ಭಾರತ vs ಪಾಕಿಸ್ತಾನ: ಏಷ್ಯಾಕಪ್ನ ಸೂಪರ್-4 ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ 5 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ಗಳ ಕೆಟ್ಟ ಪ್ರದರ್ಶನವೇ ಇದಕ್ಕೆ ಮುಖ್ಯ ಕಾರಣ. ಮೊದಮೊದಲಿಗೆ ಆಟದಲ್ಲಿ ಹಿಡಿತ ಸಾಧಿಸಿದ್ದ ಟೀಂ ಇಂಡಿಯಾ ಇನ್ನಿಂಗ್ಸ್ನಲ್ಲಿ ಕೊನೆಯ ಎರಡು ಓವರ್ಗಳಿದ್ದಾಗ ಪಂದ್ಯವು ಪಾಕಿಸ್ತಾನದ ಪಾಲಾಯಿತು. ಈ ಓವರ್ಗಳು ಭಾರತ ಮತ್ತು ಪಾಕಿಸ್ತಾನ ಪಂದ್ಯದ ಮಹತ್ವದ ತಿರುವು. ಈ ಓವರ್ಗಳಲ್ಲಿ ಟೀಂ ಇಂಡಿಯಾ ಅತ್ಯುತ್ತಮ ಆಟ ಪ್ರದರ್ಶಿಸಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು.
ಕ್ಯಾಚ್ ಕೈಬಿಟ್ಟ ಅರ್ಷದೀಪ್ ಸಿಂಗ್:
ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ರವಿ ಬಿಷ್ಣೋಯ್ ಅವರಿಂದ 18ನೇ ಓವರ್ ಬೌಲಿಂಗ್ ಮಾಡಿಸಿದರು. ರವಿ ಬಿಷ್ಣೋಯ್ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು, 18ನೇ ಓವರ್ನಲ್ಲಿಯೂ ಅವರು ಅತ್ಯುತ್ತಮ ಬೌಲಿಂಗ್ ಮಾಡುತ್ತಿದ್ದರು. ಆಗ ಪಾಕಿಸ್ತಾನದ ಇಬ್ಬರು ಹೊಸ ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿದ್ದರು. ಆದರೆ ಅದೇ ಓವರ್ನ ಮೂರನೇ ಎಸೆತದಲ್ಲಿ ಪಾಕಿಸ್ತಾನದ ಬ್ಯಾಟ್ಸ್ಮನ್ ಆಸಿಫ್ ಅಲಿ ಅವರ ಕ್ಯಾಚ್ ಅನ್ನು ಅರ್ಷದೀಪ್ ಸಿಂಗ್ ಕೈಬಿಟ್ಟರು. ಇದು ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣವಾಯಿತು. ಇದಾದ ಬಳಿಕ ಆಶಿಫ್ ಅಲಿ 8 ಎಸೆತಗಳಲ್ಲಿ 16 ರನ್ ಗಳಿಸಿ ಪಾಕಿಸ್ತಾನಕ್ಕೆ ಜಯ ತಂದುಕೊಟ್ಟರು.
ಇದನ್ನೂ ಓದಿ- T20 World Cup 2022 : ಜಡೇಜಾ ಸ್ಥಾನಕ್ಕೆ ಈ ಆಟಗಾರನಿಗೆ ಚಾನ್ಸ್, ಮೊದಲ ಬಾರಿಗೆ ಟಿ20 ವಿಶ್ವಕಪ್ಗೆ ಎಂಟ್ರಿ!
ಇನ್ನೊಂದೆಡೆ, ಭುವನೇಶ್ವರ್ ಕುಮಾರ್ ಅವರನ್ನು ಡೆತ್ ಓವರ್ಗಳ ಮಾಸ್ಟರ್ ಎಂದು ಪರಿಗಣಿಸಲಾಗಿದೆ. ಆದರೆ ಪಾಕಿಸ್ತಾನದ ವಿರುದ್ಧ, ಅವರು ಲಯದಲ್ಲಿ ಕಾಣಿಸಿಕೊಂಡಿಲ್ಲ. ನಾಯಕ ರೋಹಿತ್ ಶರ್ಮಾ ಅವರಿಗೆ 19 ನೇ ಓವರ್ನಲ್ಲಿ ಬೌಲಿಂಗ್ ಮಾಡಲು ಅವಕಾಶ ನೀಡಿದರು. ಈ ಓವರ್ನಲ್ಲಿ ಅವರು ತುಂಬಾ ದುಬಾರಿ ಎಂದು ಸಾಬೀತುಪಡಿಸಿದರು. ಭುವನೇಶ್ವರ್ ಕುಮಾರ್ ಅವರ ಈ ಓವರ್ನಲ್ಲಿ ಎದುರಾಳಿ ತಂಡವು ಒಟ್ಟು 19 ರನ್ ಗಳಿಸಿತು. ಈ ಓವರ್ನಲ್ಲಿ ಭುವನೇಶ್ವರ್ ಕುಮಾರ್ ವಿಕೆಟ್ ಪಡೆದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗುತ್ತಿತ್ತು.
ಇದನ್ನೂ ಓದಿ- Video : ಈ 4 ಅಕ್ಷರ ಪದ ಹೇಳಲು ನಾಚಿನೀರಾದ ರಾಹುಲ್ ದ್ರಾವಿಡ್
ಬೌಲರ್ಗಳು ಸಂಪೂರ್ಣವಾಗಿ ನಿಷ್ಪರಿಣಾಮಕಾರಿಯಾಗಿದ್ದಾರೆ :
ಪಂದ್ಯದ ಆರಂಭದಲ್ಲಿ ಭಾರತ ತಂಡದ ಬೌಲರ್ಗಳು ಕಾಣಿಸಲೇ ಇಲ್ಲ. ಈ ಬೌಲರ್ನಲ್ಲಿ ಮೊಹಮ್ಮದ್ ರಿಜ್ವಾನ್ ಸಾಕಷ್ಟು ರನ್ ಗಳಿಸಿದರು. ಅದೇ ಸಮಯದಲ್ಲಿ, ಮೊಹಮ್ಮದ್ ನವಾಜ್ ಕೇವಲ 20 ಎಸೆತಗಳಲ್ಲಿ 42 ರನ್ ಗಳಿಸಿ ಪಾಕಿಸ್ತಾನ ತಂಡವನ್ನು ಗೆಲ್ಲಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್ ನಾಲ್ಕು ಓವರ್ಗಳಲ್ಲಿ ಪಾಕಿಸ್ತಾನದ ಆಟಗಾರರು 40 ರನ್ ಗಳಿಸಿದರು. ಅರ್ಷದೀಪ್ ಸಿಂಗ್ ಅವರ ನಾಲ್ಕು ಓವರ್ಗಳಲ್ಲಿ 27 ರನ್, ಹಾರ್ದಿಕ್ ಪಾಂಡ್ಯ ನಾಲ್ಕು ಓವರ್ಗಳಲ್ಲಿ 44 ರನ್ ಮತ್ತು ಯುಜ್ವೇಂದ್ರ ಚಾಹಲ್ ನಾಲ್ಕು ಓವರ್ಗಳಲ್ಲಿ 43 ರನ್ ಗಳಿಸಿದರು. ಈ ಮಧ್ಯೆ, ರವಿ ಬಿಷ್ಣೋಯ್ ಅವರ ಎಸೆತಗಳು ಮಾತ್ರ ಸ್ವಲ್ಪ ಮಟ್ಟಿಗೆ ಎದುರಾಳಿ ತಂಡವನ್ನು ನಿಯಂತ್ರಿಸಿದವು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ