ಮಹಿಳೆಯರ ಏಷ್ಯಾಕಪ್ 2024 ಫೈನಲ್: 20 ವರ್ಷಗಳ ಬಳಿಕ ಟೀಂ ಇಂಡಿಯಾ ಮಣಿಸಿ ಮೊದಲ ಬಾರಿ ಟ್ರೋಫಿ ಗೆದ್ದ ಶ್ರೀಲಂಕಾ ವನಿತೆಯರು

Women's Asia Cup 2024 Final: ಶ್ರೀಲಂಕಾ ಏಷ್ಯಾಕಪ್ ಗೆದ್ದಿರುವುದು ಇದೇ ಮೊದಲು. ಭಾನುವಾರ (ಜುಲೈ 28) ರಂಗಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿತ್ತು.

Written by - Bhavishya Shetty | Last Updated : Jul 28, 2024, 07:40 PM IST
    • ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡ ಇತಿಹಾಸ ಸೃಷ್ಟಿಸಿದೆ.
    • ಶ್ರೀಲಂಕಾ ಏಷ್ಯಾಕಪ್ ಗೆದ್ದಿರುವುದು ಇದೇ ಮೊದಲು
    • ಟೂರ್ನಿಯ ಇತಿಹಾಸದಲ್ಲಿ ಶ್ರೀಲಂಕಾ 5 ಬಾರಿ ಫೈನಲ್‌ʼನಲ್ಲಿ ಸೋತಿತ್ತು
ಮಹಿಳೆಯರ ಏಷ್ಯಾಕಪ್ 2024 ಫೈನಲ್: 20 ವರ್ಷಗಳ ಬಳಿಕ ಟೀಂ ಇಂಡಿಯಾ ಮಣಿಸಿ ಮೊದಲ ಬಾರಿ ಟ್ರೋಫಿ ಗೆದ್ದ ಶ್ರೀಲಂಕಾ ವನಿತೆಯರು title=
File Photo

Women's Asia Cup 2024 Final: ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡ ಇತಿಹಾಸ ಸೃಷ್ಟಿಸಿದೆ. 2024ರ ಮಹಿಳಾ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 8 ವಿಕೆಟ್‌ʼಗಳಿಂದ ಸೋಲಿಸುವ ಮೂಲಕ ಚೊಚ್ಚಲ ಬಾರಿಗೆ ಏಷ್ಯಾಕಪ್‌ ಟ್ರೋಫಿ ಗೆದ್ದುಕೊಂಡಿದೆ ಶ್ರೀಲಂಕಾ ಮಹಿಳಾ ಪಡೆ.

ಇದನ್ನೂ ಓದಿ: ಇದು ಅರಮನೆ, ಇಂದ್ರಭವನ ಅಲ್ಲ.. ಸ್ಟಾರ್‌ ನಟನೊಬ್ಬ ವಾಸಿಸುವ ಭವ್ಯ ಬಂಗಲೆ..! ಯಾರದ್ದು ಗೊತ್ತೆ..?

ಶ್ರೀಲಂಕಾ ಏಷ್ಯಾಕಪ್ ಗೆದ್ದಿರುವುದು ಇದೇ ಮೊದಲು. ಭಾನುವಾರ (ಜುಲೈ 28) ರಂಗಿ ದಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿತ್ತು. ಸ್ಮೃತಿ ಮಂಧಾನ ಅರ್ಧಶತಕದೊಂದಿಗೆ ನಿಗದಿತ 20 ಓವರ್‌ʼಗಳಲ್ಲಿ 165 ರನ್ ಗಳಿಸಿದ್ದರು. ಭಾರತ ನೀಡಿದ 166 ರನ್‌ʼಗಳ ಗುರಿಯನ್ನು ಶ್ರೀಲಂಕಾ 18.4 ಓವರ್‌ʼಗಳಲ್ಲಿ ಕೇವಲ 2 ವಿಕೆಟ್‌ ಕಳೆದುಕೊಂಡು ಸಾಧಿಸಿತು.

ಶ್ರೀಲಂಕಾ ಪರ ನಾಯಕಿ ಚಮರಿ ಅಥಾಪಟು ಮತ್ತು ಹರ್ಷಿತಾ ಸಮರವಿಕ್ರಮ ಅರ್ಧಶತಕ ಗಳಿಸಿದರು. ಇದರೊಂದಿಗೆ ಶ್ರೀಲಂಕಾ ಭರ್ಜರಿ ಜಯ ಸಾಧಿಸಿತು. ಅಂದಹಾಗೆ ಈ ಪಂದ್ಯದಲ್ಲಿ ಅತಿಯಾದ ಆತ್ಮವಿಶ್ವಾಸ, ಕಳಪೆ ನಾಯಕತ್ವ,  ಕೈಬಿಟ್ಟ ಸುಲಭ ಕ್ಯಾಚ್ ಹಾಗೂ ಕಳಪೆ ಬೌಲಿಂಗ್ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ ಎಂದೇ ಹೇಳಬಹುದು.  ಭಾರತ ಮತ್ತು ಬಾಂಗ್ಲಾದೇಶ ನಂತರ ಏಷ್ಯಾಕಪ್ ಗೆದ್ದ ಮೂರನೇ ಮಹಿಳಾ ತಂಡ ಶ್ರೀಲಂಕಾ.

ಇದನ್ನೂ ಓದಿ: ಬಿಳಿ ಬಟ್ಟೆ ಮೇಲೆ ಹಳದಿ ಕಲೆಗಳಿದ್ಯಾ? ಹಾಗಾದ್ರೆ ಜಸ್ಟ್ 5 ರೂ. ಬೆಲೆಯ ಈ ವಸ್ತುವಿನಿಂದ ವಾಶ್‌ ಮಾಡಿ

ಆರನೇ ಪ್ರಯತ್ನದಲ್ಲಿ ಶ್ರೀಲಂಕಾ ಗೆಲುವು

2004ರಿಂದ ಮಹಿಳೆಯರ ಏಷ್ಯಾಕಪ್ ಟೂರ್ನಿ ನಡೆಯುತ್ತಿದೆ. ಇದು ಈ ವರ್ಷ 8ನೇ ಸ್ಪರ್ಧೆಯಾಗಿದೆ. ಈ ಟೂರ್ನಿಯ ಇತಿಹಾಸದಲ್ಲಿ ಶ್ರೀಲಂಕಾ 5 ಬಾರಿ ಫೈನಲ್‌ʼನಲ್ಲಿ ಸೋತಿತ್ತು. ಟೀಂ ಇಂಡಿಯಾ ಒಟ್ಟು ಐದು ಬಾರಿ ಶ್ರೀಲಂಕಾವನ್ನು ಸೋಲಿಸಿದೆ. ಆದರೆ ಈ ವರ್ಷ ಶ್ರೀಲಂಕಾ 20 ವರ್ಷಗಳ ನಂತರ ಮೊದಲ ಬಾರಿಗೆ ಏಷ್ಯಾಕಪ್ ಟ್ರೋಫಿ ಗೆದ್ದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News