Rohit Sharma: ಟೀಂ ಇಂಡಿಯಾ ನಾಯಕನೊಂದಿಗೆ ಪಾಕ್ ಅಭಿಮಾನಿಗಳ ಸೆಲ್ಫಿ, ವಿಡಿಯೋ ವೈರಲ್

India vs Pakistan: ಏಷ್ಯಾ ಕಪ್ನಲ್ಲಿ ಭಾರತ vs ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ಸೋಲು ಟೀಂ ಇಂಡಿಯಾ ಅಭಿಮಾನಿಗಳನ್ನು  ನಿರಾಸೆಗೊಳಿಸಿದೆ. ಈ ಮಧ್ಯೆ,   ಪಾಕಿಸ್ತಾನದ ಅಭಿಮಾನಿಗಳು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  

Written by - Yashaswini V | Last Updated : Sep 6, 2022, 08:17 AM IST
  • ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ.
  • ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಅವರು ಬಸ್‌ನಲ್ಲಿ ಕುಳಿತುಕೊಳ್ಳಲು ಹೋಗುತ್ತಿದ್ದರು.
  • ಆಗ ಪಾಕಿಸ್ತಾನಿ ಅಭಿಮಾನಿಗಳು ಆಟೋಗ್ರಾಫ್ ಮತ್ತು ಸೆಲ್ಫಿ ತೆಗೆದುಕೊಳ್ಳುವಂತೆ ಮನವಿ ಮಾಡಿದರು.
Rohit Sharma: ಟೀಂ ಇಂಡಿಯಾ ನಾಯಕನೊಂದಿಗೆ ಪಾಕ್ ಅಭಿಮಾನಿಗಳ ಸೆಲ್ಫಿ, ವಿಡಿಯೋ ವೈರಲ್ title=
Rohit sharma with pak fans

ಭಾರತ vs ಪಾಕಿಸ್ತಾನ ರೋಹಿತ್ ಶರ್ಮಾ: ಏಷ್ಯಾ ಕಪ್-2022 ರ ಗ್ರೂಪ್ ಹಂತದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿತ್ತು, ಆದರೆ ಸೂಪರ್-4 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕೋಟ್ಯಾಂತರ ಅಭಿಮಾನಿಗಳನ್ನು ನಿರಾಸೆಗೊಳಿಸಿತು. ಪಾಕಿಸ್ತಾನವು ಒಂದು ಎಸೆತದಲ್ಲಿ 5 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು. 

ಭಾರತದ ಪರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರು ಈ ಪಂದ್ಯದಲ್ಲಿ ಅಮೋಘ ಆಟ ಪ್ರದರ್ಶಿಸಿದರು. ಆದರೆ ಬೌಲರ್‌ಗಳಿಂದಾಗಿ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು. ಇದೀಗ  ಪಾಕಿಸ್ತಾನದ ಅಭಿಮಾನಿಗಳು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಜೊತೆ ಸೆಲ್ಫಿ ತೆಗೆದುಕೊಂಡಿರುವ ದೃಶ್ಯ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ- IND vs PAK: ಕೊನೆಯ 2 ಓವರ್‌ನಲ್ಲಿ ಮಹತ್ವದ ತಿರುವು, ಪಾಕಿಸ್ತಾನ ವಿರುದ್ಧ ಸೋಲುಂಡ ಭಾರತ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶಾಂತ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದ ನಂತರ ಅವರು ಬಸ್‌ನಲ್ಲಿ ಕುಳಿತುಕೊಳ್ಳಲು ಹೋಗುತ್ತಿದ್ದರು. ಆಗ ಪಾಕಿಸ್ತಾನಿ ಅಭಿಮಾನಿಗಳು ಆಟೋಗ್ರಾಫ್ ಮತ್ತು ಸೆಲ್ಫಿ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಇದಾದ ಮೇಲೆ ರೋಹಿತ್ ಶರ್ಮಾ ಅಭಿಮಾನಿಗಳ ಆಸೆಯನ್ನು ಈಡೇರಿಸಿ ಅಭಿಮಾನಿಗಳನ್ನು ತಲುಪಿ ಆಟೋಗ್ರಾಫ್ ಕೂಡ ನೀಡಿದರು. ಈ ವೇಳೆ ಪಾಕಿಸ್ತಾನದ ಅಭಿಮಾನಿಯೊಬ್ಬ ಮಾಡಿದ್ದೇನು ಗೊತ್ತಾ....

ಇದನ್ನೂ ಓದಿ- Asia Cup 2022: ‘ನಾನಿಲ್ಲಿರೋದು ಕೊಹ್ಲಿಗಾಗಿ’: ಪಾಕ್ ಸುಂದರಿಯ ಸಂದೇಶ ಕಂಡು ವಿರಾಟ್ ಏನಂದ್ರು?

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವೇಳೆ ಅಭಿಮಾನಿಯೊಬ್ಬರು ಕೈಕುಲುಕುತ್ತಿದ್ದರು. ಈ ವೇಳೆ ಪಾಕಿಸ್ತಾನದ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳುವಾಗ ರೋಹಿತ್ ಕೈ ಹಿಡಿದಿದ್ದಾನೆ. ಬಳಿಕ ಆತ ರೋಹಿತ್ ಶರ್ಮಾ ಅವರ ಕೈಯನ್ನು ಬಿಡುತ್ತಿರಲಿಲ್ಲ. ಈ ವೇಳೆ ರೋಹಿತ್ ಹೇಳಿದ ಒಂದೇ ಒಂದು ಮಾತು ಕೇಳಿ ಅಲ್ಲಿದ್ದವರೆಲ್ಲಾ ನಗೆಗಡಲಿನಲ್ಲಿ ತೇಲಿದರು. ಅದೇನು ಅಂತ ಈ ವಿಡಿಯೋ ನೋಡಿ....

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News