ICC Test Rankings : ಐಸಿಸಿ ಟೆಸ್ಟ್  ರ್‍ಯಾಂಕಿಂಗ್‌ನಲ್ಲಿ ನಂ- 1 ಬೌಲರ್ ಟೀಂ ಇಂಡಿಯಾದ ಈ ಆಟಗಾರ!

ICC Test Rankings : ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇತ್ತೀಚಿನ ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್‌ ಬಿಡುಗಡೆ ಮಾಡಿದೆ. ಈ ರ್‍ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾದ ಆಟಗಾರ ನಂಬರ್-1 ಟೆಸ್ಟ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

Written by - Channabasava A Kashinakunti | Last Updated : Mar 15, 2023, 04:45 PM IST
  • ಈ ಆಟಗಾರ ಟೆಸ್ಟ್‌ನಲ್ಲಿ ನಂಬರ್-1 ಬೌಲರ್
  • ಅಶ್ವಿನ್ ಟೀಂ ಇಂಡಿಯಾದ ಸರಣಿ ಗೆಲುವಿನ ಹೀರೋ
  • ಆರ್ ಅಶ್ವಿನ್ ಅವರಿಂದ ಅದ್ಭುತ ಅಂಕಿಅಂಶಗಳು
ICC Test Rankings : ಐಸಿಸಿ ಟೆಸ್ಟ್  ರ್‍ಯಾಂಕಿಂಗ್‌ನಲ್ಲಿ ನಂ- 1 ಬೌಲರ್ ಟೀಂ ಇಂಡಿಯಾದ ಈ ಆಟಗಾರ! title=

Latest ICC Test Rankings : ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇತ್ತೀಚಿನ ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್‌ ಬಿಡುಗಡೆ ಮಾಡಿದೆ. ಈ ರ್‍ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾದ ಆಟಗಾರ ನಂಬರ್-1 ಟೆಸ್ಟ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಭಾರತದ ಈ ಬೌಲರ್ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಹಿಂದಿಕ್ಕಿ ದಾಖಲೆ ಬರೆದಿದ್ದರೆ. ಈ ಆಟಗಾರ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್ ಸರಣಿಯಲ್ಲಿ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು. ಹಾಗಿದ್ರೆ ಈ ಆಟಗಾರ ಯಾರು? ಇಲ್ಲಿದೆ ಮಾಹಿತಿ..

ಈ ಆಟಗಾರ ಟೆಸ್ಟ್‌ನಲ್ಲಿ ನಂಬರ್-1 ಬೌಲರ್

ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅವರು ಇತ್ತೀಚಿನ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ವಿಶ್ವದ ನಂಬರ್ ಒನ್ ಬೌಲರ್ ಎನಿಸಿಕೊಂಡಿದ್ದಾರೆ. 36 ವರ್ಷ ವಯಸ್ಸಿನ ಆರ್ ಅಶ್ವಿನ್ 2015 ರಲ್ಲಿ ನಂಬರ್ 1 ಟೆಸ್ಟ್ ಬೌಲರ್ ಎಂಬ ಗೌರವವನ್ನು ಗಳಿಸಿದರು ಮತ್ತು ನಂತರ ಹಲವಾರು ಸಂದರ್ಭಗಳಲ್ಲಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ. ಇತ್ತೀಚಿನ ಟೆಸ್ಟ್ ಶ್ರೇಯಾಂಕದಲ್ಲಿ ಅಶ್ವಿನ್ 869 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ. ಮತ್ತು ಜೇಮ್ಸ್ ಆಂಡರ್ಸನ್ ಈಗ 859 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ : ಟೆಸ್ಟ್ ಶತಕ ಸಿಡಿಸಿದ್ದೇ ತಡ ICC Rankingನಲ್ಲಿ ಕೊಹ್ಲಿ ಲಾಂಗ್ ಜಂಪ್: ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ ವಿರಾಟ್?

ಅಶ್ವಿನ್ ಟೀಂ ಇಂಡಿಯಾದ ಸರಣಿ ಗೆಲುವಿನ ಹೀರೋ

ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (ಆರ್ ಅಶ್ವಿನ್) ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದರು. ಅಶ್ವಿನ್ (ಆರ್ ಅಶ್ವಿನ್) ಈ ಸರಣಿಯ ಅತ್ಯಂತ ಯಶಸ್ವಿ ಬೌಲರ್ ಕೂಡ ಆಗಿದ್ದರು. ಅವರು 4 ಪಂದ್ಯಗಳಲ್ಲಿ ಒಟ್ಟು 25 ವಿಕೆಟ್‌ಗಳನ್ನು ಪಡೆದರು ಮತ್ತು ಬ್ಯಾಟ್‌ನೊಂದಿಗೆ 86 ರನ್‌ಗಳನ್ನು ಸಹ ನೀಡಿದರು. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಡುವಾಗ ಅಶ್ವಿನ್ ಇಡೀ ಸರಣಿಯಲ್ಲಿ ಎರಡು ಬಾರಿ 25 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಇವರನ್ನು ಬಿಟ್ಟರೆ ಉಭಯ ದೇಶಗಳ ಯಾವ ಬೌಲರ್‌ಗೂ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. 2013ರಲ್ಲೂ ಅಶ್ವಿನ್ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 29 ವಿಕೆಟ್ ಪಡೆದಿದ್ದರು.

ಆರ್ ಅಶ್ವಿನ್ ಅವರಿಂದ ಅದ್ಭುತ ಅಂಕಿಅಂಶಗಳು

ಆರ್ ಅಶ್ವಿನ್ ಇದುವರೆಗೆ ಟೀಂ ಇಂಡಿಯಾ ಪರ 92 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಆರ್ ಅಶ್ವಿನ್ ಈ ಪಂದ್ಯಗಳಲ್ಲಿ ಒಟ್ಟು 474 ವಿಕೆಟ್ ಪಡೆದಿದ್ದಾರೆ. ಅವರು ಟೆಸ್ಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರು. ಆರ್ ಅಶ್ವಿನ್ ಟೀಂ ಇಂಡಿಯಾ ಪರ 113 ಏಕದಿನ ಹಾಗೂ 65 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆರ್ ಅಶ್ವಿನ್ ಏಕದಿನದಲ್ಲಿ 151 ಮತ್ತು ಟಿ20ಯಲ್ಲಿ 72 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : “ಈ ಆಟಗಾರ ಟೀಂ ಇಂಡಿಯಾಗೆ ಬರಬೇಕು, ಫೈನಲ್’ನಲ್ಲಿ ಆಡಬೇಕು”: ಗವಾಸ್ಕರ್ ಹೀಗಂದಿದ್ದು ಯಾರಿಗೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News