IND vs AUS : ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನಕ್ಕೆ ಕಂಟಕವಾದ ಅಕ್ಷರ್ ಪಟೇಲ್!

Team India : ಟೀಂ ಇಂಡಿಯಾಗೆ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಎಂಟ್ರಿಯಾದ ತಕ್ಷಣ ಈ ಕ್ರಿಕೆಟಿಗನಿಗೆ ಭಾರತ ಟೆಸ್ಟ್ ತಂಡದ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ. ಸುಮಾರು 2 ವರ್ಷಗಳಿಂದ ಈ ಆಟಗಾರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಹಂಬಲದಲ್ಲಿದ್ದಾರೆ.

Written by - Channabasava A Kashinakunti | Last Updated : Mar 8, 2023, 09:22 AM IST
  • ಟೀಂ ಇಂಡಿಯಾಗೆ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಎಂಟ್ರಿ
  • ಅಕ್ಷರ್ ಪಟೇಲ್‌ನಿಂದಾಗಿ ಈ ಆಟಗಾರನ ವೃತ್ತಿಜೀವನ ಅಂತ್ಯ!
  • ಶೀಘ್ರದಲ್ಲೇ ನಿವೃತ್ತರಾಗಬಹುದು?
IND vs AUS : ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನಕ್ಕೆ ಕಂಟಕವಾದ ಅಕ್ಷರ್ ಪಟೇಲ್! title=

Team India : ಟೀಂ ಇಂಡಿಯಾಗೆ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಎಂಟ್ರಿಯಾದ ತಕ್ಷಣ ಈ ಕ್ರಿಕೆಟಿಗನಿಗೆ ಭಾರತ ಟೆಸ್ಟ್ ತಂಡದ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ. ಸುಮಾರು 2 ವರ್ಷಗಳಿಂದ ಈ ಆಟಗಾರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಹಂಬಲದಲ್ಲಿದ್ದಾರೆ. ಈ ಕ್ರಿಕೆಟಿಗ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಫೆಬ್ರವರಿ 2021 ರಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಸಮಯದಲ್ಲಿ ಟೀಂ ಇಂಡಿಯಾಗಾಗಿ ಆಡಿದ್ದು ಬಿಟ್ಟರೆ ಮತ್ತೆ ಆಡಿಲ್ಲ.. ಕುತೂಹಲಕಾರಿ ವಿಷಯವೆಂದರೆ 2021 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಈ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಅಕ್ಷರ್ ಪಟೇಲ್ ಟೀಂ ಇಂಡಿಯಾಗೆ ಟೆಸ್ಟ್ ಪಾದಾರ್ಪಣೆ ಮಾಡಿದರು.

ಅಕ್ಷರ್ ಪಟೇಲ್‌ನಿಂದಾಗಿ ಈ ಆಟಗಾರನ ವೃತ್ತಿಜೀವನ ಅಂತ್ಯ!

ಅಕ್ಷರ್ ಪಟೇಲ್‌ನಿಂದಾಗಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡ ಕ್ರಿಕೆಟಿಗ ಬೇರೆ ಯಾರೂ ಅಲ್ಲ, ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್. ಭಾರತದ 33 ವರ್ಷದ ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್ ಟೀಂ ಇಂಡಿಯಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ 5-9 ಫೆಬ್ರವರಿ 2021 ರಂದು ಚೆನ್ನೈನಲ್ಲಿ ಆಡಿದರು. ಅಂದಿನಿಂದ ಶಹಬಾಜ್ ನದೀಮ್ ಭಾರತ ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ. ಶಹಬಾಜ್ ನದೀಮ್ ಭಾರತ ಪರ ಇದುವರೆಗೆ ಒಟ್ಟು ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 8 ವಿಕೆಟ್ ಪಡೆದಿದ್ದಾರೆ. ಟೀಂ ಇಂಡಿಯಾಗೆ ಅಕ್ಷರ್ ಪಟೇಲ್ ಎಂಟ್ರಿಯಾದ ನಂತರ ಶಹಬಾಜ್ ನದೀಮ್ ಟೆಸ್ಟ್ ವೃತ್ತಿಜೀವನಕ್ಕೆ ಮರಳುವುದು ಬಹುತೇಕ ಕಷ್ಟವಾಗಿದೆ. ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧ 13-17 ಫೆಬ್ರವರಿ 2021 ರಂದು ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದರು, ಅಂದಿನಿಂದ ಅವರು ಟೀಂ ಇಂಡಿಯಾದ ಪ್ರಮುಖ ಸದಸ್ಯರಾಗಿದ್ದಾರೆ. ಅಕ್ಷರ್ ಪಟೇಲ್ ಇದುವರೆಗೆ ಆಡಿರುವ 11 ಟೆಸ್ಟ್ ಪಂದ್ಯಗಳಲ್ಲಿ 48 ವಿಕೆಟ್ ಪಡೆದಿದ್ದಾರೆ. ಆದರೆ, ಪ್ರಥಮ ದರ್ಜೆಯಲ್ಲಿ ಶಹಬಾಜ್ ನದೀಮ್ ಅವರ ದಾಖಲೆ ಉತ್ತಮವಾಗಿದೆ. ಶಹಬಾಜ್ ನದೀಮ್ 126 ಪಂದ್ಯಗಳಲ್ಲಿ 28.71 ಸರಾಸರಿಯಲ್ಲಿ 489 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : Ravindra Jadeja: ಟೆಸ್ಟ್ ಸರಣಿ ಮಧ್ಯೆ ರವೀಂದ್ರ ಜಡೇಜಾಗೆ ICC ನೀಡಿದೆ ಸೂಪರ್ ಗಿಫ್ಟ್! ಏನದು ಗೊತ್ತಾ?

ಶೀಘ್ರದಲ್ಲೇ ನಿವೃತ್ತರಾಗಬಹುದು?

ಶಹಬಾಜ್ ನದೀಮ್ ಅವರು 19 ಅಕ್ಟೋಬರ್ 2019 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದರು. ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶಹಬಾಜ್ ನದೀಮ್ 4 ವಿಕೆಟ್ ಪಡೆದರು. ಶಹಬಾಜ್ ನದೀಮ್ ಇದುವರೆಗೆ 72 ಐಪಿಎಲ್ ಪಂದ್ಯಗಳಲ್ಲಿ 48 ವಿಕೆಟ್ ಪಡೆದಿದ್ದಾರೆ. ಶಹಬಾಜ್ ನದೀಮ್ ತನ್ನ ಕೊನೆಯ ಐಪಿಎಲ್ ಪಂದ್ಯವನ್ನು 2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಶಹಬಾಜ್ ನದೀಮ್ ಕಳೆದ ವರ್ಷ ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದರು, ಆದರೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಕ್ಕಿಲ್ಲ.

ಇದನ್ನೂ ಓದಿ : IND vs AUS: ಟೀಂ ಇಂಡಿಯಾಗೆ ಮತ್ತೆ ಆಘಾತ: ಟೆಸ್ಟ್ ಬಳಿಕ ODI ಸರಣಿಯಿಂದಲೂ ಈ ಬಲಿಷ್ಠ ಆಟಗಾರ ಔಟ್!!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News