟ್ಟು 17 ರೈಡಿಂಗ್ ಅಂಕ ಹಾಗೂ 7 ಟ್ಯಾಕಲ್ ಅಂಕಗಳನ್ನು ಗಳಿಸಿ ಪ್ರಭುತ್ವ ಸಾಧಿಸಿತು. ಎದುರಾಳಿ ತಂಡವನ್ನು ಎರಡು ಬಾರಿ ಆಲೌಟ್ ಮಾಡುವ ಮೂಲಕ ಜಯಕ್ಕೆ ಅಗತ್ಯವಿರುವ ವೇದಿಕೆಯನ್ನು ಪ್ರಥಮಾರ್ಧದಲ್ಲೇ ನಿರ್ಮಿಸಿಕೊಂಡಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ