Team India : ಈ ಸ್ಪೋಟಕ ಬೌಲರ್ ನನ್ನು ಟೀಂ ಇಂಡಿಯಾದಿಂದ ದೂರವಿಟ್ಟ ಆಯ್ಕೆಗಾರರು!

ಈ ಬೌಲರ್ ಶ್ರೀಲಂಕಾದ ಲೆಜೆಂಡರಿ ಬೌಲರ್ ಲಸಿತ್ ಮಾಲಿಂಗ ಮತ್ತು ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರಂತಹ ಮಾರಕ ಯಾರ್ಕರ್ ಎಸೆತಗಳ ಹಾಗೆ ಬಾಲ್ ಎಸೆಯುತ್ತಾನೆ. ಹಾಗಿದ್ರೆ ಈ ಬೌಲರ್ ಯಾರು, ಟೀಂನಿಂದ ಯಾಕೆ ಹೊರಗಿದ್ದಾನೆ. ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Feb 1, 2022, 03:49 PM IST
  • ತುಂಬಾ ದಿನಗಳಿಂದ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ
  • 'ಚೊಚ್ಚಲ ಕನಸಿನ ನಂತರ ವೃತ್ತಿಜೀವನಕ್ಕೆ ಗ್ರಹಣ
  • ಈ ಬೌಲರ್ ಮಾಲಿಂಗ-ಬುಮ್ರಾ ಅವರಷ್ಟೇ ಅಪಾಯಕಾರಿ
Team India : ಈ ಸ್ಪೋಟಕ ಬೌಲರ್ ನನ್ನು ಟೀಂ ಇಂಡಿಯಾದಿಂದ ದೂರವಿಟ್ಟ ಆಯ್ಕೆಗಾರರು! title=

ನವದೆಹಲಿ : ಟೀಂ ಇಂಡಿಯಾದ ಬೌಲರ್ ಒಬ್ಬ ತುಂಬಾ ಅಪಾಯಕಾರಿ, ಟೀಂಗೆ ಎಂಟ್ರಿ ನೀಡಿದ ತಕ್ಷಣ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ, ಆದರೆ ಆಯ್ಕೆಗಾರರು ಈ ಆಟಗಾರನನ್ನು ಟೀಂ ಇಂಡಿಯಾದಿಂದ ದೂರ ಇಟ್ಟಿದ್ದಾರೆ. ಈ ಬೌಲರ್ ಶ್ರೀಲಂಕಾದ ಲೆಜೆಂಡರಿ ಬೌಲರ್ ಲಸಿತ್ ಮಾಲಿಂಗ ಮತ್ತು ಭಾರತದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರಂತಹ ಮಾರಕ ಯಾರ್ಕರ್ ಎಸೆತಗಳ ಹಾಗೆ ಬಾಲ್ ಎಸೆಯುತ್ತಾನೆ. ಹಾಗಿದ್ರೆ ಈ ಬೌಲರ್ ಯಾರು, ಟೀಂನಿಂದ ಯಾಕೆ ಹೊರಗಿದ್ದಾನೆ. ಇಲ್ಲಿದೆ ನೋಡಿ..

ಈ ಬೌಲರ್ ಮಾಲಿಂಗ-ಬುಮ್ರಾ ಅವರಷ್ಟೇ ಅಪಾಯಕಾರಿ

ಟೀಂ ಇಂಡಿಯಾದ 'ಯಾರ್ಕರ್ ಮ್ಯಾನ್' ಎಂದೇ ಕರೆಸಿಕೊಳ್ಳುವ ಟಿ.ನಟರಾಜನ್(T Natarajan) ಸುಮಾರು ಒಂದು ವರ್ಷದಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಹಾಲಿನಿಂದ ನೊಣ ಹೊರ ಹಾಕಿದಂತೆ ಆಯ್ಕೆಗಾರರು ಈ ಆಟಗಾರನನ್ನು ಟೀಂ ಇಂಡಿಯಾದಿಂದ ಹೊರಹಾಕಿದರು. T. ನಟರಾಜನ್ ಕೊನೆಯ ಬಾರಿಗೆ ಮಾರ್ಚ್ 2021 ರಲ್ಲಿ ಇಂಗ್ಲೆಂಡ್ ವಿರುದ್ಧದ T20 ಮತ್ತು ODI ಸರಣಿಯಲ್ಲಿ ಆಡಿದ್ದರು. ಈ ಸರಣಿಯ ನಂತರ ಟಿ.ನಟರಾಜನ್ ಅವರನ್ನು ಆಯ್ಕೆಗಾರರು ಕೇಳಲೇ ಇಲ್ಲ.

ಇದನ್ನೂ ಓದಿ : Virat Kohli : ನಾಯಕತ್ವ ತೊರೆದ ಬಳಿಕ ಟೀಂನಲ್ಲಿ ಕೊಹ್ಲಿ ಈ ಪಾತ್ರವೇನು? ಧೋನಿಗೂ ಈ ಜವಾಬ್ದಾರಿ ಇದೆ!

ತುಂಬಾ ದಿನಗಳಿಂದ ಟೀಂನಿಂದ  ಹೊರಗಿದ್ದಾರೆ

ಟಿ.ನಟರಾಜನ್ ಭಾರತದ ಪರ 1 ಟೆಸ್ಟ್ ಪಂದ್ಯ, 4 T20 ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 2 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟಿ.ನಟರಾಜನ್ ಟೆಸ್ಟ್ ನಲ್ಲಿ 3 ವಿಕೆಟ್, ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 7 ವಿಕೆಟ್ ಹಾಗೂ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ. ಐಪಿಎಲ್ 2020 ರಲ್ಲಿನ ಅತ್ಯುತ್ತಮ ಪ್ರದರ್ಶನದಿಂದಾಗಿ ಈ ಬೌಲರ್ ಟೀಮ್ ಇಂಡಿಯಾಕ್ಕಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಪಾದಾರ್ಪಣೆ ಮಾಡುವ ಅವಕಾಶವನ್ನು ಪಡೆದರು.

ಚೊಚ್ಚಲ ಕನಸಿನ ನಂತರ ವೃತ್ತಿಜೀವನಕ್ಕೆ ಗ್ರಹಣ

30 ವರ್ಷ ವಯಸ್ಸಿನ ವೇಗದ ಬೌಲರ್ ಟಿ. ನಟರಾಜನ್ 2020-2021ರ ಆಸ್ಟ್ರೇಲಿಯನ್ ಪ್ರವಾಸದಲ್ಲಿ ಟೀಮ್ ಇಂಡಿಯಾ(Team India)ಗೆ ಎಲ್ಲಾ ಮೂರು ಸ್ವರೂಪಗಳಲ್ಲಿ 'ಕನಸಿನ ಚೊಚ್ಚಲ' ಮಾಡಿದರು. ಟಿ.ನಟರಾಜನ್ ನಿಖರ ಯಾರ್ಕರ್‌ಗಳನ್ನು ಬೌಲಿಂಗ್ ಮಾಡುವಲ್ಲಿ ಪರಿಣತರಾಗಿದ್ದಾರೆ, ಅಂತಹ ಪರಿಸ್ಥಿತಿಯಲ್ಲಿ ಅವರು ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಿದರು. ಟಿ.ನಟರಾಜನ್ ಇನ್ನೂ ಟೀಮ್ ಇಂಡಿಯಾಗೆ ಮರಳುವ ನಿರೀಕ್ಷೆಯಿದೆ, ಆದರೆ ಆಯ್ಕೆದಾರರು ಏನು ಯೋಚಿಸುತ್ತಿದ್ದಾರೆಂದು ಯಾರಿಗೂ ತಿಳಿದಿಲ್ಲ.

ಇದನ್ನೂ ಓದಿ : Harbhajan Singh : ಧೋನಿ ಬಗ್ಗೆ ಹೇಳಿಕೆ ನೀಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಹರ್ಭಜನ್ ಸಿಂಗ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News