ನವದೆಹಲಿ: ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಕಳಪೆ ಪ್ರದರ್ಶನಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ.ಅಲ್ಲದೆ ಕೆಲವು ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಬಹಿರಂಗವಾಗಿ ಟೀಕಿಸಿದ್ದಾರೆ.
Sarfaraz Ahmed "some people are sitting on television thinking they are God" #CWC19 pic.twitter.com/fd8spR7iKm
— Saj Sadiq (@Saj_PakPassion) June 22, 2019
ಆದರೆ ಈಗ ಇದೆಲ್ಲದಕ್ಕೂ ತಕ್ಕ ತಿರುಗೇಟನ್ನು ಪಾಕ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ನೀಡಿದ್ದಾರೆ. ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಆಟಗಾರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅವರು ಟಿವಿಯಲ್ಲಿರುವ ದೇವರಗಳಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
"ಉನ್ಕೆ ನಜರ್ ಮೇ ತೋ ಹಮ್ ಪ್ಲೇಯರ್ ಹೈಯ್ ನಹಿ ಹೈ; ಸಬ್ ಖುದಾ ಬಾನ್ ಕೆ ಟಿವಿ ಪೆ ಬೈಥೆ ಹೈನ್ (ಅವರ ದೃಷ್ಟಿಯಲ್ಲಿ, ನಾವು ಆಟಗಾರರು ಸಹ ಅಲ್ಲ. ಅವರು ಟಿವಿಯಲ್ಲಿರುವ ದೇವರುಗಳಾಗಿದ್ದಾರೆ)" ಎಂದು ಅಹ್ಮದ್ ಹೇಳಿದರು. ವಿಶ್ವಕಪ್ ನಲ್ಲಿ ಭಾರತ ತಂಡದ ವಿರುದ್ಧ ಪಾಕ್ ತಂಡವು ಸೋಲನ್ನು ಅನುಭವಿಸಿದ ರೀತಿಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಸರ್ಫರಾಜ್ ಅವರನ್ನು ಟೀಕಿಸಿದ್ದರು.
ಈಗ ದಕ್ಷಿಣ ಆಫ್ರಿಕಾ ವಿರುದ್ಧ ಇರುವ ಪಂದ್ಯವು ಸರ್ಫರಾಜ್ ಅಹ್ಮದ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಕೌಶಲ್ಯಕ್ಕೆ ನಿಜವಾದ ಅಗ್ನಿ ಪರೀಕ್ಷೆಯಾಗಲಿದೆ. ಅಚ್ಚರಿ ಎಂದರೆ ದಕ್ಷಿಣ ಆಫ್ರಿಕಾ ತಂಡವು ಈ ಬಾರಿಯ ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನವನ್ನು ನೀಡಿದೆ.