rishabh pant statement about accident: ರಿಷಬ್ ಪಂತ್ ಕಳೆದ 18 ತಿಂಗಳುಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಭಾರತದ ಅತ್ಯುತ್ತಮ ಆಲ್-ಫಾರ್ಮ್ಯಾಟ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಕಳೆದ ವರ್ಷ ಕಾರು ಅಪಘಾತಕ್ಕೊಳಗಾಗಿದ್ದರು. ಚೇತರಿಸಿಕೊಂಡ ಬಳಿಕ ಐಪಿಎಲ್ 2024 ರಲ್ಲಿ ಅದ್ಭುತ ಪುನರಾಗಮನ ಮಾಡಿದರು. ಈ ಪ್ರದರ್ಶನದ ಆಧಾರದ ಮೇಲೆ, ಮುಂಬರುವ T20 ವಿಶ್ವಕಪ್ 2024 ಗಾಗಿ ಭಾರತ ತಂಡದಲ್ಲಿ ಪಂತ್ ಅವರನ್ನು ಸೇರಿಸಲಾಯಿತು. ಈ ಮಧ್ಯೆ ತಾನು ಅನುಭವಿಸಿದ ಅಪಘಾತದ ನೋವಿನ ಬಗ್ಗೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ತನಗಿಂತ 10 ವರ್ಷ ಕಿರಿಯ ಆಟಗಾರನ ಜೊತೆ ಕಾವ್ಯಾ ಮಾರನ್ ಡೇಟಿಂಗ್! ಆ ಕ್ರಿಕೆಟಿಗ ಬೇರಾರು ಅಲ್ಲ…
“ಗಾಯದಿಂದ ಚೇತರಿಸಿಕೊಳ್ಳಲು ಸ್ವಾವಲಂಬನೆ ಮತ್ತು ಆತ್ಮ ವಿಶ್ವಾಸ ಬಹಳ ಮುಖ್ಯ. ಏಕೆಂದರೆ ನಿಮ್ಮ ಸುತ್ತಮುತ್ತಲಿನ ಜನರು ಎಲ್ಲಾ ರೀತಿಯ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಆ ಸಂದರ್ಭದಲ್ಲಿ ನಿಮಗೆ ಯಾವುದು ಉತ್ತಮ ಎಂದು ನೀವು ಯೋಚಿಸಬೇಕು. ಕಾರು ಅಪಘಾತ ನನ್ನ ಜೀವನವನ್ನು ಬದಲಾಯಿಸಿದ ಅನುಭವ. ನಾನು ಕಣ್ಣು ತೆರೆದಾಗ, ನಾನು ಬದುಕಬಲ್ಲೆ ಎಂಬ ನಂಬಿಕೆ ಇರಲಿಲ್ಲ. ಆದರೆ ದೇವರು ನನ್ನನ್ನು ಕಾಪಾಡಿದನು” ಎಂದಿದ್ದಾರೆ.
ಇದನ್ನೂ ಓದಿ: ದಕ್ಷಿಣ ಭಾರತದ ಈ ನಟನೆಂದರೆ ವಿರಾಟ್’ಗೆ ಪಂಚಪ್ರಾಣ: ಆತ ಪ್ರಶಸ್ತಿ ಗೆದ್ದಾಗ ಕುಣಿದು ಕುಪ್ಪಳಿಸಿದ್ರಂತೆ ಕಿಂಗ್ ಕೊಹ್ಲಿ
“ನಾನು ಎರಡು ತಿಂಗಳ ಕಾಲ ಹಲ್ಲುಜ್ಜಲಿಲ್ಲ. ನಾನು ಸುಮಾರು ಆರರಿಂದ ಏಳು ತಿಂಗಳ ಕಾಲ ಅಸಹನೀಯ ನೋವನ್ನು ಸಹಿಸಿಕೊಂಡೆ. ಈಗ ಕ್ರಿಕೆಟ್’ಗೆ ಕಂಬ್ಯಾಕ್ ಮಾಡಿದ್ದೇನೆ. ನನಗೆ ಒತ್ತಡಕ್ಕಿಂತ ಹೆಚ್ಚಿನ ಉತ್ಸಾಹವಿದೆ. ಇದು ಎರಡನೇ ಜೀವನ ಎಂದು ನನಗೆ ಅನಿಸುತ್ತದೆ” ಎಂದು ಮನದ ಮಾತು ಬಿಚ್ಚಿಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.