ಬ್ರಿಸ್ಬೇನ್: ಇಂಗ್ಲೆಂಡ್ ಪ್ರವಾಸದ ವೇಳೆ ಭಾರತವು ತಂಡವು ಕೆಲವು ತಪ್ಪುಗಳನ್ನು ಮಾಡಿತು, ಆದರೆ ಅದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಪುನರಾವರ್ತನೆಯಾಗುವುದಿಲ್ಲವೆಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.
ಆಸ್ಟ್ರೇಲಿಯಾ ವಿರುದ್ಧ ಬುಧವಾರ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ 20 ಸರಣಿಯೊಂದಿಗೆ ಭಾರತ ಪ್ರವಾಸವನ್ನು ಆರಂಭಿಸಲಿದೆ. ತದನಂತರ ನಾಲ್ಕು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಆಡಲಿದೆ. ಭಾರತವು ವಿದೇಶಿ ಪ್ರವಾಸದಲ್ಲಿ ಹೀನಾಯ ಕಳಪೆ ಪ್ರದರ್ಶನ ನೀಡುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಅದು ಇಂಗ್ಲೆಂಡ್ ವಿರುದ್ದ ಸರಣಿಯಲ್ಲಿ ಸೋಲನ್ನು ಅನುಭವಿಸಿತ್ತು. ಬರುವ ಡಿಸೆಂಬರ್ 6 ರಿಂದ ಆಸ್ಟ್ರೇಲಿಯಾ ವಿರುದ್ದ ಅಡಿಲೇಡ್ ನಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿರಾಟ್ ಕೊಹ್ಲಿ " ಇಂಗ್ಲೆಂಡ್ ನಲ್ಲಿ ನಾವು ಹಲವಾರು ತಪ್ಪುಗಳನ್ನು ಮಾಡಿದೆವು.ಆದರೆ ಕ್ರಿಕೆಟ್ ನ ಗುಣಮಟ್ಟ ಅಧಿಕವಾಗಿತ್ತು,ಇನ್ನೊಂದೆಡೆ ಹಲವು ತಪ್ಪುಗಳು ಕೂಡ ಇದ್ದವು. ಇದೇ ಕಾರಣದಿಂದ ನಾವು ಸೋಲನ್ನು ಅನುಭವಿಸಿದೆವು" ಎಂದು ಕೊಹ್ಲಿ ತಿಳಿಸಿದರು.