ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್(T20 World Cup 2021) ನಂತರ ಟೀಂ ಇಂಡಿಯಾದ ನಾಯಕತ್ವಕ್ಕೆ ರನ್ ಮಷಿನ್ ವಿರಾಟ್ ಕೊಹ್ಲಿ ಗುಡ್ ಬೈ ಹೇಳುತ್ತಾರಾ? ಅನ್ನೋ ಗುಲ್ಲುಗಳು ಎದ್ದಿವೆ. ಟಿ-20 ವಿಶ್ವಕಪ್ ಬಳಿಕ ಸೀಮಿತ ಓವರ್‌ಗಳ ತಂಡವು ನಾಯಕತ್ವದ ಬದಲಾವಣೆಗೆ ಮುಂದಾಗಬಹುದು ಎನ್ನಲಾಗುತ್ತಿದೆ. ನಾಯಕ ವಿರಾಟ್ ಕೊಹ್ಲಿ ಶೀಘ್ರದಲ್ಲೇ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಕೊಹ್ಲಿ ನಾಯಕತ್ವ ತ್ಯಜಿಸಲು ನಿರ್ಧರಿಸಿದರೆ ಆರಂಭಿಕ ಆಟಗಾರ ಮತ್ತು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಏಕದಿನ ಮತ್ತು ಟಿ-20 ಕ್ರಿಕೆಟ್ ನ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಕ್ಯಾಪ್ಟನ್ ಕೊಹ್ಲಿ(Virat Kohli) ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಯೋಚಿಸಿದ್ದಾರಂತೆ. ಇದಕ್ಕೆ ಕಾರಣ ಕಳೆದ ವರ್ಷದಲ್ಲಿ ಗಣನೀಯವಾಗಿ ಕುಸಿದಿರುವ ಅವರ ಬ್ಯಾಟಿಂಗ್ ಫಾರ್ಮ್. ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಮೊದಲಿನ ವೈಭವ ಕಂಡುಬರುತ್ತಿಲ್ಲ. ಏಕದಿನ ಪಂದ್ಯಗಳಲ್ಲಿ ಅವರು ಶತಕ ಭಾರಿಸಿ ಬಹುದಿನಗಳಾಯಿತು. ಕೋಟ್ಯಂತರ ಅಭಿಮಾನಿಗಳು ಅವರ ಮೊದಲಿನ ಬ್ಯಾಟಿಂಗ್ ವೈಭವವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಆದರೆ ಕೊಹ್ಲಿ ಮಾತ್ರ ಪದೇ ಪದೇ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ.
ಹಿಟ್ ಮ್ಯಾನ್ ರೋಹಿತ್ ಶರ್ಮಾ(Rohit Sharma) ಏಕದಿನವಲ್ಲದಿದ್ದರೂ ಕನಿಷ್ಠ ಟಿ-20 ಯಲ್ಲಿಯಾದರೂ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳುವ ವದಂತಿಗಳಿವೆ. ಐಪಿಎಲ್ ಯಶಸ್ಸಿನೊಂದಿಗೆ ಸ್ಟಾಂಡ್-ಇನ್ ಕ್ಯಾಪ್ಟನ್ ಆಗಿರುವ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಗೆ 5 ಐಪಿಎಲ್ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಅವರ ಸಾಮರ್ಥ್ಯವನ್ನು ಪರಿಗಣಿಸಿ ಅವರಿಗೆ ಟೀಂ ಇಂಡಿಯಾದ ಕ್ಯಾಪ್ಟನ್ ಪಟ್ಟ ಒಲಿದು ಬರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: IPL 15th Season Update: IPL ಹೊಸ ತಂಡಗಳಿಗಾಗಿ Tender ಜಾರಿ, BCCI ಷರತ್ತುಗಳೇನು? ಇಲ್ಲಿದೆ ವರದಿ
‘ನಾಯಕತ್ವ ವಿಚಾರವಾಗಿ ಸ್ವತಃ ವಿರಾಟ್ ಕೊಹ್ಲಿ ಅವರೇ ತಮ್ಮ ನಿಲುವು ಘೋಷಿಸುತ್ತಾರೆ. ಅವರು ತಮ್ಮ ಬ್ಯಾಟಿಂಗ್ ಬಗ್ಗೆ ಗಮನಹರಿಸಬೇಕಾಗಿದೆ ಮತ್ತು ಅವರು ಎಂದೆಂದಿಗೂ ವಿಶ್ವದ ಅತ್ತ್ಯುತ್ತಮ ಬ್ಯಾಟ್ಸ್ ಮನ್ ಆಗಿರಲು ಬಯಸುತ್ತಾರೆ. ಬ್ಯಾಟಿಂಗ್ ಫಾರ್ಮ್ ಗೆ ಮರಳಲು ಅವರು ಸ್ವಲ್ಪ ದಿನ ನಾಯಕತ್ವದಿಂದ ದೂರ ಉಳಿಯಬಹುದು’ ಎಂದು ಬಿಸಿಸಿಐ(BCCI) ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ವಿರಾಟ್ ಕೊಹ್ಲಿ ಇದುವರೆಗೆ 95 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಈ ಪೈಕಿ 65 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 27 ಸೋಲು ಕಂಡಿದ್ದಾರೆ. ಅವರ ಏಕದಿನ ಪಂದ್ಯಗಳ ಗೆಲುವಿನ ಅನುಪಾತ ಶೇ.70.43 ರಷ್ಟಿದೆ. ಅವರ ನಾಯಕತ್ವದಲ್ಲಿ 45 ಟಿ-20 ಪಂದ್ಯಗಳಲ್ಲಿ ಭಾರತ 27 ಬಾರಿ ಗೆದ್ದಿದ್ದರೆ 14 ಬಾರಿ ಸೋತಿದೆ.
ಇದನ್ನೂ ಓದಿ: ತಾಲಿಬಾನ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರೀದಿ..!
ಮುಂಬರುವ ಟಿ-20 ವಿಶ್ವಕಪ್ ಗೆ ಬಿಸಿಸಿಐ ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ(MS Dhoni)ಯನ್ನು ಟೀಂ ಇಂಡಿಯಾದ ಮಾರ್ಗದರ್ಶಕರಾಗಿ ಕರೆತಂದಿದೆ. ಐಸಿಸಿ ಟ್ರೋಫಿ ಗೆಲ್ಲಲು ಕೊಹ್ಲಿಯ ಅಸಮರ್ಥತೆಯೇ ಈ ಕ್ರಮಕ್ಕೆ ಕಾರಣ ಎಂದು ಹಲವರು ನಂಬಿದ್ದಾರೆ. ರೋಹಿತ್ ಭಾರತವನ್ನು ಏಕದಿನ ಪಂದ್ಯಗಳಲ್ಲಿ 10 ಬಾರಿ ಮುನ್ನಡೆಸಿದ್ದು, 8 ರಲ್ಲಿ ಗೆಲುವು, 2 ರಲ್ಲಿ ಸೋಲು ಕಂಡಿದ್ದಾರೆ. ಟಿ-20 ಪಂದ್ಯಗಳಲ್ಲಿ ಅವರು 19 ಬಾರಿ ಕ್ಯಾಪ್ಟನ್ ಆಗಿದ್ದಾರೆ. ಈ ಪೈಕಿ 15 ಗೆಲುವು ಕಂಡಿದ್ದು, 4 ರಲ್ಲಿ ಸೋಲು ಕಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.