Trending News: ಊಟಕ್ಕೆ ಮೇಕೆ ಕಡಿಯುವ ಕನಸು ಕಾಣುತ್ತಾ ಶಿಶ್ನವನ್ನೇ ಕತ್ತರಿಸಿಕೊಂಡ ಭೂಪ: ಮುಂದೇನಾಯ್ತು ಗೊತ್ತಾ!

Man cut his penis while dreaming: ಈ ಘಟನೆ ನಡೆದಿರೋದು ಘಾನಾದಲ್ಲಿ. ಇಲ್ಲೊಬ್ಬ ರೈತ ತನ್ನ ಹೆಂಡತಿಗೆ ರಾತ್ರಿ ಊಟ ತಯಾರಿಸಲು ಸಹಾಯ ಮಾಡುತ್ತಿದ್ದನಂತೆ. ಈ ಸಂದರ್ಭದಲ್ಲಿ ಮೇಕೆಯನ್ನು ಕಡಿದು ಹತ್ಯೆ ಮಾಡಿದ್ದಾನೆ. ಆದ್ರೆ ಇದೆಲ್ಲಾ ಕನಸು. ಕನಸಿನಲ್ಲಿ ಮೇಕೆ ಕಡಿಯಲು ಹೋಗಿ, ತನ್ನ ಶಿಶ್ನವನ್ನೇ ಕತ್ತರಿಸಿಕೊಂಡಿದ್ದಾನೆ ಈ ಭೂಪ.

Written by - Bhavishya Shetty | Last Updated : Mar 26, 2023, 05:15 PM IST
    • ಇಲ್ಲೊಬ್ಬ ರೈತ ತನ್ನ ಹೆಂಡತಿಗೆ ರಾತ್ರಿ ಊಟ ತಯಾರಿಸಲು ಸಹಾಯ ಮಾಡುತ್ತಿದ್ದನಂತೆ.
    • ಈ ಸಂದರ್ಭದಲ್ಲಿ ಮೇಕೆಯನ್ನು ಕಡಿದು ಹತ್ಯೆ ಮಾಡಿದ್ದಾನೆ. ಆದ್ರೆ ಇದೆಲ್ಲಾ ಕನಸು.
    • ಕನಸಿನಲ್ಲಿ ಮೇಕೆ ಕಡಿಯಲು ಹೋಗಿ, ತನ್ನ ಶಿಶ್ನವನ್ನೇ ಕತ್ತರಿಸಿಕೊಂಡಿದ್ದಾನೆ ಈ ಭೂಪ.
Trending News: ಊಟಕ್ಕೆ ಮೇಕೆ ಕಡಿಯುವ ಕನಸು ಕಾಣುತ್ತಾ ಶಿಶ್ನವನ್ನೇ ಕತ್ತರಿಸಿಕೊಂಡ ಭೂಪ: ಮುಂದೇನಾಯ್ತು ಗೊತ್ತಾ! title=
viral news

Man cut his penis while dreaming of Chopping a goat: ನಿದ್ರೆ ಮಾಡುವಾಗ ಕನಸು ಕಾಣುವುದು ಸಹಜ. ಆ ಕನಸಿನಲ್ಲಿ ಏನೇನೋ ಕೆಲಸಗಳನ್ನು ಮಾಡುತ್ತಿರುತ್ತೇವೆ. ಕೆಲವರಿಗೆ ನಿದ್ದೆಯಲ್ಲಿ ನಡೆಯೋ ಅಭ್ಯಾಸ ಇದ್ರೆ ಇನ್ನೂ ಕೆಲವರಿಗೆ ನಿದ್ದೆಯಲ್ಲಿ ಮಾತನಾಡೋ ಚಟ. ಅನೇಕದ ರಹಸ್ಯ ಬಯಲಾಗಿದ್ದೂ ಉಂಟು ಇಂಥ ಕೆಲಸದಿಂದ. ಆದರೆ ಇಂದು ನಾವು ಹೇಳಹೊರಟಿರೋದು ಜೀವಕ್ಕೆ ಕುತ್ತು ತಂದ ಘಟನೆಯ ಬಗ್ಗೆ.

ಇದನ್ನೂ ಓದಿ: Viral Video: ಕ್ರೀಡೆಗೂ ಜೈ… ಡ್ಯಾನ್ಸ್;ಗೂ ಸೈ: ಚಿನ್ನದ ಹುಡುಗ ನೀರಜ್ ಚೋಪ್ರಾ ಡ್ಯಾನ್ಸ್ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ

ಈ ಘಟನೆ ನಡೆದಿರೋದು ಘಾನಾದಲ್ಲಿ. ಇಲ್ಲೊಬ್ಬ ರೈತ ತನ್ನ ಹೆಂಡತಿಗೆ ರಾತ್ರಿ ಊಟ ತಯಾರಿಸಲು ಸಹಾಯ ಮಾಡುತ್ತಿದ್ದನಂತೆ. ಈ ಸಂದರ್ಭದಲ್ಲಿ ಮೇಕೆಯನ್ನು ಕಡಿದು ಹತ್ಯೆ ಮಾಡಿದ್ದಾನೆ. ಆದ್ರೆ ಇದೆಲ್ಲಾ ಕನಸು. ಕನಸಿನಲ್ಲಿ ಮೇಕೆ ಕಡಿಯಲು ಹೋಗಿ, ತನ್ನ ಶಿಶ್ನವನ್ನೇ ಕತ್ತರಿಸಿಕೊಂಡಿದ್ದಾನೆ ಈ ಭೂಪ.

47 ವರ್ಷದ ಕೋಫಿ ಅಟ್ಟಾ ಎಂಬ ರೈತ ತಮ್ಮ ಶಿಶ್ನವನ್ನು ಕತ್ತರಿಸಿಕೊಂಡಿದ್ದಾನೆ. ತೀವ್ರ ನೋವಾದ ಎಚ್ಚರಗೊಂಡಿದ್ದಾನೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೆ ನೀಡಿದ್ದಾರೆ.

ಸುದ್ದಿ ಮೂಲಗಳ ಪ್ರಕಾರ, ಘಟನೆ ಸಂಭವಿಸಿದಾಗ ಅಟ್ಟಾ ಅವರ ಪತ್ನಿ ಅಡ್ವೋವಾ ಕೋನಾಡು, ಬೇರೆ ಊರಿಗೆ ತೆರಳಿದ್ದರು. ಆಕೆ ಹಿಂತಿರುಗಿ ಬಂದಾಗ ತೀವ್ರ ರಕ್ತಸ್ರಾವವಾಗಿರುವುದು ಗಮನಕ್ಕೆ ಬಂದಿದೆ. ಕೈಯಲ್ಲಿ ಶಿಶ್ನವನ್ನು ಹಿಡಿದುಕೊಂಡು ನೋವು ತಾಳಲಾರದೆ ಗಂಡ ಒದ್ದಾಡುವುದನ್ನು ಕಂಡ ಪತ್ನಿ, ತಕ್ಷಣವೇ ಪ್ರಥಮ ಚಿಕಿತ್ಸನೆ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.

BBC ಪಿಡ್ಜಿನ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಟ್ಟಾ, ನಡೆದ ಘಟನೆಯ ಬಗ್ಗೆ ನೆನಪಿಸಿಕೊಂಡರು. ಸದ್ಯ ಅವರಿಗೆ ವೈದ್ಯಕೀಯ ಆರೈಕೆ ಜೊತೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಬಹಿರಂಗಪಡಿಸಿದರು.

"ನಾನು ಇದೀಗ ಆಸ್ಪತ್ರೆಯಲ್ಲಿದ್ದೇನೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ನನಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಹೆಚ್ಚಿನ ಚಿಕಿತ್ಸೆಗೆಂದು ನನ್ನನ್ನು Komfo Anokye Teaching Hospital (KATH) ಗೆ ಕರೆದೊಯ್ದರು. ಆದರೆ ನನ್ನ ಬಳಿ ಹಣವಿಲ್ಲ” ಎಂದು ಹೇಳಿದ್ದಾರೆ.

ನಡೆದ ಘಟನೆಯ ಬಗ್ಗೆ ಮೆಲುಕು ಹಾಕಿದ ಅವರು, “ನಾನು ನಿದ್ರಿಸುತ್ತಿರುವಾಗ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತೇನೆ. ಆ ಸಂದರ್ಭದಲ್ಲಿ ನನ್ನ ಮುಂದೆ ಮಾಂಸವಿತ್ತು. ಅದನ್ನು ಕತ್ತರಿಸಲೆಂದು ನಾನು ಚಾಕುವನ್ನು ತೆಗೆದುಕೊಂಡಿದ್ದೇನೆ. ಆದರೆ ಹೇಗೆ ತೆಗೆದುಕೊಂಡೆ ಎಂದು ನನಗೆ ನೆನಪಿಲ್ಲ, ನಾನು ಕೂಡ ಗೊಂದಲಕ್ಕೊಳಗಾಗಿದ್ದೇನೆ. ಮಾಂಸ ಎಂದು ಈ ರೀತಿ ಮಾಡಿಕೊಂಡೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Shubh Raj Yoga: 100 ವರ್ಷಗಳ ಬಳಿಕ ಒಂದೇ ಬಾರಿ ರೂಪುಗೊಂಡ 4 ರಾಜಯೋಗ: ಈ ರಾಶಿಯವರಿಗೆ ಅಪಾರ ಸಂಪತ್ತು ಪ್ರಾಪ್ತಿ!

ಸದ್ಯ ಅವರ ಶಿಶ್ನವನ್ನು ಮರುಜೋಡಿಸಲಾಗಿದ್ದು, ಶಸ್ತ್ರಚಿಕಿತ್ಸೆಯ ಆರು ವಾರಗಳ ಕೊಂಚ ಚೇತರಿಕೆ ಕಂಡಿದೆ ಎಂದು ವೈದ್ಯರು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News