ಬಿಸಿಸಿಐ ಅನ್ನು RTI ಕಾಯ್ದೆಯಡಿಯಲ್ಲಿ ತರಬೇಕು: ಕಾನೂನು ಸಮಿತಿ ಶಿಫಾರಸು

2016ರ ಜುಲೈನಲ್ಲಿ  ಸುಪ್ರೀಂಕೋರ್ಟ್, ಬಿಸಿಸಿಐ ಅನ್ನು RTI ಅಡಿ ತರಬೇಕೇ ಅಥವಾ ಬೇಡ ಎಂಬ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಕಾನೂನು ಆಯೋಗಕ್ಕೆ  ತಿಳಿಸಿತ್ತು. 

Last Updated : Apr 19, 2018, 09:59 AM IST
ಬಿಸಿಸಿಐ ಅನ್ನು RTI ಕಾಯ್ದೆಯಡಿಯಲ್ಲಿ ತರಬೇಕು: ಕಾನೂನು ಸಮಿತಿ ಶಿಫಾರಸು title=

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ)ಯನ್ನು ಮಾಹಿತಿ ಹಕ್ಕು ಕಾಯ್ದೆ(RTI) ಅಡಿ ತರಬೇಕು ಎಂದು ಏಪ್ರಿಲ್ 18 ರಂದು ಕಾನೂನು ಆಯೋಗ ಶಿಫಾರಸ್ಸು ಮಾಡಿದೆ. ಸಾರ್ವಜನಿಕ ಪ್ರಾಧಿಕಾರದ ವ್ಯಾಖ್ಯಾನದಡಿಯಲ್ಲಿ ಅದು ಸಾರ್ವಜನಿಕ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕ್ರಿಕೆಟ್ ಆಟವನ್ನು ನಿಯಂತ್ರಿಸುತ್ತಿರುವ ಬಿಸಿಸಿಐ ಪಾತ್ರ ಪಾರದರ್ಶಕವಾಗಿರಬೇಕಾದರರೆ ಅದು ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು. ಇಲ್ಲದಿದ್ದರೆ ಅಪಾರದರ್ಶಕತೆ ಮತ್ತು ಅಕೌಂಟೆಬಿಲಿಟಿ ಇಲ್ಲದ ವಾತಾವರಣಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಕಾನೂನು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.  

2016ರ ಜುಲೈನಲ್ಲಿ  ಸುಪ್ರೀಂಕೋರ್ಟ್, ಬಿಸಿಸಿಐ ಅನ್ನು RTI ಅಡಿ ತರಬೇಕೇ ಅಥವಾ ಬೇಡ ಎಂಬ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಕಾನೂನು ಆಯೋಗಕ್ಕೆ  ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ತನ್ನ ವರದಿ ತಯಾರಿಸಿರುವ ಕಾನೂನು ಆಯೋಗ, 'ಕ್ರಿಕೆಟ್ ಚಟುವಟಿಕೆಗಳ ಮೇಲೆ ಬಿಸಿಸಿಐ ಏಕಸ್ವಾಮ್ಯ ಹೊಂದಿದೆ. ಸಾರ್ವಜನಿಕರಿಗೆ ಮಂಡಳಿಯ ವ್ಯವಹಾರಗಳನ್ನು ಪ್ರಶ್ನಿಸುವ ಮುಕ್ತ ಅವಕಾಶಗಳಿಲ್ಲ. ಇದರಿಂದಾಗಿ ಮಂಡಳಿಗೆ ಯಾವುದೇ ಉತ್ತರದಾಯಿತ್ವ ಇಲ್ಲದಂತಾಗಿದೆ. ಸಾರ್ವಜನಿಕ ಸಂಸ್ಥೆಯಾಗಿ ರೂಪಿಸಲು ಅದನ್ನು RTI ವ್ಯಾಪ್ತಿಗೆ ತರುವುದು ಸೂಕ್ತ' ಎಂದು ಕಾನೂನು ಸಚಿವಾಲಯಕ್ಕೆ ಬುಧವಾರ (ಏಪ್ರಿಲ್ 18) ಸಲ್ಲಿಸಿದ ತನ್ನ ವರದಿಯಲ್ಲಿ ತಿಳಿಸಿದೆ. ಸಂವಿಧಾನದ 12 ನೇ ಅಧಿನಿಯಮದ ವ್ಯಾಖ್ಯಾನದ ಅಡಿಯಲ್ಲಿ ಬಿಸಿಸಿಐ ಅನ್ನು ತರಬೇಕು ಎಂದು ಕಾನೂನು ಆಯೋಗ ತಿಳಿಸಿದೆ.

Trending News