‘ಯುವಿಯಂತೆ 6 ಸಿಕ್ಸರ್ ಬಾರಿಸಬಲ್ಲ ಶಕ್ತಿಶಾಲಿ ಈ ಬ್ಯಾಟ್ಸ್ ಮ್ಯಾನ್’: ಆಫ್ರಿಕಾದ ಮಾಜಿ ವೇಗಿ ಈ ಮಾತನ್ನು ಹೇಳಿದ್ದು ಯಾರಿಗೆ?

ಇನ್ನು ಈ ಪಂದ್ಯದ ನಂತರ, ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇಯ್ನ್ ಭಾರತೀಯ ಆಟಗಾರನ ದೊಡ್ಡ ಅಭಿಮಾನಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಆಟಗಾರ ಯುವರಾಜ್ ಸಿಂಗ್ ಅವರಂತೆ ಓವರ್‌ನಲ್ಲಿ 6 ಸಿಕ್ಸರ್ ಬಾರಿಸುವ ಸಾಮರ್ಥ್ಯ ಹೊಂದಿದ್ದಾನೆ ಎಂದು ಕೊಂಡಾಡಿದ್ದಾರೆ.

Written by - Bhavishya Shetty | Last Updated : Oct 7, 2022, 04:29 PM IST
    • ಭರ್ಜರಿ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ 86 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ
    • ಈ ಆಟಗಾರ ಯುವರಾಜ್ ಸಿಂಗ್ ಅವರಂತೆ ಓವರ್‌ನಲ್ಲಿ 6 ಸಿಕ್ಸರ್ ಬಾರಿಸುವ ಸಾಮರ್ಥ್ಯ ಹೊಂದಿದ್ದಾನೆ
    • ಸ್ಟೇಯ್ನ್ ಭಾರತೀಯ ಆಟಗಾರನ ದೊಡ್ಡ ಅಭಿಮಾನಿಯಾಗಿದ್ದಾರೆ ಎಂದು ಹೇಳಿಕೊಂಡ ಡೇಲ್ ಸ್ಟೇಯ್ನ್
‘ಯುವಿಯಂತೆ 6 ಸಿಕ್ಸರ್ ಬಾರಿಸಬಲ್ಲ ಶಕ್ತಿಶಾಲಿ ಈ ಬ್ಯಾಟ್ಸ್ ಮ್ಯಾನ್’: ಆಫ್ರಿಕಾದ ಮಾಜಿ ವೇಗಿ ಈ ಮಾತನ್ನು ಹೇಳಿದ್ದು ಯಾರಿಗೆ? title=
Sanju Samson

ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಲಕ್ನೋದ ಅಟಲ್ ವಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 9 ರನ್‌ಗಳಿಂದ ಸೋಲು ಅನುಭವಿಸಬೇಕಾಯಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಭಾರತಕ್ಕೆ 250 ರನ್ ಗುರಿ ನೀಡಿತ್ತು ಆದರೆ ಟೀಂ ಇಂಡಿಯಾ ಕೇವಲ 240 ರನ್ ಗಳಿಸಲಷ್ಟೇ ಶಕ್ತವಾಯಿತು.

ಇನ್ನು ಈ ಪಂದ್ಯದ ನಂತರ, ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇಯ್ನ್ ಭಾರತೀಯ ಆಟಗಾರನ ದೊಡ್ಡ ಅಭಿಮಾನಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಆಟಗಾರ ಯುವರಾಜ್ ಸಿಂಗ್ ಅವರಂತೆ ಓವರ್‌ನಲ್ಲಿ 6 ಸಿಕ್ಸರ್ ಬಾರಿಸುವ ಸಾಮರ್ಥ್ಯ ಹೊಂದಿದ್ದಾನೆ ಎಂದು ಕೊಂಡಾಡಿದ್ದಾರೆ.  

ಇದನ್ನೂ ಓದಿ: ಇಡೀ ಕ್ರಿಕೆಟ್ ಆಟದ ಸ್ವರೂಪವೇ ಬದಲಾಗಲು ಕಾರಣವಾಯ್ತು ಒಂದು ಹುಡುಗಿಯ ಸ್ಕರ್ಟ್!

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಭರ್ಜರಿ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್ 86 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ. ಸಂಜು ಸ್ಯಾಮ್ಸನ್ ಅವರ ಈ ಇನ್ನಿಂಗ್ಸ್ ಬಗ್ಗೆ ಡೇಲ್ ಸ್ಟೇನ್ ದೊಡ್ಡ ಹೇಳಿಕೆ ನೀಡಿದ್ದಾರೆ. “39ನೇ ಓವರ್‌ನಲ್ಲಿ ರಬಾಡ ನೋ ಬಾಲ್ ಎಸೆದಾಗ ಅವರು ತುಂಬಾ ನರ್ವಸ್ ಆಗಿದ್ದರು, ಯುವರಾಜ್ ಅವರಂತೆ ಸ್ಯಾಮ್ಸನ್ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಬಾರದು ಎಂದು ಭಾವಿಸಿದ್ದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಕೊನೆಯ ಓವರ್‌ನಲ್ಲಿ 30 ರನ್ ಗಳಿಸಬೇಕಾಗಿತ್ತು, ಆದರೆ ಸಂಜು ಸ್ಯಾಮ್ಸನ್ 3 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 20 ರನ್ ಗಳಿಸಲಷ್ಟೇ ಶಕ್ತರಾದರು” ಎಂದು ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಕುರಿತು ಡೇಲ್ ಸ್ಟೇಯ್ನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, 'ಕೊನೆಯ ಓವರ್ ನಲ್ಲಿ ರಬಾಡ ನೋ ಬಾಲ್ ಬೌಲ್ ಮಾಡಿದಾಗ ನರ್ವಸ್ ಆಗಿದ್ದೆ. ಏಕೆಂದರೆ ಸಂಜು ಸ್ಯಾಮ್ಸನ್ ಯುವರಾಜ್ ಸಿಂಗ್ ಅವರ ಸಾಮರ್ಥ್ಯವನ್ನು ಹೊಂದಿರುವ ಆಟಗಾರ, ಅವರು ಆ ಆರು ಸಿಕ್ಸರ್‌ಗಳನ್ನು ಬಾರಿಸಬಲ್ಲರು ಎಂದು ಭಾವಿಸಿದ್ದೆ. ನಾನು ಅವರನ್ನು ಐಪಿಎಲ್‌ನಲ್ಲಿ ನೋಡಿದ್ದೇನೆ, ಬೌಲರ್‌ಗಳನ್ನು ಕೆಳಗಿಳಿಸುವ ಮತ್ತು ಬೌಂಡರಿ ಬಾರಿಸುವ ಅವರ ಸಾಮರ್ಥ್ಯ, ವಿಶೇಷವಾಗಿ ಆಟದ ಕೊನೆಯ 2 ಓವರ್‌ಗಳಲ್ಲಿ ನಂಬಲಸಾಧ್ಯವಾಗಿದೆ' ಎಂದು ಹೇಳಿದರು. 

ಇದನ್ನೂ ಓದಿ: Viral Video : ಭಾರತ ಸೋಲಿನ ನಂತರ ಚಪ್ಪಾಳೆ ತಟ್ಟಿದ ಕಾರ್ತಿಕ್, ಪಂಚ್ ನೀಡಿದ ರೋಹಿತ್!

ಪಂದ್ಯದ ಕೊನೆಯ ಓವರ್‌ ಬಗ್ಗೆ ಮಾತನಾಡಿದ ಸಂಜು ಸ್ಯಾಮ್ಸನ್, “ಆಫ್ರಿಕನ್ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು ಆದರೆ ತಬ್ರೇಜ್ ಶಮ್ಸಿ ಸ್ವಲ್ಪ ದುಬಾರಿ ಎಂದು ಸಾಬೀತುಪಡಿಸುತ್ತಿದ್ದಾರೆ. ಅವನಿಗೆ ಒಂದು ಓವರ್ ಉಳಿದಿದೆ ಎಂದು ನನಗೆ ತಿಳಿದಿತ್ತು ಮತ್ತು ನಮಗೆ 24 ರನ್ ಬೇಕಾಗಿತ್ತು. ನಾನು ನಾಲ್ಕು ಸಿಕ್ಸರ್‌ಗಳನ್ನು ಹೊಡೆಯಬಹುದೆಂದು ನನಗೆ ಖಚಿತವಾಗಿತ್ತು. ನಾವು ಕೊನೆಯವರೆಗೂ ಗೆಲ್ಲಲು ಪ್ರಯತ್ನಿಸುತ್ತೇವೆ. ಅದು ನಮ್ಮ ತಂತ್ರವಾಗಿತ್ತು” ಎಂದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News