ನಿರೂಪಕಿ ಸಂಜನಾ-ಜಸ್ಪ್ರೀತ್ ಬುಮ್ರಾ ಮಧ್ಯೆ ಪ್ರೀತಿ ಚಿಗುರಿದ್ದು ಹೇಗೆ? ಬಾಲಿವುಡ್‌ ಸಿನಿಮಾಗಿಂತ ಕಡಿಮೆಯಿಲ್ಲ ಈ ಲವ್‌ಸ್ಟೋರಿ!!

 Jasprit Bumrah's Love story: ಸಂಜನಾ ಮತ್ತು ಜಸ್ಪ್ರೀತ್ ಬುಮ್ರಾ ಲವ್ ಸ್ಟೋರಿ: 2024 ರ ಟಿ-20 ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ಭರ್ಜರಿ ಬೌಲಿಂಗ್‌ನಿಂದ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳ ಬೆವರಿಳಿಸಿದ್ದಾರೆ. ಜಸ್ಪ್ರೀತ್ ನಿಸ್ಸಂದೇಹವಾಗಿ ವಿಶ್ವದ ಅತ್ಯುತ್ತಮ ವೇಗದ ಬೌಲರ್. ಅವರ ಮೈದಾನದ ಪ್ರದರ್ಶನಗಳ ಹೊರತಾಗಿ, ಬುಮ್ರಾ ಅವರ ವೈಯಕ್ತಿಕ ಜೀವನದ ಕುರಿತಾಗಿಯೂ ಮುಖ್ಯಾಂಶಗಳಲ್ಲಿಯೂ ಉಳಿದಿದ್ದಾರೆ. 

Written by - Savita M B | Last Updated : Jun 15, 2024, 11:15 AM IST
  • ಬುಮ್ರಾ ಮತ್ತು ಅವರ ಪತ್ನಿ ಸಂಜನಾ ಗಣೇಶನ್ ಬಹಳ ಜನಪ್ರಿಯತೆ ಗಳಿಸಿದ್ದಾರೆ
  • ಸಂಜನಾ ಮತ್ತು ಜಸ್ಪ್ರೀತ್ ದಂಪತಿಗಳಿಬ್ಬರೂ ಇಂದು ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ
ನಿರೂಪಕಿ ಸಂಜನಾ-ಜಸ್ಪ್ರೀತ್ ಬುಮ್ರಾ ಮಧ್ಯೆ ಪ್ರೀತಿ ಚಿಗುರಿದ್ದು ಹೇಗೆ? ಬಾಲಿವುಡ್‌ ಸಿನಿಮಾಗಿಂತ ಕಡಿಮೆಯಿಲ್ಲ ಈ ಲವ್‌ಸ್ಟೋರಿ!! title=

Jasprit Bumrah and Sanjana Ganeshan Love story: ಬುಮ್ರಾ ಮತ್ತು ಅವರ ಪತ್ನಿ ಸಂಜನಾ ಗಣೇಶನ್ ಬಹಳ ಜನಪ್ರಿಯತೆ ಗಳಿಸಿದ್ದಾರೆ.. ಇಂದು ನಾವು ಇಬ್ಬರು ಮೊದಲ ಭೇಟಿಯಾದ ಕ್ಷಣದ ಬಗ್ಗೆ ತಿಳಿಯೋಣ.. 

 ಸಂಜನಾ ಮತ್ತು ಜಸ್ಪ್ರೀತ್ ದಂಪತಿಗಳಿಬ್ಬರೂ ಇಂದು ಸುಖವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ, ಆದರೆ ಒಂದು ಕಾಲದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಅಹಂಕಾರಿಗಳಾಗಿ ಪರಿಗಣಿಸಿದ್ದು ಹೌದು. ಅವರ ಲವ್ ಸ್ಟೋರಿ ಶುರುವಾದ ರೀತಿ ಬಾಲಿವುಡ್ ಸಿನಿಮಾಗೆ ಪರ್ಫೆಕ್ಟ್ ಸ್ಕ್ರಿಪ್ಟ್ ಆಗಿದೆ.

ಇದನ್ನೂ ಓದಿ-T20 World Cup 2024: ಸೌತ್‌ ಆಫ್ರಿಕಾ ವಿರುದ್ಧ ಮಂಡಿಯೂರಿದ ನೇಪಾಳ

 ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಖ್ಯಾತ ಕ್ರೀಡಾ ನಿರೂಪಕಿಯಾಗಿದ್ದಾರೆ. 2019 ರ ವಿಶ್ವಕಪ್‌ನಲ್ಲಿ ಇಬ್ಬರೂ ಭೇಟಿಯಾಗುತ್ತಾರೆ.. ಅಲ್ಲಿ ಅವರಿಬ್ಬರ ಮಧ್ಯೆ ಇದ್ದ ಕೆಲವು ತಪ್ಪು ತಿಳುವಳಿಕೆಗಳು ದೂರವಾಗುತ್ತವೆ.. ಆಗ ಚಿಗುರೊಡೆದ ಪ್ರೀತಿಗಾಗಿ ದೀರ್ಘಕಾಲದ ಡೇಟಿಂಗ್‌ ಮಾಡಿ ನಂತರ  ಸಂಜನಾ ಮತ್ತು ಜಸ್ಪ್ರೀತ್ 2021 ರಲ್ಲಿ ವಿವಾಹವಾದರು.

ಇದನ್ನೂ ಓದಿ-T 20 Worldcup 2024: ಮಳೆಯಿಂದ ಮಾಸಿಹೋಯ್ತು ಪಾಕಿಸ್ತಾನದ ವಿಶ್ವಕಪ್‌ ಕನಸು..!

 ಸಂದರ್ಶನವೊಂದರಲ್ಲಿ ಜಸ್ಪ್ರೀತ್, 'ಒಬ್ಬರಿಗೊಬ್ಬರು ತಿಳಿದ ನಂತರವೂ ನಾವು ಪರಸ್ಪರ ದೀರ್ಘಕಾಲ ಮಾತನಾಡಲಿಲ್ಲ. ಯಾಕೆಂದರೆ ಸಂಜನಾಗೆ ದುರಹಂಕಾರ ಎಂದುಕೊಂಡಿದ್ದೆ. ಅವರಿಗೂ ನನ್ನ ಬಗ್ಗೆ ಅದೇ ಭಾವನೆ ಇತ್ತು ಎಂಬುದು ಕುತೂಹಲಕಾರಿ ಸಂಗತಿ. ನಾನು ಅವಳನ್ನು ಹಲವು ಬಾರಿ ನೋಡಿದ್ದೇನೆ ಆದರೆ ನಾವು ಪರಸ್ಪರರ ಬಗ್ಗೆ ಒಂದೇ ರೀತಿಯ ಆಲೋಚನೆಗಳನ್ನು ಹೊಂದಿದ್ದೆವು.. ಆದ್ದರಿಂದ ನಾವು ಮಾತನಾಡಲಿಲ್ಲ' ಎಂದು ಹೇಳಿದ್ದರು.

ಅಲ್ಲದೇ "2019 ರ ವಿಶ್ವಕಪ್ ಅನ್ನು ಕವರ್ ಮಾಡಲು ಇಂಗ್ಲೆಂಡ್‌ನಲ್ಲಿದ್ದಾಗ ನಾನು ಸಂಜನಾ ಅವರೊಂದಿಗೆ ಮೊದಲ ಬಾರಿಗೆ ಮಾತನಾಡಿದ್ದೇನೆ.. ಆಗಲೇ ನಾವು ಸ್ನೇಹಿತರಾಗಿದ್ದು, ನಂತರ ಸ್ನೇಹ ಹಾಗೇ ಪ್ರೀತಿ ಶುರುವಾಗಿದ್ದು.. ಎಂದು ಹೇಳಿದ್ದಾರೆ. ಸಂತೋಷದಿಂದ ಜೀವನ ನಡೆಸುತ್ತಿರುವ ಈ ದಂಪತಿಗೆ ಅಂಗದ್ ಜಸ್ಪ್ರೀತ್ ಬುಮ್ರಾ ಎಂಬ ಮಗನಿದ್ದಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News