Ravi Shastri On Hardik Pandya : ಹಾರ್ದಿಕ್ ಪಾಂಡ್ಯ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ರವಿಶಾಸ್ತ್ರಿ..!

ಇದೀಗ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹಾರ್ದಿಕ್ ಪಾಂಡ್ಯ ಬಗ್ಗೆ ಆಘಾತಕಾರಿ ಹೇಳಿಕೆಯೊಂದನ್ನ ನೀಡಿದ್ದಾರೆ.

Written by - Channabasava A Kashinakunti | Last Updated : Jul 24, 2022, 01:35 PM IST
  • ಟೆಸ್ಟ್ ಕ್ರಿಕೆಟ್ ಬಗ್ಗೆ ರವಿಶಾಸ್ತ್ರಿ ಹೇಳಿದ್ದು ಹೀಗೆ
  • ಆಘಾತಕಾರಿ ಹೇಳಿಕೆ ನೀಡಿದ ರವಿಶಾಸ್ತ್ರಿ!
  • ಭರ್ಜರಿ ಪುನರಾಗಮನ ಮಾಡಿದ ಹಾರ್ದಿಕ್ ಪಾಂಡ್ಯ
Ravi Shastri On Hardik Pandya : ಹಾರ್ದಿಕ್ ಪಾಂಡ್ಯ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ರವಿಶಾಸ್ತ್ರಿ..! title=

Ravi Shastri On Hardik Pandya : ಇತ್ತೀಚಿಗೆ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು, ಪ್ರಸ್ತುತ ದಿನಗಳಲ್ಲಿ  ದ್ವಿಪಕ್ಷೀಯ ಸರಣಿಗಳು ಹೆಚ್ಚಿವೆ. ಇದರಿಂದಾಗಿ ಕ್ರಿಕೆಟಿಗರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹಾರ್ದಿಕ್ ಪಾಂಡ್ಯ ಬಗ್ಗೆ ಆಘಾತಕಾರಿ ಹೇಳಿಕೆಯೊಂದನ್ನ ನೀಡಿದ್ದಾರೆ.

ಟೆಸ್ಟ್ ಕ್ರಿಕೆಟ್ ಬಗ್ಗೆ ರವಿಶಾಸ್ತ್ರಿ ಹೇಳಿದ್ದು ಹೀಗೆ

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರವಿಶಾಸ್ತ್ರಿ, 'ಆಟದ ಪ್ರಾಮುಖ್ಯತೆಯಿಂದಾಗಿ ಟೆಸ್ಟ್ ಕ್ರಿಕೆಟ್ ಯಾವಾಗಲೂ ಉಳಿಯುತ್ತದೆ. ನೀವು ಈಗಾಗಲೇ ಆಟಗಾರರು ಯಾವ ಸ್ವರೂಪಗಳನ್ನು ಆಡಲು ಬಯಸುತ್ತಾರೆ ಎಂಬುದನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಹಾರ್ದಿಕ್ ಪಾಂಡ್ಯ ಅವರನ್ನು ತೆಗೆದುಕೊಳ್ಳಿ, ಅವರು ಟಿ 20 ಕ್ರಿಕೆಟ್ ಆಡಲು ಬಯಸುತ್ತಾರೆ ಮತ್ತು 'ನಾನು ಬೇರೆ ಏನನ್ನೂ ಆಡಲು ಬಯಸುವುದಿಲ್ಲ' ಎಂಬುದು ಅವರ ಮನಸ್ಸಿನಲ್ಲಿ ಬಹಳ ಸ್ಪಷ್ಟವಾಗಿದೆ ಎಂದರು.

ಇದನ್ನೂ ಓದಿ : ಭಾರತ-ವೆಸ್ಟ್‌ ಇಂಡೀಸ್‌ 2ನೇ ಏಕದಿನ ಪಂದ್ಯ: ಧವನ್‌ ನಾಯಕತ್ವದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಈ ಆಟಗಾರ

ಆಘಾತಕಾರಿ ಹೇಳಿಕೆ ನೀಡಿದ ರವಿಶಾಸ್ತ್ರಿ!

ಹಾರ್ದಿಕ್ ಪಾಂಡ್ಯ ಕುರಿತು ಮಾತನಾಡಿದ ರವಿಶಾಸ್ತ್ರಿ, 'ಹಾರ್ದಿಕ್ ಪಾಂಡ್ಯ 50 ಓವರ್ ಕ್ರಿಕೆಟ್ ಆಡಲಿದ್ದಾರೆ, ಏಕೆಂದರೆ ಮುಂದಿನ ವರ್ಷ ಭಾರತದಲ್ಲಿ ವಿಶ್ವಕಪ್ ಇದೆ. ಅದರ ನಂತರ ಅವರು ಅಲ್ಲಿಂದ ಹೊರಟು ಹೋಗುವುದನ್ನು ಸಹ ನೀವು ನೋಡಬಹುದು. ಇತರ ಆಟಗಾರರಿಗೆ ಅದೇ ರೀತಿ ಆಗುವುದನ್ನು ನೀವು ನೋಡುತ್ತೀರಿ, ಅವರು ಸ್ವರೂಪಗಳನ್ನು ಆಯ್ಕೆ ಮಾಡಲು ಪ್ರಾರಂಭಿಸುತ್ತಾರೆ, ಅದನ್ನು ಮಾಡಲು ಅವರಿಗೆ ಎಲ್ಲ ಹಕ್ಕಿದೆ. ವಿಶ್ವಕಪ್ ಬಳಿಕ ಅವರು ಏಕದಿನ ಮಾದರಿಗೆ ವಿದಾಯ ಹೇಳಬಹುದು ಎಂದು ಹೇಳಿದ್ದಾರೆ.

ಇನ್ನು ಮುಂದುವರೆದು ಮಾತನಾಡಿದ ರವಿಶಾಸ್ತ್ರಿ, '50 ಓವರ್‌ಗಳ ಸ್ವರೂಪವನ್ನು ಹಿಂದಕ್ಕೆ ತಳ್ಳಬಹುದು, ಆದರೆ ನೀವು ವಿಶ್ವಕಪ್‌ನತ್ತ ಮಾತ್ರ ಗಮನಹರಿಸಿದರೆ ಟೀಂನಲ್ಲಿ ಇನ್ನೂ ಉಳಿಯಬಹುದು. ಐಸಿಸಿ ದೃಷ್ಟಿಕೋನದಿಂದ, ವಿಶ್ವಕಪ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು, ಅದು ಟಿ 20 ವಿಶ್ವಕಪ್ ಅಥವಾ 50 ಓವರ್‌ಗಳ ವಿಶ್ವಕಪ್ ಆಗಿರಬಹುದು ಎಂದು ಹೇಳಿದ್ದಾರೆ.

ಭರ್ಜರಿ ಪುನರಾಗಮನ ಮಾಡಿದ ಹಾರ್ದಿಕ್ ಪಾಂಡ್ಯ 

ಹಾರ್ದಿಕ್ ಪಾಂಡ್ಯ ಬಹಳ ದಿನಗಳ ನಂತರ ಟೀಂ ಇಂಡಿಯಾಗೆ ಮರಳಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಬಾಲ್ ಮತ್ತು ಬ್ಯಾಟಿಂಗ್ ನಲ್ಲಿ ಅದ್ಭುತ ಆಟ ಪ್ರದರ್ಶಿಸಿದರು. ಅವರ ಪ್ರದರ್ಶನದಿಂದಾಗಿ, ಅವರು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಐಪಿಎಲ್ 2022 ರಲ್ಲಿ, ಗುಜರಾತ್ ಟೈಟಾನ್ಸ್ ನ ನಾಯಕತ್ವದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ, ಆದರೆ ಅವರು ಟೆಸ್ಟ್ ಕ್ರಿಕೆಟ್‌ನಿಂದ ಹೊರಗುಳಿಯುತ್ತಿದ್ದಾರೆ.

ಇದನ್ನೂ ಓದಿ : ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ: ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News