“ಇದಲ್ಲ ಕ್ರಿಕೆಟ್”: ಮೈದಾನದಲ್ಲಿದ್ದ Ishan Kishanಗೆ ಕಟುವಾಗಿ ಕಮೆಂಟರಿ ನೀಡಿದ Sunil Gavaskar: ಯಾಕೆ ಗೊತ್ತಾ?

Sunil Gavaskar Comment on Ishan Kishan: ಸ್ಕ್ವೇರ್ ಲೆಗ್ ಅಂಪೈರ್ ನಿತಿನ್ ಮೆನನ್ ಅವರು ಮೂರನೇ ಅಂಪೈರ್ ಕೆಎನ್ ಅನಂತಪದ್ಮನಾಭನ್ ಮೂಲಕ ಈ ನಿರ್ಣಯವನ್ನು ತೆಗೆದುಕೊಳ್ಳಲು ಮುಂದಾದರು. ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ಎಸೆದ ಬಾಲ್ ನ್ನು ಲ್ಯಾಥಮ್ ಬ್ಯಾಟ್ ಮಾಡಲು ಮುಂದಾದರು. ಆದರೆ ಆ ಸಂದರ್ಭದಲ್ಲಿ ವಿಕೆಟ್ ಬಿತ್ತು. ಅದು ಬ್ಯಾಟ್ ಸ್ಟಂಪ್ ಆಗಿತ್ತೋ ಅಥವಾ ಏನಾಗಿತ್ತು ಎಂಬುದು ತಿಳಿದಿರಲಿಲ್ಲ.

Written by - Bhavishya Shetty | Last Updated : Jan 18, 2023, 08:51 PM IST
    • ಇಶಾನ್ ಕಿಶನ್ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಅವರಿಗೆ ಭಯದ ರುಚಿಯನ್ನು ತೋರಿಸಿದ್ದಾರೆ
    • ಹಿಟ್-ವಿಕೆಟ್ ಔಟಾಗಿದೆ ಎಂದು ಹೇಳಿ ಥರ್ಡ್ ಅಂಪೈರ್ ಗೆ ಮನವಿ ಮಾಡಿದ್ದಾರೆ
    • ಈ ಸಂದರ್ಭದಲ್ಲಿ ಲ್ಯಾಥಮ್ ತಪ್ಪು ಮಾಡಿಲ್ಲ, ನಾಟ್ ಔಟ್ ಎಂದು ಹೇಳಲಾಯಿತು
“ಇದಲ್ಲ ಕ್ರಿಕೆಟ್”: ಮೈದಾನದಲ್ಲಿದ್ದ Ishan Kishanಗೆ ಕಟುವಾಗಿ ಕಮೆಂಟರಿ ನೀಡಿದ Sunil Gavaskar: ಯಾಕೆ ಗೊತ್ತಾ?  title=
ishan kishan

Sunil Gavaskar Comment on Ishan Kishan: ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ODI ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಅವರಿಗೆ ತಮ್ಮದೇ ಶೈಲಿಯಲ್ಲಿ ಭಯದ ರುಚಿಯನ್ನು ತೋರಿಸಿದ್ದಾರೆ. ಕಿಶನ್ ಕೇವಲ ಮೋಜಿಗಾಗಿ ಲಾಥಮ್ ಅವರನ್ನು ಅನುಕರಿಸಿದ್ದಾರೆ. ಆದರೆ ಹಿಟ್-ವಿಕೆಟ್ ಔಟಾಗಿದೆ ಎಂದು ಹೇಳಿ ಥರ್ಡ್ ಅಂಪೈರ್ ಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Shubman Gill Record: ಕೊಹ್ಲಿ, ಸಚಿನ್ ಹಿಂದಿಕ್ಕಿ ದಾಖಲೆ ಬರೆದ ಶುಭ್ಮನ್: ಏಕದಿನದಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಗಿಲ್

ಸ್ಕ್ವೇರ್ ಲೆಗ್ ಅಂಪೈರ್ ನಿತಿನ್ ಮೆನನ್ ಅವರು ಮೂರನೇ ಅಂಪೈರ್ ಕೆಎನ್ ಅನಂತಪದ್ಮನಾಭನ್ ಮೂಲಕ ಈ ನಿರ್ಣಯವನ್ನು ತೆಗೆದುಕೊಳ್ಳಲು ಮುಂದಾದರು. ಭಾರತದ ಸ್ಪಿನ್ನರ್ ಕುಲದೀಪ್ ಯಾದವ್ ಎಸೆದ ಬಾಲ್ ನ್ನು ಲ್ಯಾಥಮ್ ಬ್ಯಾಟ್ ಮಾಡಲು ಮುಂದಾದರು. ಆದರೆ ಆ ಸಂದರ್ಭದಲ್ಲಿ ವಿಕೆಟ್ ಬಿತ್ತು. ಅದು ಬ್ಯಾಟ್ ಸ್ಟಂಪ್ ಆಗಿತ್ತೋ ಅಥವಾ ಏನಾಗಿತ್ತು ಎಂಬುದು ತಿಳಿದಿರಲಿಲ್ಲ. ಇಶಾನ್ ಮಾತ್ರ ಔಟ್ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ಪಡೆಯಲು ಥರ್ಡ್ ಅಂಪೈರ್ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಲ್ಯಾಥಮ್ ತಪ್ಪು ಮಾಡಿಲ್ಲ, ನಾಟ್ ಔಟ್ ಎಂದು ಹೇಳಲಾಯಿತು.

ಕಿಶನ್ ಅವರು ಮಧ್ಯದಲ್ಲಿ ತಮಾಷೆಯ ಸನ್ನಿವೇಶ ಮಾಡಲೆಂದು ಸ್ಟಂಪ್‌ಗೆ ಬೆರಳನ್ನು ಟಚ್ ಮಾಡಿದ್ದರು. ಆದರೆ ಇಶಾನ್ ಮಾಡಿದ ಈ ತಮಾಷೆ ಕೊನೆಗೆ ವಾಗ್ದಂಡನೆಗೆ ಕಾರಣವಾಗಿದೆ.

ವರ್ಷದ ಮೊದಲ ಏಕದಿನ ಆಡುತ್ತಿರುವ ಕಿಶನ್, ಭಾರತದ ದಂತಕಥೆ ಬ್ಯಾಟರ್ ಸುನಿಲ್ ಗವಾಸ್ಕರ್ ಅವರಿಂದ ತೀವ್ರ ವಾಗ್ದಂಡನೆಗೆ ಗುರಿಯಾಗಿದ್ದಾತರ. ಆತಿಥೇಯ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್‌ ಕಾಮೆಂಟರಿ ಸೆಕ್ಷನ್ ನಲ್ಲಿದ್ದ ಸುನಿಲ್ ಗವಾಸ್ಕರ್, ಕಿಶನ್‌ನ ಅಪ್ರಬುದ್ಧತೆ ಮತ್ತು ವಾಸ್ತವದಲ್ಲಿ ಪ್ರಜ್ಞೆಯ ಕೊರತೆಯನ್ನು ಹೊರಹಾಕುವ ರೀತಿಯಲ್ಲಿ ಮಾತನಾಡುತ್ತಾ ಕಾಮೆಂಟರಿ ಬಾಕ್ಸ್‌ನಿಂದ ಕಿಶನ್ ಅವರನ್ನು ಖಂಡಿಸಿದರು. "ಇದು ಕ್ರಿಕೆಟ್ ಅಲ್ಲ" ಎಂದು ಗವಾಸ್ಕರ್ ಕಿಶನ್ ಅವರ ಸಮಯ ವ್ಯರ್ಥಕ್ಕೆ ಸಂಬಂಧಿಸಿದಂತೆ ಕಟುವಾಗಿ ಮಾತನಾಡಿದರು.

 

30 ವರ್ಷದ ಲ್ಯಾಥಮ್ ಅನೇಕ ಬಾರಿ ಇದೇ ರೀತಿ ಭಾರತೀಯ ಆಟಗಾರರಿಗೆ ತಮಾಷೆ ಎಸಗಿದ್ದಾರೆ. ಇದಕ್ಕೆ ಪ್ರತಿಯಾಗಿ ಇಶಾನ್ ಆ ಭಯದ ರುಚಿಯನ್ನು ತೋರಿಸಿದ್ದಾರೆ.

ಇದನ್ನೂ ಓದಿ: Shubman Gill Sara Ali Khan : ದ್ವಿಶತಕ ಸಿಡಿಸಿದ ಶುಭಮಾನ್ ಗಿಲ್ ಈ ಇಬ್ಬರು ಚೆಲುವೆಯರ ಜೊತೆ ಪ್ರೇಮ ಕಹಾನಿ!

ಭಾರತ ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಲಾಥಮ್ ಅವರ ವಿಕೆಟ್ ಕೀಪಿಂಗ್ ಗ್ಲೌಸ್‌ಗಳು ಬೇಲ್ ಮುಟ್ಟಿದ ಕಾರಣದಿಂದ ಪಂದ್ಯದಿಂದ ಔಟ್ ಆಗಿದ್ದು ನಿಜ. ಆದರೆ ಅನಂತಪದ್ಮನಾಭನ್ ಅನೇಕ ಬಾರಿ ರಿವ್ಯೂವ್ ಗಳನ್ನು ಮಾಡಿದ ನಂತರ ತಪ್ಪನ್ನು ಅರಿತುಕೊಂಡರು. ಈ ಮಧ್ಯೆ ಮೊದಲ ಇನಿಂಗ್ಸ್‌ನ 39 ನೇ ಓವರ್‌ನಲ್ಲಿ ಥರ್ಡ್ ಅಂಪೈರ್ ಪಾಂಡ್ಯ ಅವರು ಔಟ್ ಎಂದು ತೀರ್ಪು ನೀಡಿದುದನ್ನು ಕಂಡು ಲ್ಯಾಥಮ್ ಸೇರಿ ಎಲ್ಲರೂ ಆಘಾತಕ್ಕೊಳಗಾಗಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News