ಕಪಿಲ್ ದೇವ್ ರ 83 'ನಟರಾಜ್ ಶಾಟ್' ನೆನಪಿಸಿದ ರಣವೀರ್ ಸಿಂಗ್

ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರ ಜೀವನ ಚರಿತ್ರೆ ಕುರಿತ ಸಿನಿಮಾದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಈಗ ಪ್ರಸಿದ್ದ ನಟರಾಜ್ ಶಾಟ್ ಪೋಸ್ ನೀಡಿರುವ ಫೋಟೋವೊಂದನ್ನು ಈಗ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Last Updated : Nov 11, 2019, 02:49 PM IST
ಕಪಿಲ್ ದೇವ್ ರ 83 'ನಟರಾಜ್ ಶಾಟ್' ನೆನಪಿಸಿದ ರಣವೀರ್ ಸಿಂಗ್ title=
Photo courtesy: Twitter

ನವದೆಹಲಿ: ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರ ಜೀವನ ಚರಿತ್ರೆ ಕುರಿತ ಸಿನಿಮಾದಲ್ಲಿ ನಟಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಈಗ ಪ್ರಸಿದ್ದ ನಟರಾಜ್ ಶಾಟ್ ಪೋಸ್ ನೀಡಿರುವ ಫೋಟೋವೊಂದನ್ನು ಈಗ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಪಿಲ್ ದೇವ್, ರಣವೀರ್ ಸಿಂಗ್ ಅವರ ಪೋಸ್ಟ್ ಅನ್ನು ರಿಟ್ವೀಟ್ ಮಾಡಿ "ಹ್ಯಾಟ್ಸ್ ಆಫ್ ರಣವೀರ್!" ಎಂದು ಬರೆದಿದ್ದಾರೆ. ರಣವೀರ್ ಅವರು ಮೇ ತಿಂಗಳ ಕೊನೆಯಲ್ಲಿ "ಕಪಿಲ್ಸ್ ಡೆವಿಲ್ಸ್" ಅನ್ನು ಪರಿಚಯಿಸಿದಾಗಿನಿಂದಲೂ ಆ ಪಾತ್ರಕ್ಕೆ ತಾವು ಪರಿಪೂರ್ಣ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಇದಕ್ಕಾಗಿ ಅವರು ಹಲವು ರೀತಿಯ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ. 

ರಣವೀರ್ ಸಿಂಗ್ ಲಂಡನ್ ನಲ್ಲಿ ಹಲವು ದಿನಗಳು ಕಾಲ ತಂಗಿ ಅಲ್ಲಿ ಏಸ್ ಕ್ರಿಕೆಟಿಗರಿಂದ ಟಿಪ್ಪಣಿಗಳನ್ನು ಕಲೆ ಹಾಕಿದ್ದಾರೆ. ಇದೇ ಜೂನ್‌ನಲ್ಲಿ, ಹಿಮಾಚಲ ಪ್ರದೇಶದ ಸುಂದರ ಪಟ್ಟಣವಾದ ಧರ್ಮಶಾಲಾದಲ್ಲಿ ಅವರು ಜಿಮ್‌ನಲ್ಲಿ ಕೆಲಸ ಮಾಡುತ್ತಿರುವುದು ಮತ್ತು ಕ್ರಿಕೆಟ್ ಪಿಚ್‌ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿದ್ದರು

ಈ ಚಿತ್ರದಲ್ಲಿ ಆರ್ ಬದ್ರೀ, ಹಾರ್ಡಿ ಸಂಧು, ಚಿರಾಗ್ ಪಾಟೀಲ್, ಸಾಕಿಬ್ ಸಲೀಮ್, ಪಂಕಜ್ ತ್ರಿಪಾಠಿ, ತಾಹಿರ್ ಭಾಸಿನ್, ಅಮ್ಮಿ ವಿರ್ಕ್, ಮತ್ತು ಸಾಹಿಲ್ ಖಟ್ಟರ್ ಅವರು ಮೆನ್ ಇನ್ ಬ್ಲೂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಬೀರ್ ಖಾನ್ ಅವರ ಈ ಚಿತ್ರ ಮುಂದಿನ ವರ್ಷ ಏಪ್ರಿಲ್ 10 ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ.

Trending News