ನೂತನ ವಿಶ್ವದಾಖಲೆ ಹೊಸ್ತಿಲಲ್ಲಿ ರೋಹಿತ್ ಶರ್ಮಾ: ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಬರೆದಿರದ ವಿಶಿಷ್ಟ ರೆಕಾರ್ಡ್ ಇದು…

India vs South Africa: ಭಾರತವು ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಈ ಬಾರಿ ಅವಕಾಶವಿತ್ತು. ಆದರೆ ಮೊದಲ ಟೆಸ್ಟ್‌’ನಲ್ಲಿ ಭಾರತವು ಸೋಲನ್ನು ಎದುರಿಸಬೇಕಾಯಿತು, ಹೀಗಾಗಿ ಗೆಲ್ಲುವ ಅವಕಾಶವಿಲ್ಲ. ಆದರೆ ಎರಡನೇ ಹಾಗೂ ಕೊನೆಯ ಟೆಸ್ಟ್‌’ನಲ್ಲಿ ಗೆಲುವು ಸಾಧಿಸಿದರೆ ಪಂದ್ಯ ಡ್ರಾ ಆಗುತ್ತದೆ.

Written by - Bhavishya Shetty | Last Updated : Dec 31, 2023, 04:52 PM IST
    • ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ಭಾರತ ತಂಡ
    • ಭಾರತವು ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ
    • ಧೋನಿ ಮಾತ್ರ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ
ನೂತನ ವಿಶ್ವದಾಖಲೆ ಹೊಸ್ತಿಲಲ್ಲಿ ರೋಹಿತ್ ಶರ್ಮಾ: ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಬರೆದಿರದ ವಿಶಿಷ್ಟ ರೆಕಾರ್ಡ್ ಇದು…  title=
Rohit Sharma

India vs South Africa, Capetown Test: ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ಭಾರತ ತಂಡ ಸೆಂಚುರಿಯನ್ ಟೆಸ್ಟ್‌’ನಲ್ಲಿ ಸೋಲು ಅನುಭವಿಸಬೇಕಾಯಿತು. ಆತಿಥೇಯ ತಂಡ 3 ದಿನಗಳಲ್ಲಿ ಪಂದ್ಯವನ್ನು ಮುಗಿಸಿ ಭಾರತವನ್ನು ಇನ್ನಿಂಗ್ಸ್ ಮತ್ತು 32 ರನ್‌’ಗಳಿಂದ ಸೋಲಿಸಿತು. ಇದೀಗ ಉಭಯ ತಂಡಗಳ ನಡುವಿನ ಸರಣಿಯ ಎರಡನೇ ಮತ್ತು ಕೊನೆಯ ಪಂದ್ಯ ಜನವರಿ 3 ರಿಂದ 7 ರವರೆಗೆ ಕೇಪ್ ಟೌನ್’ನ ನ್ಯೂಲ್ಯಾಂಡ್ಸ್’ನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಗೆದ್ದರೆ, ರೋಹಿತ್ ಶರ್ಮಾ ವಿಶೇಷವಾದ ರೆಕಾರ್ಡ್ ಬರೆಯಲಿದ್ದಾರೆ.

ಇದನ್ನೂ ಓದಿ: ಕಾಮಾಕ್ಷಿ ನಿನ್ನ ಕಣ್ಣ ನೋಟ ಬಲು ಡೇಂಜರ್‌..! ಯುವಕರಿಗೆ ನ್ಯೂ ಇಯರ್‌ ಕಿಕ್‌ ಕೊಟ್ಟ ಸುಂದರಿ

ಇದುವರೆಗೆ, ಭಾರತವು ದಕ್ಷಿಣ ಆಫ್ರಿಕಾದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಈ ಬಾರಿ ಅವಕಾಶವಿತ್ತು. ಆದರೆ ಮೊದಲ ಟೆಸ್ಟ್‌’ನಲ್ಲಿ ಭಾರತವು ಸೋಲನ್ನು ಎದುರಿಸಬೇಕಾಯಿತು, ಹೀಗಾಗಿ ಗೆಲ್ಲುವ ಅವಕಾಶವಿಲ್ಲ. ಆದರೆ ಎರಡನೇ ಹಾಗೂ ಕೊನೆಯ ಟೆಸ್ಟ್‌’ನಲ್ಲಿ ಗೆಲುವು ಸಾಧಿಸಿದರೆ ಪಂದ್ಯ ಡ್ರಾ ಆಗುತ್ತದೆ. ಒಂದು ವೇಳೆ ಸರಣಿ ಡ್ರಾಗೊಂಡರೆ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ ಭಾರತದ ಎರಡನೇ ನಾಯಕ ರೋಹಿತ್ ಶರ್ಮಾ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗುತ್ತಾರೆ.

ಇಲ್ಲಿಯವರೆಗೆ ಮಹೇಂದ್ರ ಸಿಂಗ್ ಧೋನಿ ಮಾತ್ರ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ಟೆಸ್ಟ್ ಸರಣಿಯನ್ನು 1-1 ಸಮಬಲದೊಂದಿಗೆ ಅಂತ್ಯಗೊಳಿಸಿತ್ತು.

ರೋಹಿತ್ ಶರ್ಮಾ ಕೇಪ್ ಟೌನ್ ಟೆಸ್ಟ್ ಪಂದ್ಯವನ್ನು ಗೆದ್ದರೆ, ಈ ಮೈದಾನದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇಲ್ಲಿಯವರೆಗೆ, ಈ ಮೈದಾನದಲ್ಲಿ ಯಾವುದೇ ಭಾರತೀಯ ನಾಯಕನಿಗೆ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಭಾರತ ಈ ಮೈದಾನದಲ್ಲಿ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, 4ರಲ್ಲಿ ಸೋತಿದೆ. 2 ಪಂದ್ಯಗಳು ಡ್ರಾಗೊಂಡಿವೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಹೊಸಚಿತ್ರ ಅನೌನ್ಸ್‌

ಭಾರತದ ಟೆಸ್ಟ್ ತಂಡ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮುಹಮ್ಮದ್ ಕುಮಾರ್ ಸಿರಾಜ್, ಪ್ರಸಿದ್ಧ್ ಕೃಷ್ಣ , ಕೆ ಎಸ್ ಭರತ್ (ವಿಕೆಟ್ ಕೀಪರ್)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News