Aisa Cup 2022: ಸಂಕಷ್ಟದಲ್ಲಿ ಟೀಂ ಇಂಡಿಯಾ! ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ಕೋವಿಡ್‌ ದೃಢ

Coach Rahul Dravid: ಏಷ್ಯಾಕಪ್‌ಗೂ ಮುನ್ನ ಭಾರತ ತಂಡ ಭಾರಿ ಹಿನ್ನಡೆ ಅನುಭವಿಸಿದೆ. ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೊರೊನಾ ಸೋಂಕು ತಗುಲಿದೆ.

Written by - Chetana Devarmani | Last Updated : Aug 23, 2022, 11:40 AM IST
  • ಏಷ್ಯಾಕಪ್‌ಗೂ ಮುನ್ನ ಭಾರತ ತಂಡಕ್ಕೆ ಭಾರಿ ಹಿನ್ನಡೆ
  • ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ಕೋವಿಡ್‌ ದೃಢ
  • ಏಷ್ಯಾ ಕಪ್ 2022 ಆಗಸ್ಟ್ 27 ರಂದು ಪ್ರಾರಂಭವಾಗುತ್ತಿದೆ
Aisa Cup 2022: ಸಂಕಷ್ಟದಲ್ಲಿ ಟೀಂ ಇಂಡಿಯಾ! ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ಕೋವಿಡ್‌ ದೃಢ  title=
ರಾಹುಲ್ ದ್ರಾವಿಡ್‌

Rahul Dravid Tested Corona Positive: ಏಷ್ಯಾ ಕಪ್ 2022 ಕ್ಕೂ ಮುನ್ನ ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ. ಕೋವಿಡ್‌ ಸೋಂಕು ತಗುಲಿದ ಪರಿಣಾಮ ಅವರು ಯುಎಇಗೆ ಹೋಗುವುದಿಲ್ಲ ಎಂದು ಹೇಳಲಾಗುತ್ತಿದೆ. ಮಂಗಳವಾರ ಬೆಳಗ್ಗೆ ಭಾರತದ ಕ್ರಿಕೆಟ್‌ ತಂಡ ದುಬೈಗೆ ತೆರಳಿದಾಗ ಅವರು ಕಾಣಲಿಲ್ಲ. ಏಷ್ಯಾ ಕಪ್ 2022 ಆಗಸ್ಟ್ 27 ರಂದು ಪ್ರಾರಂಭವಾಗುತ್ತಿದೆ ಆದರೆ ಬಾಬರ್ ಅಜಮ್ ನಾಯಕತ್ವದ ಪಾಕ್‌ ತಂಡದ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಆಗಸ್ಟ್  28 ರಂದು ಆಡಬೇಕಾಗಿದೆ. 

ಇದನ್ನೂ ಓದಿ: BWF 2022: ಲಕ್ಷ್ಯ ಸೇನ್ ಗೆ ಗೆಲುವು-ಪದಕ ಬೇಟೆ ಮುಂದುವರೆಸಿದ ಭಾರತೀಯ ವೀರರು!

ದ್ರಾವಿಡ್ ಯಾವಾಗ ಕೊರೊನಾ ವೈರಸ್‌ಗೆ ತುತ್ತಾದರು ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಮಂಗಳವಾರ ಬೆಳಿಗ್ಗೆ ಅವರು ತಂಡದೊಂದಿಗೆ ಯುಎಇಗೆ ತೆರಳದಿದ್ದಾಗ, ಅದರ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು. ಈ ವೇಳೆ ದ್ರಾವಿಡ್‌ಗೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಈ ದೊಡ್ಡ ಟೂರ್ನಿಯಲ್ಲಿ ತಂಡದ ತಯಾರಿಯನ್ನು ನೋಡಿದರೆ ಇದೊಂದು ಕೆಟ್ಟ ಸುದ್ದಿ ಏಕೆಂದರೆ ಏಷ್ಯಾಕಪ್‌ನಲ್ಲಿ ಭಾರತದ ಮೊದಲ ಸವಾಲು ಪಾಕಿಸ್ತಾನದ ವಿರುದ್ಧ. ಈ ಹೈವೋಲ್ಟೇಜ್ ಪಂದ್ಯದ ವೇಳೆ ಅಭಿಮಾನಿಗಳಿಂದ ಟೀಂ ಇಂಡಿಯಾ ಮೇಲೆ ಒತ್ತಡ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ದ್ರಾವಿಡ್ ಉಪಸ್ಥಿತಿಯು ತಂಡಕ್ಕೆ ಬಹಳ ಮುಖ್ಯವಾಗಿತ್ತು. 

ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಅವರು ಯುಎಇಯಲ್ಲಿ ಹಂಗಾಮಿ ಮುಖ್ಯ ಕೋಚ್‌ನ ಜವಾಬ್ದಾರಿಯನ್ನು ಪಡೆಯಬಹುದು. ಲಕ್ಷ್ಮಣ್ ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಈ ಜವಾಬ್ದಾರಿಯನ್ನು ವಹಿಸಿದ್ದರು. ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡ ವಿವಿಎಸ್ ಲಕ್ಷ್ಮಣ್ ಅವರ ತರಬೇತಿಯಲ್ಲಿ ಆಡುತ್ತಿದೆ. ಅವರು ಈ ಹಿಂದೆ ಯುವ ತಂಡದೊಂದಿಗೆ ಐರ್ಲೆಂಡ್‌ ಪ್ರವಾಸದ ವೇಳೆ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದರು.  

ಇದನ್ನೂ ಓದಿ: Axar Patel : ಅಕ್ಷರ್ ಪಟೇಲ್‌ನಿಂದಾಗಿ ಹಾಳಾಗುತ್ತಿದೆ ಈ ಆಟಗಾರನ ವೃತ್ತಿಜೀವನ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News