RCB Mentor Sania Mirza: ಮಾಜಿ ಟೆನಿಸ್ ತಾರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಮೆಂಟರ್ ಸಾನಿಯಾ ಮಿರ್ಜಾ ರಂಜಾನ್ ಹಿನ್ನೆಲೆಯಲ್ಲಿ ಮದೀನಾಕ್ಕೆ ತನ್ನ ಕುಟುಂಬ ಸಮೇತ ತೆರಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಮಂಗಳವಾರ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿರುವ ಅವರು, ತಮ್ಮ ಮಗ ಇಜಾನ್ ಮಿರ್ಜಾ ಮಲಿಕ್, ಪೋಷಕರಾದ ಇಮ್ರಾನ್ ಮಿರ್ಜಾ ಮತ್ತು ನಸಿಮಾ ಮಿರ್ಜಾ, ಸಹೋದರಿ ಅನಮ್ ಮಿರ್ಜಾ ಮತ್ತು ಅವರ ಪತಿ-ಕ್ರಿಕೆಟರ್ ಮೊಹಮ್ಮದ್ ಅಸಾದುದ್ದೀನ್ ಜೊತೆಗೆ ಇದ್ದಾರೆ.
ಇದನ್ನೂ ಓದಿ: Video Viral: ಮೈದಾನದಲ್ಲಿ ಈ ಆಟಗಾರನನ್ನು ನಿಂದಿಸಿದ ರೋಹಿತ್! ಮತ್ತೆ ಮತ್ತೆ ಈ ರೀತಿ ವರ್ತಿಸುತ್ತಿರೋದೇಕೆ ನಾಯಕ?
ಮೊದಲ ಫೋಟೋದಲ್ಲಿ ಸಾನಿಯಾ ಮತ್ತು ಅವರ ಮಗ ಒಬ್ಬರನ್ನೊಬ್ಬರು ನೋಡಿಕೊಂಡು ನಗುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಮಗಳು ಅನಮ್ ಜೊತೆ ಫೋಸ್ ಕೊಟ್ಟಿದ್ದಾರೆ. ನಂತರ ಸೆಲ್ಫಿ ತೆಗೆದಿರುವ ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ. ಸಾನಿಯಾ ತನ್ನ ತಂದೆ ಇಮ್ರಾನ್ ಮತ್ತು ಮೈದುನ ಅಸಾದುದ್ದೀನ್ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಈ ಫೋಟೋದ ಹಿಂದೆ ಸುಂದರವಾದ ಪರ್ವತಗಳು ಕೂಡ ಕಾಣಿಸುತ್ತಿವೆ.
ಇನ್ನು ಈ ಫೋಟೋಗೆ ಸಾನಿಯಾ ಹೀಗೆ ಶೀರ್ಷಿಕೆ ನೀಡಿದ್ದಾರೆ; "ಅಲ್ಹಮ್ದುಲಿಲ್ಲಾ…ಅಲ್ಲಾಹನು ನಮ್ಮ ಪ್ರಾರ್ಥನೆಯನ್ನು ಸ್ವೀಕರಿಸಲಿ" ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಇರ್ಫಾನ್ ಪಠಾಣ್, "ಅಮೀನ್" ಎಂದು ಬರೆದಿದ್ದಾರೆ. ಹುಮಾ ಖುರೇಷಿ ಕಾಮೆಂಟ್’ಗಳ ವಿಭಾಗದಲ್ಲಿ ಹಲವಾರು ಹೃದಯದ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ರಕ್ಷಾಂದಾ ಖಾನ್ ಕೂಡ, "ಅಲ್ಲಾ ನಿಮ್ಮ ಎಲ್ಲಾ ಪ್ರಾರ್ಥನೆಗಳನ್ನು ಸ್ವೀಕರಿಸಲಿ!" ಎಂದು ಹೇಳಿದ್ದಾರೆ.
ಇನ್ನು ಇವೆಲ್ಲದರ ಹೊರತಾಗಿ ಅನೇಕ ಮಂದಿ ಸಾನಿಯಾ ಅವರ ಪತಿ-ಕ್ರಿಕೆಟರ್ ಶೋಯೆಬ್ ಮಲಿಕ್ ಬಗ್ಗೆ ಕೇಳಿದ್ದಾರೆ. ಸಾನಿಯಾ ಪತಿ ಎಲ್ಲಿದ್ದಾರೆ? ಡಿವೋರ್ಸ್ ಕನ್ಫರ್ಮ್ ಎಂದೆಲ್ಲಾ ಬರೆದಿದ್ದಾರೆ.
ಕಳೆದ ವರ್ಷ, ಸಾನಿಯಾ ಮತ್ತು ಶೋಯೆಬ್ ವಿಚ್ಛೇದನದ ಬಗ್ಗೆ ಹಲವಾರು ವದಂತಿಗಳು ಇಂಟರ್ನೆಟ್’ನಲ್ಲಿ ಹರಿದಾಡಲು ಪ್ರಾರಂಭಿಸಿತು. ಶೋಯೆಬ್ ಮತ್ತು ಸಾನಿಯಾ ತಮ್ಮ 12 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ ಎಂದು ಹಲವು ವರದಿಗಳು ಹೇಳಿವೆ. ಇವರಿಬ್ಬರು 2010 ರಲ್ಲಿ ವಿವಾಹವಾಗಿದ್ದು, ಅಂದಿನಿಂದ ದುಬೈನಲ್ಲಿ ನೆಲೆಸಿದ್ದಾರೆ. 2018 ರಲ್ಲಿ ಮಗ ಇಝಾನ್ ಗೆ ಜನ್ಮ ನೀಡಿದರು. ಇನ್ನು ಈ ಎಲ್ಲಾ ವದಂತಿಗಳ ಮಧ್ಯೆ, ಅವರು ಉರ್ದುಫ್ಲಿಕ್ಸ್’ನಲ್ಲಿ ‘ದಿ ಮಿರ್ಜಾ ಮಲಿಕ್ ಶೋ’ ಅನ್ನು ಹೋಸ್ಟ್ ಮಾಡುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: IND vs PAK: 7 ವರ್ಷಗಳ ನಂತರ ಭಾರತಕ್ಕೆ ಬರಲಿದೆ ಪಾಕಿಸ್ತಾನ ತಂಡ! ಮತ್ತೆ ನೋಡಬಹುದು ಬದ್ಧವೈರಿಗಳ ಕಾದಾಟ?
ಈ ತಿಂಗಳ ಆರಂಭದಲ್ಲಿ ಹೈದರಾಬಾದ್’ನಲ್ಲಿ ಟೆನಿಸ್ ಲೋಕಕ್ಕೆ ಸಾನಿಯಾ ನಿವೃತ್ತಿ ಘೋಷಣೆ ಮಾಡಿದ್ದರು. ಆ ಬಳಿಕ ಮದೀನಾಗೆ ತೀರ್ಥಯಾತ್ರೆ ಕೈಗೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.