ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ರೋಜರ್ ಫೆಡರರ್

ಸ್ವಿಟ್ಜರ್ಲೆಂಡ್‌ನ ಹಿರಿಯ ಅನುಭವಿ ಟೆನಿಸ್ ಆಟಗಾರ ರೋಜರ್ ಫೆಡರರ್ ಆರನೇ ಆಸ್ಟ್ರೇಲಿಯನ್ ಓಪನ್ ಮತ್ತು 20 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 

Last Updated : Jan 28, 2018, 06:46 PM IST
ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ರೋಜರ್ ಫೆಡರರ್  title=
pic courtesy : twitter

ಮೆಲ್ಬರ್ನ್: ಸ್ವಿಟ್ಜರ್ಲೆಂಡ್‌ನ ಹಿರಿಯ ಅನುಭವಿ ಟೆನಿಸ್ ಆಟಗಾರ ರೋಜರ್ ಫೆಡರರ್ ಆರನೇ ಆಸ್ಟ್ರೇಲಿಯನ್ ಓಪನ್ ಮತ್ತು 20 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಭಾನುವಾರ ನಡೆದ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ನ ಜಿದ್ದಾಜಿದ್ದಿನ ಫೈನಲ್ ಮುಖಾಮುಖಿಯಲ್ಲಿ ವಿಶ್ವ ನಂ.2 ಆಟಗಾರ 36ರ ಹರಯದ ಫೆಡರರ್ ಕ್ರೊಯೇಷ್ಯಾದ ಮರಿನ್‌ ಚಿಲಿಚ್‌ ವಿರುದ್ಧ 6-2, 6-7, 6-3, 3-6, 6-ರ ಅಂತರದಲ್ಲಿ ಗೆಲುವು ದಾಖಲಿಸಿದರು.

30 ನೇ ಗ್ರ್ಯಾಂಡ್ ಸ್ಲ್ಯಾಮ್ ಅಂತಿಮ ಪಂದ್ಯದಲ್ಲಿ ಆಡಿದ ಫೆಡರರ್, ನೊವಾಕ್ ಜೊಕೊವಿಕ್ ಮತ್ತು ಆಸ್ಟ್ರೇಲಿಯಾದ ಶ್ರೇಷ್ಠ ರಾಯ್ ಎಮರ್ಸನ್ ಅವರ ದಾಖಲೆಗಳನ್ನೂ ಸರಿಗಟ್ಟಿದ್ದಾರೆ. 

ಈ ಮೂಲಕ ಫೆಡರರ್‌ 6ನೇ ಸಲ ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿ ಪ್ರಶಸ್ತಿ ಗೆದ್ದುಕೊಂಡರು.

Trending News