Viral Video: ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್ ಮಗಳು ತುಳುವಿನಲ್ಲಿ ಅಮ್ಮನೊಂದಿಗೆ ಮಾತನಾಡೋ ಚಂದ ನೋಡಿ

ಸೂರ್ಯ ಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ದಂಪತಿಯ ಮುದ್ದಾದ ಹೆಣ್ಣು ಮಗುವಿದೆ. ದೇವಿಶಾ ಹುಟ್ಟಿ ಬೆಳೆದಿದ್ದು ಮಹಾರಾಷ್ಟ್ರದಲ್ಲಾದರೂ ಅವರ ತಂದೆ ತಾಯಿಯ ಮೂಲ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ. ಅಷ್ಟೇ ಅಲ್ಲದೆ ಅಅವರ ಮಾತೃ ಭಾಷೆ ತುಳು.

Written by - Bhavishya Shetty | Last Updated : Oct 9, 2022, 08:31 PM IST
    • ಸೂರ್ಯ ಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ದಂಪತಿಯ ಮುದ್ದಾದ ಹೆಣ್ಣು ಮಗುವಿದೆ
    • ಸೂರ್ಯ ಕುಮಾರ್ ಯಾದವ್ ಮಗಳ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ
    • ತುಳು ಭಾಷೆಯಲ್ಲಿ ತೊದಲು ನುಡಿಯುತ್ತಿರುವ ಕಂದಮ್ಮನ ವಿಡಿಯೋ ನೋಡಿ
Viral Video: ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್ ಮಗಳು ತುಳುವಿನಲ್ಲಿ ಅಮ್ಮನೊಂದಿಗೆ ಮಾತನಾಡೋ ಚಂದ ನೋಡಿ title=
Surya Kumar Yadav Daughter

ಸೂರ್ಯ ಕುಮಾರ್ ಯಾದವ್… ಸದ್ಯ ಟೀಂ ಇಂಡಿಯಾದಲ್ಲಿ ಅಬ್ಬರಿಸುತ್ತಿರುವ ಈ ಹೆಸರು ಕೇಳದವಿರಿಲ್ಲ ಎನ್ನಬಹುದು. ದಾಖಲೆಗಳನ್ನು ಹೊಡೆದುರುಳಿಸಿ ತನ್ನದೇ ಹೆಸರನ್ನು ಮುದ್ರಿಸಿಕೊಳ್ಳುತ್ತಿರುವ ಟೀಂ ಇಂಡಿಯಾದ ಆಟಗಾರ ಸೂರ್ಯ ಕುಮಾರ್ ಯಾದವ್ ಮಗಳ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ.

ಇದನ್ನೂ ಓದಿ: Javagal Srinath: ಧವನ್ ಗೆ ಕಾಯಿನ್ ಕೊಡದೆ ಟಾಸಿಂಗ್ ಸಮಯದಲ್ಲಿ ತನ್ನದೇ ಲೋಕದಲ್ಲಿ ಕಳೆದು ಹೋದ ಜಾವಗಲ್ ಶ್ರೀನಾಥ್!

ಸೂರ್ಯ ಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ದಂಪತಿಯ ಮುದ್ದಾದ ಹೆಣ್ಣು ಮಗುವಿದೆ. ದೇವಿಶಾ ಹುಟ್ಟಿ ಬೆಳೆದಿದ್ದು ಮಹಾರಾಷ್ಟ್ರದಲ್ಲಾದರೂ ಅವರ ತಂದೆ ತಾಯಿಯ ಮೂಲ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ. ಅಷ್ಟೇ ಅಲ್ಲದೆ ಅಅವರ ಮಾತೃ ಭಾಷೆ ತುಳು. ಇನ್ನು ದೇವಿಶಾ ಕೂಡ ತುಳುವಿನಲ್ಲಿಯೇ ಮಾತನಾಡುತ್ತಿದ್ದು, ತಮ್ಮ ಮಗಳ ಜೊತೆ ನಡೆಸುತ್ತಿರುವ ಸಂಭಾಷಣೆಯನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

 

 

ಕಂದಮ್ಮ ಯಾವುದೋ ಚಿತ್ರವನ್ನು ಬರೆಯುತ್ತಿದ್ದು, ತಾಯಿ ಬಳಿ ತನಗೆ ಕಿತ್ತಳೆ ಹಣ್ಣು ಬೇಕು ಎಂದು ತುಳುವಿನಲ್ಲಿ ಕೇಳುತ್ತಿದೆ. ಇದಕ್ಕೆ ದೇವಿಶಾ, ಎಲ್ಲಿದೆ ಕಿತ್ತಳೆ ಎಂದು ಮರು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ದೇವಿಶಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಸೂರ್ಯ ಕುಮಾರ್ ಯಾದವ್ 2022 ರಲ್ಲಿ T20I ಗಳಲ್ಲಿ ತಮ್ಮ ಅದ್ಭುತ ಓಟವನ್ನು ಮುಂದುವರೆಸಿದ್ದು, 700 ಕ್ಕೂ ಹೆಚ್ಚು ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. 2022 ರಲ್ಲಿ T20I ಗಳಲ್ಲಿ ಅವರ ರನ್ ಗಳಿಕೆಯು ದಾಖಲೆಯಾಗಿದೆ. ಜೊತೆಗೆ ಸೂರ್ಯಕುಮಾರ್ 2018 ರಲ್ಲಿ ಶಿಖರ್ ಧವನ್ 689 ರನ್‌ಗಳ ಮೂಲಕ ನಿರ್ಮಿಸಿದ್ದ ದಾಖಲೆಯನ್ನು ಮೀರಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖಿಸಲೇ ಬೇಕು. ಇದರ ಜೊತೆಗೆ ಯಾದವ್ 180 ಸ್ಟ್ರೈಕ್ ರೇಟ್‌ನಲ್ಲಿ ಮತ್ತು 40 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ಈ ರನ್ ಗಳಿಸಿದ್ದಾರೆ ಎಂಬುದು ಅವರ ದಾಖಲೆಯನ್ನು ಇನ್ನಷ್ಟು ಮೆರುಗುಗೊಳಿಸುತ್ತಿದೆ.

ಇದನ್ನೂ ಓದಿ: MS Dhoni: IPL 2023ರಲ್ಲಿ ಧೋನಿ ಆಡುವುದಿಲ್ಲ! ಈ ಬಗ್ಗೆ CSK ಹೇಳಿದ್ದೇನು?

ಹೈದರಾಬಾದ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20ಐನಲ್ಲಿ ಅರ್ಧಶತಕ ಗಳಿಸಿದ ಯಾದವ್ ಒಟ್ಟು 801 ರೇಟಿಂಗ್ ಪಾಯಿಂಟ್‌ ಗಳಿಸಿದ್ದರು. ಈ ಮೂಲಕ ಇತ್ತೀಚಿನ MRF ಟೈರ್ಸ್ ICC ಪುರುಷರ T20I ಆಟಗಾರರ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News