ಟೆಸ್ಟ್ ಕ್ರಿಕೆಟ್’ನಲ್ಲಿ ಕಪಿಲ್ ದೇವ್’ರಿಂದಲೂ ಅಸಾಧ್ಯವಾದ ಶ್ರೇಷ್ಠ ದಾಖಲೆ ಬರೆಯಲಿದ್ದಾರೆ ಅಶ್ವಿನ್!

R Ashwin News: ಭಾರತದ ಮಾಜಿ ನಾಯಕ ಹಾಗೂ ಆಲ್ ರೌಂಡರ್ ಕಪಿಲ್ ದೇವ್ ಕೂಡ ತಮ್ಮ ಇಡೀ ವೃತ್ತಿಜೀವನದಲ್ಲಿ ಮಾಡಲು ಸಾಧ್ಯವಾಗದಂತಹ ಶ್ರೇಷ್ಠ ದಾಖಲೆಯನ್ನು ರವಿಚಂದ್ರನ್ ಅಶ್ವಿನ್ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾಡಲಿದ್ದಾರೆ.

Written by - Bhavishya Shetty | Last Updated : Jul 12, 2023, 07:24 AM IST
    • ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ
    • ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೊದಲ ಟೆಸ್ಟ್ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಲಿದ್ದಾರೆ
    • ಅಶ್ವಿನ್ 3 ವಿಕೆಟ್ ಪಡೆದರೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 700 ವಿಕೆಟ್ ಪೂರೈಸಲಿದ್ದಾರೆ
ಟೆಸ್ಟ್ ಕ್ರಿಕೆಟ್’ನಲ್ಲಿ ಕಪಿಲ್ ದೇವ್’ರಿಂದಲೂ ಅಸಾಧ್ಯವಾದ ಶ್ರೇಷ್ಠ ದಾಖಲೆ ಬರೆಯಲಿದ್ದಾರೆ ಅಶ್ವಿನ್!  title=
test cricket

IND vs WI, 1st Test: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ಡೊಮಿನಿಕಾದಲ್ಲಿ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ನಡೆಯಲಿದೆ. ಟೀಂ ಇಂಡಿಯಾದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೊದಲ ಟೆಸ್ಟ್ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಲಿದ್ದಾರೆ.

ಇದನ್ನೂ ಓದಿ: Viral News: ಆರತಕ್ಷತೆ ವೇಳೆ ಮಾವನಿಂದ 3 ಕಂಡೀಷನ್, ‘ನಿನ್ನ ಮಗಳೇ ಬೇಡ’ವೆಂದು ಎಸ್ಕೇಪ್ ಆದ ವರ!

ಭಾರತದ ಮಾಜಿ ನಾಯಕ ಹಾಗೂ ಆಲ್ ರೌಂಡರ್ ಕಪಿಲ್ ದೇವ್ ಕೂಡ ತಮ್ಮ ಇಡೀ ವೃತ್ತಿಜೀವನದಲ್ಲಿ ಮಾಡಲು ಸಾಧ್ಯವಾಗದಂತಹ ಶ್ರೇಷ್ಠ ದಾಖಲೆಯನ್ನು ರವಿಚಂದ್ರನ್ ಅಶ್ವಿನ್ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾಡಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 700 ವಿಕೆಟ್ ಪೂರೈಸಲಿದ್ದಾರೆ. ಇದುವರೆಗೆ ಭಾರತ ಪರ ಅಂತರಾಷ್ಟ್ರೀಯ ಕ್ರಿಕೆಟ್‌ ನಲ್ಲಿ 700ಕ್ಕೂ ಹೆಚ್ಚು ವಿಕೆಟ್‌ ಗಳನ್ನು ಪಡೆಯಲು ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಮಾತ್ರ ಶಕ್ತರಾಗಿದ್ದಾರೆ. ಭಾರತದ ಮಾಜಿ ನಾಯಕ ಮತ್ತು ಆಲ್ ರೌಂಡರ್ ಕಪಿಲ್ ದೇವ್ ಕೂಡ ತಮ್ಮ ಇಡೀ ವೃತ್ತಿಜೀವನದಲ್ಲಿ 700 ಅಂತರಾಷ್ಟ್ರೀಯ ವಿಕೆಟ್ ಕಬಳಿಸಲು ಸಾಧ್ಯವಾಗಿಲ್ಲ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ದಾಖಲೆ:

ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ 700ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತದ ಮೂರನೇ ಬೌಲರ್ ಆಗಲಿದ್ದಾರೆ. ಪ್ರಸ್ತುತ, ರವಿಚಂದ್ರನ್ ಅಶ್ವಿನ್ ಟೆಸ್ಟ್, ODI ಮತ್ತು T20 ಅಂತರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಒಟ್ಟು 697 ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರೆ ಅಂತರಾಷ್ಟ್ರೀಯ ಕ್ರಿಕೆಟ್‌ ನಲ್ಲಿ 700 ವಿಕೆಟ್ ಪೂರೈಸಲಿದ್ದಾರೆ. ಅನಿಲ್ ಕುಂಬ್ಳೆ ಭಾರತದ ಪರ ಗರಿಷ್ಠ 956 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. 711 ಅಂತಾರಾಷ್ಟ್ರೀಯ ವಿಕೆಟ್‌ ಗಳನ್ನು ಕಬಳಿಸಿದ ಹರ್ಭಜನ್ ಸಿಂಗ್ ಅವರ ಹೆಸರು ಎರಡನೇ ಸ್ಥಾನದಲ್ಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್

1. ಅನಿಲ್ ಕುಂಬ್ಳೆ - 956 ವಿಕೆಟ್

2. ಹರ್ಭಜನ್ ಸಿಂಗ್ - 711 ವಿಕೆಟ್

3. ರವಿಚಂದ್ರನ್ ಅಶ್ವಿನ್ - 697 ವಿಕೆಟ್

4. ಕಪಿಲ್ ದೇವ್ - 687 ವಿಕೆಟ್

 

ಟೆಸ್ಟ್ ಕ್ರಿಕೆಟ್‌ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ

1. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 800 ಟೆಸ್ಟ್ ವಿಕೆಟ್‌ಗಳು

2. ಶೇನ್ ವಾರ್ನ್ (ಆಸ್ಟ್ರೇಲಿಯಾ) - 708 ಟೆಸ್ಟ್ ವಿಕೆಟ್

3. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) - 688 ಟೆಸ್ಟ್ ವಿಕೆಟ್

4. ಅನಿಲ್ ಕುಂಬ್ಳೆ (ಭಾರತ) - 619 ಟೆಸ್ಟ್ ವಿಕೆಟ್‌ಗಳು

5. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) - 598 ಟೆಸ್ಟ್ ವಿಕೆಟ್

6. ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) - 563 ಟೆಸ್ಟ್ ವಿಕೆಟ್‌ಗಳು

7. ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್) - 519 ಟೆಸ್ಟ್ ವಿಕೆಟ್

8. ನಾಥನ್ ಲಿಯಾನ್ (ಆಸ್ಟ್ರೇಲಿಯಾ) - 496 ಟೆಸ್ಟ್ ವಿಕೆಟ್

9. ರವಿಚಂದ್ರನ್ ಅಶ್ವಿನ್ (ಭಾರತ) - 474 ಟೆಸ್ಟ್ ವಿಕೆಟ್

 

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್

1. ಅನಿಲ್ ಕುಂಬ್ಳೆ - 619 ಟೆಸ್ಟ್ ವಿಕೆಟ್

2. ರವಿಚಂದ್ರನ್ ಅಶ್ವಿನ್ - 474 ಟೆಸ್ಟ್ ವಿಕೆಟ್

3. ಕಪಿಲ್ ದೇವ್ - 434 ಟೆಸ್ಟ್ ವಿಕೆಟ್

4. ಹರ್ಭಜನ್ ಸಿಂಗ್ - 417 ಟೆಸ್ಟ್ ವಿಕೆಟ್

5. ಇಶಾಂತ್ ಶರ್ಮಾ/ಜಹೀರ್ ಖಾನ್ - 311 ಟೆಸ್ಟ್ ವಿಕೆಟ್

ಇದನ್ನೂ ಓದಿ: ಈ ರಾಶಿಯವರ ಜಾತಕದಲ್ಲಿ ಕೇಂದ್ರ ತ್ರಿಕೋನ ರಾಜಯೋಗ ! ಇನ್ನು ಇವರ ಜೀವನದಲ್ಲಿ ಹಣದ ಕೊರತೆ ಇರುವುದೇ ಇಲ್ಲ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News