ರೋಹಿತ್ ಶರ್ಮಾ ಹೇಳಿಕೆಗೆ ತಲೆ ಕೆಡಿಸಿಕೊಂಡ ಪಾಕಿಸ್ತಾನದ ಆಟಗಾರನ ಬಾಯಿಯಿಂದ ಬಂತು ಇಂಥಹ ಮಾತು

ಮೊಹಾಲಿ ಟೆಸ್ಟ್‌ನಲ್ಲಿ ಅದ್ಭುತ ಗೆಲುವಿನ ನಂತರ ನಾಯಕ ರೋಹಿತ್ ಶರ್ಮಾ ಆರ್ ಅಶ್ವಿನ್ ಅವರನ್ನು ಹೊಗಳಿದ್ದಾರೆ. ರೋಹಿತ್ ಹೇಳಿಕೆಗೆ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಪ್ರತಿಕ್ರಿಯೆ ನೀಡಿದ್ದಾರೆ.

Written by - Ranjitha R K | Last Updated : Mar 10, 2022, 11:50 AM IST
  • ರೋಹಿತ್ ಹೇಳಿಕೆಗೆ ರಶೀದ್ ಲತೀಫ್ ಉತ್ತರ
  • ಮೊದಲ ಟೆಸ್ಟ್ ಬಳಿಕ ಮೆಚ್ಚುಗೆ ವ್ಯಕ್ತಪಡಿಸಿದ್ದ ರೋಹಿತ್ ಶರ್ಮಾ
  • ಕಪಿಲ್ ದೇವ್ ದಾಖಲೆ ಮುರಿದ ಅಶ್ವಿನ್
ರೋಹಿತ್ ಶರ್ಮಾ ಹೇಳಿಕೆಗೆ ತಲೆ ಕೆಡಿಸಿಕೊಂಡ ಪಾಕಿಸ್ತಾನದ ಆಟಗಾರನ ಬಾಯಿಯಿಂದ ಬಂತು ಇಂಥಹ ಮಾತು   title=
ರೋಹಿತ್ ಹೇಳಿಕೆಗೆ ರಶೀದ್ ಲತೀಫ್ ಉತ್ತರ (file photo)

ನವದೆಹಲಿ : ಶ್ರೀಲಂಕಾ ವಿರುದ್ಧದ ಮೊಹಾಲಿ ಟೆಸ್ಟ್ ಪಂದ್ಯವನ್ನು ಭಾರತ ಕೇವಲ 3 ದಿನಗಳಲ್ಲಿ ಗೆದ್ದುಕೊಂಡಿದೆ. ಈ ಪಂದ್ಯದ ಹೀರೋ ಆಗಿದ್ದು ರವೀಂದ್ರ ಜಡೇಜಾ (Ravindra Jadeja). ಈ ಪಂದ್ಯದಲ್ಲಿ, ಟೀಂ ಇಂಡಿಯಾದ (Team India) ಆಫ್ ಸ್ಪಿನ್ನರ್ ಆರ್ ಅಶ್ವಿನ್ ( R Ashwin) ಅವರು ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಕಬಳಿಸುವ ವಿಷಯದಲ್ಲಿ ಕಪಿಲ್ ದೇವ್ (Kapil Dev)ಅವರನ್ನು ಹಿಂದಿಕ್ಕಿದ್ದಾರೆ. ಭಾರತದ ಪರ ಟೆಸ್ಟ್‌ಗಳಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈ ಸಾಧನೆಯ ಬಗ್ಗೆ, ಭಾರತೀಯ ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ರವಿಚಂದ್ರನ್ ಅಶ್ವಿನ್ ಅವರನ್ನು ಹೊಗಳಿ ಹೇಳಿಕೆ ನೀಡಿದ್ದರು. ಆದರೆ ರೋಹಿತ್ ಹೇಳಿಕೆಗೆ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 ಭಾರತೀಯ ಆಟಗಾರ ದಾಖಲೆ ಮಾಡಿದ್ದಾರೆ. ಅವರ ಸಾಧನೆಯನ್ನು ಟೀಂ ಇಂಡಿಯಾ ನಾಯಕ ಹೊಗಳಿದ್ದಾರೆ. ಆದರೆ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಗೆ (Rashid Lathif) ಇದರಿಂದ ಅದೇನು ಕಷ್ಟ ಆಗಿದೆಯೋ ಗೊತ್ತಿಲ್ಲ. ರೋಹಿತ್ ಶರ್ಮಾ (Rohit Sharma) ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಲತೀಫ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, 'ಅಶ್ವಿನ್ ಅದ್ಭುತ ಬೌಲರ್ ಎಂಬುದರಲ್ಲಿ ಸಂದೇಹವಿಲ್ಲ. ಎಸ್‌ಜಿ ಬಾಲ್‌ನೊಂದಿಗೆ ಅಶ್ವಿನ್ ಅವರ ಪ್ರದರ್ಶನವನ್ನು ನೋಡುವುದಾದರೆ ಅವರು ಭಾರತದ ಅತ್ಯುತ್ತಮ ಸ್ಪಿನ್ನರ್ ಎಂಬುದರಲ್ಲಿ ಸಂದೇಹವಿಲ್ಲ. ಆದರೂ,  ವಿದೇಶೀಯ ಪರಿಸ್ಥಿತಿಗಳಿಗೆ ಇದನ್ನೂ ಹೋಲಿಸಿದರೆ, ಅವರು ಪರಿಪೂರ್ಣರು ಎಂದು ಹೇಳುವುದು ಸಾಧ್ಯವಿಲ್ಲ.  ಅಶ್ವಿನ್ (R Ashwin) ಬಗ್ಗೆ ರೋಹಿತ್ ಶರ್ಮಾ ನೀಡುವ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಬಹುಶಃ ರೋಹಿತ್ ಶರ್ಮಾ ಬಾಯಿ ತಪ್ಪಿ ಈ ಮಾತುಗಳನ್ನು ಆಡಿರಬೇಕು ಅಥವಾ ತನ್ನ ತಂಡದ ಆಟಗಾರರನ್ನು ಹುರಿದುಂಬಿಸುವ ರೀತಿಯಾಗಿರಬಹುದು ಎಂದು ಹೇಳಿದ್ದಾರೆ. 

ಇದನ್ನೂ ಓದಿ : Team India: ಡೇ-ನೈಟ್ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾಕ್ಕೆ ಮಾರಣಾಂತಿಕ ಬೌಲರ್ ಎಂಟ್ರಿ! ಶ್ರೀಲಂಕಾ ಪಾಳಯದಲ್ಲಿ ಸಂಚಲನ

ಕಪಿಲ್ ದೇವ್ ದಾಖಲೆ ಮುರಿದ ಅಶ್ವಿನ್ : 
ಮೊಹಾಲಿಯ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಶ್ರೀಲಂಕಾದ ಬ್ಯಾಟ್ಸ್‌ಮನ್ ಚರಿತ್ ಅಸಲಂಕಾ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ 436 ವಿಕೆಟ್‌ಗಳನ್ನು ಪತನ್ನ ಖಾತೆಗೆ ಸೇರಿಸಿಕೊಂಡಿದ್ದಾರೆ (R Ashwin Records). ಈ ಪಂದ್ಯಕ್ಕೂ ಮುನ್ನ ಅಶ್ವಿನ್ ಕಪಿಲ್ ದೇವ್ ದಾಖಲೆಗಿಂತ 4 ವಿಕೆಟ್ ಹಿಂದೆ ಇದ್ದರು. ಆದರೆ ಮೊಹಾಲಿ ಟೆಸ್ಟ್ ನಲ್ಲಿ ಅಶ್ವಿನ್ 6 ವಿಕೆಟ್ ಕಬಳಿಸಿ ಕಪಿಲ್ ದೇವ್ ದಾಖಲೆಯನ್ನು  ಮುರಿದಿದ್ದಾರೆ( Kapil Dev Records). ಕಪಿಲ್ ದೇವ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 434 ವಿಕೆಟ್ ಪಡೆದಿದ್ದಾರೆ. ಭಾರತ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸುವ ವಿಚಾರದಲ್ಲಿ ಈಗ ಅಶ್ವಿನ್‌ಗಿಂತ ಅನಿಲ್ ಕುಂಬ್ಳೆ ಮುಂದಿದ್ದಾರೆ. 

ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಸಾಧನೆ :
ಅಶ್ವಿನ್ 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಇದುವರೆಗೆ ಅಶ್ವಿನ್ ಭಾರತ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅಶ್ವಿನ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 436 ವಿಕೆಟ್‌ಗಳನ್ನು ಪಡೆದಿದ್ದಾರೆ. ಭಾರತದ ಪರ ಟೆಸ್ಟ್‌ಗಳಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ಇದನ್ನೂ ಓದಿ : India vs Pakistan: ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಕುರಿತಂತೆ ಬಿಗ್ ನ್ಯೂಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News