IND vs NZ T20I: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯ ಮೊದಲ ಪಂದ್ಯ ಇಂದು ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 12 ರಿಂದ ನಡೆಯಲಿದೆ. ನ್ಯೂಜಿಲ್ಯಾಂಡ್ ಅನ್ನು T20 ಸ್ವರೂಪದಲ್ಲಿ ಅತ್ಯಂತ ಅಪಾಯಕಾರಿ ತಂಡವೆಂದು ಪರಿಗಣಿಸಲಾಗಿದೆ ಮತ್ತು ಅದು ತವರಿನಲ್ಲಿ ಆಡುತ್ತಿದ್ದರೆ ಈ ತಂಡವು ಎಷ್ಟು ಮಾರಕ ಎಂದು ಸಾಬೀತುಪಡಿಸುತ್ತದೆ ಎಂದು ಊಹಿಸುವುದು ಕಷ್ಟ.
ಇದನ್ನೂ ಓದಿ: IND vs NZ: ಭಾರತ-ನ್ಯೂಜಿಲೆಂಡ್ ಮೊದಲ ಟಿ20I: ಲೈವ್, ಪ್ಲೇಯಿಂಗ್ XI, ಪಿಚ್ ವರದಿ ಇಲ್ಲಿದೆ
ಇನ್ನು 3 ನ್ಯೂಜಿಲ್ಯಾಂಡ್ ಆಟಗಾರರು ಟೀಮ್ ಇಂಡಿಯಾಕ್ಕೆ ದೊಡ್ಡ ಬೆದರಿಕೆ ಎಂದು ಸಾಬೀತುಪಡಿಸಬಹುದು. ಮೈದಾನದಲ್ಲಿ ವಿಧ್ವಂಸಕತೆಯನ್ನು ಸೃಷ್ಟಿಸುವ ಮೂಲಕ ಹಾರ್ದಿಕ್ ಪಾಂಡ್ಯ ತಂಡವನ್ನು ನಿರಾಶೆಗೊಳಿಸಬಹುದು. ನ್ಯೂಜಿಲೆಂಡ್‌ನ ಆ 3 ಅಪಾಯಕಾರಿ ಆಟಗಾರರು ಯಾರೆಂದು ನೋಡೋಣ:
1. ಫಿನ್ ಅಲೆನ್
ಫಿನ್ ಅಲೆನ್ ನ್ಯೂಜಿಲ್ಯಾಂಡ್ನ ಅತ್ಯಂತ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್. ಬಲಗೈ ಬ್ಯಾಟ್ಸ್‌ಮನ್ ಫಿನ್ ಅಲೆನ್ ಟಿ20 ಮಾದರಿಯಲ್ಲಿ ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗಿದ್ದಾರೆ. ಫಿನ್ ಅಲೆನ್ ನ್ಯೂಜಿಲ್ಯಾಂಡ್ ಪರ 23 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು 165.4 ರ ಬಿರುಸಿನ ಸ್ಟ್ರೈಕ್ ರೇಟ್‌ನಲ್ಲಿ 564 ರನ್ ಗಳಿಸಿದ್ದಾರೆ. ಫಿನ್ ಅಲೆನ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಒಂದು ಶತಕ ಮತ್ತು 2 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಂತರಾಷ್ಟ್ರೀಯ ಟಿ20ಯಲ್ಲಿ ಫಿನ್ ಅಲೆನ್ ಅವರ ಅತ್ಯುತ್ತಮ ಸ್ಕೋರ್ 101 ರನ್.
2. ಗ್ಲೆನ್ ಫಿಲಿಪ್ಸ್
ಗ್ಲೆನ್ ಫಿಲಿಪ್ಸ್ ನ್ಯೂಜಿಲ್ಯಾಂಡ್ನ ಅತ್ಯಂತ ಅಪಾಯಕಾರಿ T20 ಬ್ಯಾಟ್ಸ್‌ಮನ್. ಗ್ಲೆನ್ ಫಿಲಿಪ್ಸ್ ಸಾಮಾನ್ಯವಾಗಿ 3 ಅಥವಾ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ ಮತ್ತು ಮಧ್ಯಮ ಓವರ್‌ಗಳಲ್ಲಿ ತಮ್ಮ ಬಿರುಗಾಳಿಯ ಆಟದಿಂದ ಎದುರಾಳಿ ತಂಡದಿಂದ ಪಂದ್ಯವನ್ನು ಕಸಿದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಟೀಮ್ ಇಂಡಿಯಾ ಮತ್ತು ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ವಿಶೇಷವಾಗಿ ಗ್ಲೆನ್ ಫಿಲಿಪ್ಸ್ ಜೊತೆ ಎಚ್ಚರಿಕೆಯಿಂದ ಇರಬೇಕು. ಗ್ಲೆನ್ ಫಿಲಿಪ್ಸ್ ನ್ಯೂಜಿಲ್ಯಾಂಡ್ ಪರ 54 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು 147.21 ರ ಬಿರುಸಿನ ಸ್ಟ್ರೈಕ್ ರೇಟ್‌ನಲ್ಲಿ 1294 ರನ್ ಗಳಿಸಿದ್ದಾರೆ. ಗ್ಲೆನ್ ಫಿಲಿಪ್ಸ್ ಅಂತಾರಾಷ್ಟ್ರೀಯ ಟಿ20ಯಲ್ಲಿ 2 ಶತಕ ಹಾಗೂ 7 ಅರ್ಧ ಶತಕ ಬಾರಿಸಿದ್ದಾರೆ.
ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಹೊಸ ಓಪನರ್! ಬದಲಾಗುತ್ತಾ ಟೀಂ ಇಂಡಿಯಾ ಭವಿಷ್ಯ?
3. ಮಿಚೆಲ್ ಸ್ಯಾಂಟ್ನರ್
ಮಿಚೆಲ್ ಸ್ಯಾಂಟ್ನರ್ ನ್ಯೂಜಿಲ್ಯಾಂಡ್ನ ಅತ್ಯಂತ ಮಾರಕ T20 ಆಟಗಾರರಲ್ಲಿ ಒಬ್ಬರು. ಅವರು ಬೌಲಿಂಗ್ ಮತ್ತು ಬ್ಯಾಟಿಂಗ್‌ನಿಂದ ಪಂದ್ಯದ ಅಲೆಯನ್ನು ಯಾವುದೇ ಸಮಯದಲ್ಲಿ ತಿರುಗಿಸಬಹುದು. ಮಿಚೆಲ್ ಸ್ಯಾಂಟ್ನರ್ ಎಡಗೈ ಸ್ಪಿನ್ ಬೌಲಿಂಗ್‌ನೊಂದಿಗೆ 7 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ನ್ಯೂಜಿಲ್ಯಾಂಡ್ ತಂಡವನ್ನು ಬಲಪಡಿಸುತ್ತಾರೆ. ಮಿಚೆಲ್ ಸ್ಯಾಂಟ್ನರ್ ನ್ಯೂಜಿಲ್ಯಾಂಡ್ ಪಿಚ್‌ಗಳಲ್ಲಿ ಇನ್ನಷ್ಟು ಅಪಾಯಕಾರಿಯಾಗುತ್ತಾರೆ. ಇವರು ನ್ಯೂಜಿಲ್ಯಾಂಡ್ ಪರ 78 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 89 ವಿಕೆಟ್ ಪಡೆದಿರುವ ಜೊತೆಗೆ 488 ರನ್ ಗಳಿಸಿದ್ದಾರೆ. ಮಿಚೆಲ್ ಸ್ಯಾಂಟ್ನರ್ ಬಗ್ಗೆ ಟೀಂ ಇಂಡಿಯಾ ಎಚ್ಚರಿಕೆ ವಹಿಸಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.