ಸೂರ್ಯಕುಮಾರ್ ಅಮೋಘ ಅರ್ಧಶತಕ, ಪಾಂಡ್ಯ ಸಿಕ್ಸರ್ ಅಬ್ಬರ: ಸೂಪರ್ 8ರಲ್ಲಿ ಟೀಂ ಇಂಡಿಯಾ ‘ಸೂಪರ್’ ಬ್ಯಾಟಿಂಗ್

IND vs AFG, Super 8: ಉಭಯ ತಂಡಗಳ ನಡುವಿನ ಸೂಪರ್-8ರ ಮೂರನೇ ಪಂದ್ಯ ಇದಾಗಿದ್ದು, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗುಂಪು ಹಂತದಲ್ಲಿ ಅಜೇಯವಾಗಿತ್ತು, ಅದೇ ಫಾರ್ಮ್ ಅನ್ನು ಮುಂದುವರೆಸಿವ ಇಚ್ಛೆ ಹೊಂದಿದೆ.

Written by - Bhavishya Shetty | Last Updated : Jun 20, 2024, 10:01 PM IST
    • ಉಭಯ ತಂಡಗಳ ನಡುವಿನ ಸೂಪರ್-8ರ ಮೂರನೇ ಪಂದ್ಯ
    • 20 ಓವರ್ ಮುಕ್ತಾಯದ ವೇಳೆಗೆ 8 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿದೆ
    • ಬಾರ್ಬಡೋಸ್‌’ನ ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್‌’ನಲ್ಲಿ ಆಯೋಜನೆ
ಸೂರ್ಯಕುಮಾರ್ ಅಮೋಘ ಅರ್ಧಶತಕ, ಪಾಂಡ್ಯ ಸಿಕ್ಸರ್ ಅಬ್ಬರ: ಸೂಪರ್ 8ರಲ್ಲಿ ಟೀಂ ಇಂಡಿಯಾ ‘ಸೂಪರ್’ ಬ್ಯಾಟಿಂಗ್ title=
India vs Afghanistan

IND vs AFG, Super 8: ICC ಪುರುಷರ T20 ವಿಶ್ವಕಪ್‌’ನ 43ನೇ ಪಂದ್ಯ ಇಂದು ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಬಾರ್ಬಡೋಸ್‌’ನ ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್‌’ನಲ್ಲಿ ಆಯೋಜನೆಗೊಂಡಿದೆ.

ಇದನ್ನೂ ಓದಿ: ತವರಿನ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ: ವಿಶ್ವಕಪ್ ಬಳಿಕ ಈ 3 ಟೂರ್ನಿಗಳನ್ನಾಡಲಿದೆ ಟೀಂ ಇಂಡಿಯಾ

ಉಭಯ ತಂಡಗಳ ನಡುವಿನ ಸೂಪರ್-8ರ ಮೂರನೇ ಪಂದ್ಯ ಇದಾಗಿದ್ದು, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗುಂಪು ಹಂತದಲ್ಲಿ ಅಜೇಯವಾಗಿತ್ತು, ಅದೇ ಫಾರ್ಮ್ ಅನ್ನು ಮುಂದುವರೆಸಿವ ಇಚ್ಛೆ ಹೊಂದಿದೆ.

ಇನ್ನು ಈ ಪಂದ್ಯದಲ್ಲಿ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್’ಗೆ ಬಂದ ಟೀಂ ಇಂಡಿಯಾ 20 ಓವರ್ ಮುಕ್ತಾಯದ ವೇಳೆಗೆ 8 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿದೆ.

ಇನ್ನೊಂದೆಡೆ ನಾಯಕ ರೋಹಿತ್ ಶರ್ಮಾ ಅಲ್ಪ ಮೊತ್ತಕ್ಕೆ ಔಟ್ ಆದ ಬಳಿಕ ವಿರಾಟ್ ತಂಡಕ್ಕೆ ನೆರವಾಗುವ ಭರವಸೆ ನೀಡಿದರು. ಆದರೆ ರಶೀದ್ ಖಾನ್, ವಿರಾಟ್ ವಿಕೆಟ್ ಪಡೆದು ಭಾರತಕ್ಕೆ ಆಘಾತ ನೀಡಿದರು. ಇದಾದ ಬಳಿಕ ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾಗೆ ಉತ್ತಮ ಕೊಡುಗೆ ನೀಡಿದರು. ಪಂತ್ 11 ಎಸೆತದಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಸೂರ್ಯಕುಮಾರ್ ಯಾದವ್ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.  ಇನ್ನು ಹಾರ್ದಿಕ್ ಪಾಂಡ್ಯ ಕೂಡ ಭರ್ಜರಿ ಕಂಬ್ಯಾಕ್ ಮಾಡಿದ್ದು ಈ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. ಈ ಮೂಲಕ 32 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಸ್ವಾರ್ಥಿ, ಆತ ದಾಖಲೆಗಳಿಗಷ್ಟೇ ಆಡುತ್ತಾನೆ: ಕ್ರಿಕೆಟಿಗನ ಶಾಕಿಂಗ್ ಹೇಳಿಕೆ

ಸದ್ಯ ಅಫ್ಘಾನಿಸ್ತಾನ ಬ್ಯಾಟಿಂಗ್ ಮಾಡಲಿದ್ದು, ಟೀಂ ಇಂಡಿಯಾ ಬೌಲಿಂಗ್ ಪ್ರದರ್ಶನ ಯಾವ ರೀತಿ ಇರಲಿದೆ ಎಂದು ಕಾದುನೋಡಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News