ಇಡೀ ಕ್ರಿಕೆಟ್ ಆಟದ ಸ್ವರೂಪವೇ ಬದಲಾಗಲು ಕಾರಣವಾಯ್ತು ಒಂದು ಹುಡುಗಿಯ ಸ್ಕರ್ಟ್!

ಇನ್ನು ಕ್ರಿಕೆಟ್ ಲೋಕದಲ್ಲಿ ಅದೆಷ್ಟೋ ಸಾಧನೆಗೈದ ದಿಗ್ಗಜರಿದ್ದಾರೆ. ಇವರೆಲ್ಲರೂ ಒಂದಿಲ್ಲೊಂದು ವಿಭಿನ್ನತೆಯನ್ನು ತನ್ನಲ್ಲಿ ತೊಡಗಿಸಿಕೊಂಡವರು. ಇದರ ಜೊತೆಗೆ ಕ್ರಿಕೆಟ್ ನ ಜೀವಾಳವಾಗಿರುವ ಬ್ಯಾಟಿಂಗ್ ಮತ್ತು ಬೌಲಿಂಗ್ ಅನೇಕ ಬಾರಿ ಬೆರಗು ಮೂಡಿಸುತ್ತವೆ. ಇಲ್ಲಿ ಬ್ಯಾಟ್ ಹಿಡಿದು ನಿಂತ ದಾಂಡಿಗ, ಎದುರಾಳಿ ಎಸೆಯುವ ಚೆಂಡನ್ನು  ಮೈದಾನದಿಂದ ಹೊರಗೆಸೆದಿದ್ದೂ ಇದೆ.

Written by - Bhavishya Shetty | Last Updated : Oct 7, 2022, 03:51 PM IST
    • ಕ್ರಿಕೆಟ್ ಲೋಕದಲ್ಲಿ ಅದೆಷ್ಟೋ ಸಾಧನೆಗೈದ ದಿಗ್ಗಜರಿದ್ದಾರೆ
    • ಅಂಡರ್ ಆರ್ಮ್ ಬೌಲಿಂಗ್ ಎಂದರೆ ತುಸು ಬಗ್ಗಿ ನೆಲದ ಹತ್ತಿರದಿಂದ ಚೆಂಡನ್ನು ಎಸೆಯುವುದು
    • ಈ ಸ್ವರೂಪದ ಬದಲಾವಣೆಗೆ ಕಾರಣವಾಗಿದ್ದು ಒಂದು ಹುಡುಗಿಯ ಸ್ಕರ್ಟ್
ಇಡೀ ಕ್ರಿಕೆಟ್ ಆಟದ ಸ್ವರೂಪವೇ ಬದಲಾಗಲು ಕಾರಣವಾಯ್ತು ಒಂದು ಹುಡುಗಿಯ ಸ್ಕರ್ಟ್!  title=
Under Arm Bowling

ಕ್ರಿಕೆಟ್ ಎಂದರೆ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಪ್ರಸಿದ್ಧಿ ಪಡೆದ ಕ್ರೀಡೆ ಎನ್ನಬಹುದು. ಭಾರತದಲ್ಲಿ ಹಾಕಿ ರಾಷ್ಟ್ರೀಯ ಕ್ರೀಡೆಯಾಗಿದ್ದರೂ ಸಹ ಉಪ ಕ್ರೀಡೆಯಾಗಿ ಸ್ಥಾನ ಪಡೆದ ಕ್ರಿಕೆಟ್, ಹಾಕಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದೆ ಎಂದರೆ ತಪ್ಪಾಗಲಾರದು.

ಇನ್ನು ಕ್ರಿಕೆಟ್ ಲೋಕದಲ್ಲಿ ಅದೆಷ್ಟೋ ಸಾಧನೆಗೈದ ದಿಗ್ಗಜರಿದ್ದಾರೆ. ಇವರೆಲ್ಲರೂ ಒಂದಿಲ್ಲೊಂದು ವಿಭಿನ್ನತೆಯನ್ನು ತನ್ನಲ್ಲಿ ತೊಡಗಿಸಿಕೊಂಡವರು. ಇದರ ಜೊತೆಗೆ ಕ್ರಿಕೆಟ್ ನ ಜೀವಾಳವಾಗಿರುವ ಬ್ಯಾಟಿಂಗ್ ಮತ್ತು ಬೌಲಿಂಗ್ ಅನೇಕ ಬಾರಿ ಬೆರಗು ಮೂಡಿಸುತ್ತವೆ. ಇಲ್ಲಿ ಬ್ಯಾಟ್ ಹಿಡಿದು ನಿಂತ ದಾಂಡಿಗ, ಎದುರಾಳಿ ಎಸೆಯುವ ಚೆಂಡನ್ನು  ಮೈದಾನದಿಂದ ಹೊರಗೆಸೆದಿದ್ದೂ ಇದೆ. ಅಷ್ಟೇ ಅಲ್ಲ, ಅಬ್ಬಬ್ಬಾ ಎನ್ನುವಂತೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುವ ಬೌಲರ್ ಗಳು ಒಂದು ಕ್ಷಣ ಅಚ್ಚರಿ ಮೂಡಿಸಿದ್ದೂ ಇದೆ.

ಇದನ್ನೂ ಓದಿ: 77 ಎಸೆತ, 22 ಸಿಕ್ಸರ್, 205 ರನ್..ಈ ದಾಖಲೆ ಮುರಿಯುವುದುಂಟೇ? ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯಿದು!

ಇನ್ನು ಬೌಲಿಂಗ್ ಸ್ವರೂಪದಲ್ಲಿ ಕೆಲ ಕಾನ್ಸೆಪ್ಟ್ ಗಳಿವೆ. ಅವುಗಳಲ್ಲಿ ಅಂಡರ್ ಆರ್ಮ್ ಮತ್ತು ರೌಂಡ್ ಆರ್ಮ್ ಬೌಲಿಂಗ್ ಕೂಡ ಸೇರಿವೆ. ಅಂಡರ್ ಆರ್ಮ್ ಬೌಲಿಂಗ್ ಎಂದರೆ ತುಸು ಬಗ್ಗಿ ನೆಲದ ಹತ್ತಿರದಿಂದ ಚೆಂಡನ್ನು ಎಸೆಯುವುದು. ಇದು ಆರಂಭಿಕ ಕ್ರಿಕೆಟ್ ಕಾಲದಲ್ಲಿ ನಡೆಯುತ್ತಿದ್ದ ಬೌಲಿಂಗ್ ಶೈಲಿ. ಈ ಬೌಲಿಂಗ್ ಮೂಲಕವೂ ಅನೇಕರು ಸ್ಪಿನ್ ಮಾಡುತ್ತಾರೆ. ಅಂತಹ ಕೌಶಲ್ಯ ಕೆಲವರಲ್ಲಿ ಇದೆ.

ಆದರೆ ಆ ಈ ಸ್ವರೂಪದ ಬದಲಾವಣೆಗೆ ಕಾರಣವಾಗಿದ್ದು ಒಂದು ಹುಡುಗಿಯ ಸ್ಕರ್ಟ್. ಇದು ನಂಬಲು ಕೊಂಚ ಅಸಾಧ್ಯವಾದರೂ ಸಹ ನಿಜ. ಅದು 18 ನೇ ಶತಮಾನದ ಆರಂಭ. ಇಂಗ್ಲೆಂಡ್ ನಲ್ಲಿ ಪ್ರತಿಷ್ಠಿತ ಮನೆತನ ಹುಡುಗಿಯರು ಮೋಜಿಗಾಗಿ ಕ್ರಿಕೆಟ್ ಆಡುತ್ತಿದ್ದರು. ಈ ಸಂದರ್ಭದಲ್ಲಿ  ಅವರು ಉದ್ದವಾದ ಸ್ಕರ್ಟ್ ಗಳನ್ನು ಹಾಕುತ್ತಿದ್ದರು. ಇದು ಅವರಿಗೆ ದೊಡ್ಡ ಸಮಸ್ಯೆಯಾಗಿತ್ತು. ಅಷ್ಟೇ ಅಲ್ಲದೆ, ತುಸು ಬಗ್ಗಿಕೊಂಡು ಅಂಡರ್ ಆರ್ಮ್ ಬೌಲಿಂಗ್ ಮಾಡಲು ಕಷ್ಟವಾಗುತ್ತಿತ್ತು. ಆದರೆ ಅವರಿಗೆ ಬೇರೆ ರೀತಿಯ ಬಟ್ಟೆ ಹಾಕುವ ಅವಕಾಶ ಇರಲಿಲ್ಲ.

ಹೀಗಾಗಿ ಈ ಸ್ವರೂಪಕ್ಕೆ ಪರ್ಯಾಯವಾಗಿ ಏನಾದರು ಮಾಡಬೇಕು ಎಂದಾಗ ಆಲೋಚನೆಗೆ ಬಂದಿದ್ದು ರೌಂಡ್ ಆರ್ಮ್ ಬೌಲಿಂಗ್. ಈ ಸಲಹೆ ನೀಡಿದ್ದು ಇಂಗ್ಲೆಂಡ್ ಬೌಲರ್ ಜಾನ್ ವಿಲ್ಸ್ ಎಂಬವರ ಸಹೋದರಿ ಕ್ರಿಸ್ಟಿನಾ ವಿಲ್ಸ್. ಕೆಳಗೆಯಿಂದ ಚೆಂಡು ಎಸೆಯುವ ಬದಲು ಸ್ವಲ್ಪ ಮೇಲೆಯಿಂದ ಎಸೆಯಬಹುದಲ್ಲವೇ ಎಂದು ಆಲೋಚಿಸಿ ಈ ಸ್ವರೂಪವನ್ನು ಚಾಲ್ತಿಗೆ ತಂದರು. ಅಂದರೆ ಕೈಯನ್ನು ಸ್ವಲ್ಪ ಅಡ್ಡವಾಗಿಟ್ಟುಕೊಂಡು ಬೌಲಿಂಗ್ ಮಾಡುವುದು. ಈ ರೀತಿಯ ಬೌಲಿಂಗ್ ನ್ನು ಶ್ರೀಲಂಕಾದ ಮಾಜಿ ಬೌಲರ್ ಲಸಿತ್ ಮಾಲಿಂಗಾ ಮಾಡುತ್ತಿದ್ದರು. ಆದರೆ ಕೈ ಭುಜದ ಮೇಲೆ ಬರಬಾರದು ಅಷ್ಟೇ.

ಕ್ರಿಸ್ಟಿನಾ ಉಪಾಯವನ್ನು ಸಹೋದರ ಜಾನ್ ಪಂದ್ಯದಲ್ಲಿ ಅಳವಡಿಸಿಕೊಂಡರು. ಆದರೆ ಅದನ್ನು ಕಂಡ ಅಂಪೈರ್ ನೋಬಾಲ್ ಕೊಟ್ಟರು. ಇದರಿಂದ ಕೋಪಗೊಂಡ ಜಾನ್ ನೇರ ಮೈದಾನದಿಂದ ಹೊರನಡೆದು ತನ್ನ ಕುದುರೆ ಏರಿ ಹೊರಟೇ ಬಿಟ್ಟರು. ಆ ಬಳಿಕ ಅವರು ಎಂದಿಗೂ ಕ್ರಿಕೆಟ್ ಆಡಲೇ ಇಲ್ಲ. ಪಂದ್ಯ ಬಿಟ್ಟು ಜಾನ್ ತೆರಳಿದರೂ ಸಹ ಕ್ರಿಕೆಟ್ ಲೋಕಕ್ಕೆ ಹೊಸ ಬೌಲಿಂಗ್ ಸ್ವರೂಪ ನೀಡಿದ್ದು ಜಾನ್ ಕೊಡುಗೆ ಎನ್ನಬಹುದು. 

ಇದನ್ನೂ ಓದಿ: India vs South Africa: ಮೂರು ಪ್ರಯತ್ನಗಳ ನಂತರವೂ ಕ್ಯಾಚ್ ಕೈಬಿಟ್ಟ ಮೊಹಮ್ಮದ್ ಸಿರಾಜ್

ಹಲವಾರು ಚರ್ಚೆಗಳ ಬಳಿಕ 1835ರಲ್ಲಿ ರೌಂಡ್ ಆರ್ಮ್ ಬೌಲಿಂಗ್ ಅಧಿಕೃತ ಎಂದು ಘೋಷಣೆ ಮಾಡಲಾಯಿತು. ಇನ್ನು ರೌಂಡ್ ಆರ್ಮ್ ಬೌಲಿಂಗ್ ನ್ನು ಕಾನೂನುಬದ್ಧಗೊಳಿಸಿದ ಎಂಸಿಸಿ ಭುಜಕ್ಕಿಂತ ಎತ್ತರದಲ್ಲಿಯೂ ಬೌಲಿಂಗ್ ಮಾಡಲು ಅವಕಾಶ ನೀಡಿತ್ತು. ಆದರೆ ಇದು ಮತ್ತೆ ವಿವಾದಕ್ಕೆ ಕಾರಣವಾಗಿ 1864ರಲ್ಲಿ ನಿಯಮಗಳನ್ನು ಬದಲಾವಣೆ ಮಾಡಿ ಎಂಸಿಸಿ ಆದೇಶ ಹೊರಡಿಸಿತು. ಬೌಲರ್ ಕೈ ಮೇಲಕ್ಕೆ ಎತ್ತಿ ನೇರವಾಗಿ ಬೌಲಿಂಗ್ ಮಾಡಬೇಕು. ಮೊಣಕೈ ಮಡಿಚಬಾರದು ಎಂದು ನಿಯಮ ರೂಪಿಸಿತು. ಈ ಬಳಿಕ ಕ್ರಿಕೆಟ್ ನಲ್ಲಿ ಓವರ್ ಆರ್ಮ್ ಬೌಲಿಂಗ್ ಶೈಲಿ ಮುನ್ನೆಲೆಗೆ ಬಂದು ಇಂದಿಗೂ ಚಾಲ್ತಿಯಲ್ಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News