Baba Harbhajan Singh: ನಮ್ಮ ದೇಶದ ಸೈನಿಕರು ದೇಶವನ್ನು ಶತ್ರುಗಳಿಂದ ಸದಾ ರಕ್ಷಿಸುತ್ತಾರೆ ಎಂಬುದು ಅರಿತ ಸಂಗತಿ. ಆದರೆ ಹುತಾತ್ಮನಾಗಿ 48 ವರ್ಷಗಳ ನಂತರವೂ ದೇಶವನ್ನು ರಕ್ಷಿಸುತ್ತಿರುವ ಓರ್ವ ಯೋಧನ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ವಿಚಿತ್ರ ಅನಿಸಬಹುದು, ಆದರೆ ಇದು ಸತ್ಯ.
ಹರ್ಭಜನ್ ಸಿಂಗ್... ಈ ಯೋಧ ಹುತಾತ್ಮರಾಗಿ 56 ವರ್ಷಗಳೇ ಕಳೆದಿವೆ. ಆದರೆ ಸಿಕ್ಕಿಂ ಗಡಿಯಲ್ಲಿ ಇನ್ನೂ ದೇಶವನ್ನು ರಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ಗಡಿಯಲ್ಲಿ ಅವರ ದೇವಾಲಯವನ್ನೂ ನಿರ್ಮಿಸಲಾಗಿದೆ. ಆ ಮಂದಿರಕ್ಕೆ ಸೈನಿಕರು ಭೇಟಿ ಕೊಟ್ಟು ದರ್ಶನ ಕೂಡ ಪಡೆಯುತ್ತಾರೆ. ಹರ್ಭಜನ್ ಸಿಂಗ್ ಭಯ ಎಷ್ಟಿದೆಯೆಂದರೆ ಶತ್ರುಗಳು ಕೂಡ ಅವರ ಹೆಸರಿಗೆ ಹೆದರುತ್ತಾರೆ. ಚೀನಾ ನಡೆಸುತ್ತಿರುವ ಷಡ್ಯಂತ್ರಗಳ ಬಗ್ಗೆ ಹರ್ಭಜನ್ ಸೈನಿಕರಿಗೆ ಮುಂಚಿತವಾಗಿ ತಿಳಿಸುತ್ತಾರೆ ಎಂದು ಸೈನಿಕರು ನಂಬುತ್ತಾರೆ. ಇವೆಲ್ಲವನ್ನು ಕೇಳುವಾಗ ನಿಮಗೆ ಅಚ್ಚರಿಯಾಗದೆ ಇರದು.
ಚೀನಾದ ಸೈನಿಕರೂ ಸಹ ಬಾಬಾ ಹರ್ಭಜನ್ ಸಿಂಗ್ ಅವರ ಆತ್ಮವನ್ನು ನಂಬುತ್ತಾರೆ ಮತ್ತು ಭಯಪಡುತ್ತಾರೆ. ಈ ಅಂಶದಿಂದಲೇ ಬಾಬಾ ಹರ್ಭಜನ್ ಸಿಂಗ್ ಅವರ ಶಕ್ತಿ ಎಷ್ಟಿದೆ ಎಂಬುದನ್ನು ಅಂದಾಜು ಮಾಡಬಹುದು. ಇನ್ನು ಸೈನಿಕರು ಬಾಬಾ ಹರ್ಭಜನ್ ಸಿಂಗ್ ಅವರ ದೇವಸ್ಥಾನಕ್ಕೆ ಹೋದಾಗ, ಅವರು ಉಪಸ್ಥಿತಿ ಇರುವುದು ಅವರ ಅನುಭವಕ್ಕೆ ಬರುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಭಾರತ ಮತ್ತು ಚೀನಾ ನಡುವೆ ಸಭೆ ನಡೆದಾಗಲೆಲ್ಲಾ ಬಾಬಾ ಹರ್ಭಜನ್ ಸಿಂಗ್ ಅವರಿಗೆಂದೇ ಕುರ್ಚಿಯನ್ನು ಖಾಲಿ ಇಡಲಾಗುತ್ತದೆ.
ಸಿಕ್ಕಿಂ ಗಡಿಯಲ್ಲಿ ನಿಯೋಜನೆಗೊಂಡಿರುವ ಸೈನಿಕರು ಹೇಳುವಂತೆ ಬಾಬಾ ಸಾವಿನ ನಂತರವೂ ಗಡಿಯಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಲೇ ಇರುತ್ತಾನೆ. ಇದಕ್ಕಾಗಿ ಬಾಬಾ ಹರ್ಭಜನ್ ಸಿಂಗ್ ಅವರಿಗೂ ಸರಿಯಾದ ಸಂಭಾವನೆ ನೀಡಲಾಗುತ್ತದೆ. ಇವರಿಗೆ ಸೇನೆಯಲ್ಲಿ ರ್ಯಾಂಕ್ ಕೂಡ ಇದೆ. ಸ್ವಲ್ಪ ಸಮಯದ ಹಿಂದೆ, ಅವರನ್ನು ಪಂಜಾಬ್‌ನ ಅವರ ಹಳ್ಳಿಗೆ ರಜೆಯ ಮೇಲೆ ಕಳುಹಿಸಲಾಗಿತ್ತಂತೆ. ಆದರೆ, ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದಾಗ ರಜೆ ಮೇಲೆ ಕಳುಹಿಸದಂತೆ ತಡೆದಿದ್ದಾರೆ. ಈಗ ಬಾಬಾ ಪ್ರತಿ ವರ್ಷ ಹನ್ನೆರಡು ತಿಂಗಳು ಕರ್ತವ್ಯದಲ್ಲಿ ಇರುತ್ತಾರೆ.
ದೇವಸ್ಥಾನದಲ್ಲಿ ಬಾಬಾಗೆಂದು ಒಂದು ಕೋಣೆಯನ್ನು ನಿರ್ಮಿಸಲಾಗಿದೆ. ಆ ಹಾಸಿಗೆಯನ್ನು ಪ್ರತಿದಿನ ಸ್ವಚ್ಛಗೊಳಿಸಲಾಗುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಹುದು. ಬಾಬಾ ಅವರ ಸೇನಾ ಸಮವಸ್ತ್ರ ಮತ್ತು ಬೂಟುಗಳನ್ನು ಒಂದೇ ಕೋಣೆಯಲ್ಲಿ ಇರಿಸಲಾಗಿದೆ. ಪ್ರತಿನಿತ್ಯ ಸ್ವಚ್ಛಗೊಳಿಸಿದರೂ ಶೂಗಳಲ್ಲಿ ಕೆಸರು, ಬೆಡ್‌ಶೀಟ್‌ಗಳಲ್ಲಿ ಸುಕ್ಕುಗಳು ಮೂಡಿರುತ್ತವೆ ಎನ್ನುತ್ತಾರೆ ಅಲ್ಲಿನ ಜನರು.
ಬಾಬಾ ಹರ್ಭಜನ್ ಸಿಂಗ್ ಯಾರು?
ಹರ್ಭಜನ್ ಸಿಂಗ್ 30 ಆಗಸ್ಟ್ 1946 ರಂದು ಗುಜ್ರಾವಾಲಾದಲ್ಲಿ ಜನಿಸಿದರು. ಕೇವಲ ಎರಡು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವರು, ಸಿಕ್ಕಿಂನಲ್ಲಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಆ ಘಟನೆ ಅರಿವಿಗೆ ಬಂದಿದ್ದು ಮತ್ತೋರ್ವ ಯೋಧನ ಕನಸಿನ ಮೂಲಕ. ಅದು ಹೇಗೆ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಇಲ್ಲಿದೆ ನೋಡಿ ವಿವರಣೆ...
ಇದನ್ನೂ ಓದಿ: ಮಧುಮೇಹಕ್ಕೆ ಸಂಜೀವಿನಿ ಈ ಎಲೆ! ಬೆಳಗಿನ ಜಾವ ಮೂರು ಎಸಳು ತಿಂದ್ರೆ ಮತ್ತೇ ಯಾವತ್ತೂ ಹೆಚ್ಚಾಗಲ್ಲ ಶುಗರ್!!
ಒಂದು ದಿನ ಬಾಬಾ ಹರ್ಭಜನ್ ಸಿಂಗ್ ಹೇಸರಗತ್ತೆಯ ಮೇಲೆ ನದಿಯನ್ನು ದಾಟುತ್ತಿದ್ದಾಗ, ನದಿಯ ಬಲವಾದ ಪ್ರವಾಹದಲ್ಲಿ ಕೊಚ್ಚಿಹೋದರು. ಎರಡು ದಿನ ತೀವ್ರ ಶೋಧ ನಡೆಸಿದರೂ ಪತ್ತೆಯಾಗದ ಕಾರಣ ಅವರ ಮೃತದೇಹ ನದಿ ನೀರಿನಲ್ಲಿ ಕೊಚ್ಚಿ ಹೋಗಿತ್ತು ಎಂದು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಆದರೆ ಇದಾದ ನಂತರ ಹರ್ಭಜನ್ ಸಿಂಗ್ ಯೋಧನೋರ್ವನ ಕನಸಿನಲ್ಲಿ ಬಂದು ತನ್ನ ಮೃತ ದೇಹ ಇದೊಂದು ಜಾಗದಲ್ಲಿದೆ ಎಂದು ಹೇಳುತ್ತಾರೆ. ಆ ಸೈನಿಕ ಮರುದಿನ ಇತರ ಸೈನಿಕರೊಂದಿಗೆ ಅದೇ ಸ್ಥಳಕ್ಕೆ ಹೋದಾಗ, ಹರ್ಭಜನ್ ಸಿಂಗ್ ಅವರ ಮೃತದೇಹ ಅಲ್ಲಿಯೇ ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ, ಅದಾದ ನಂತರ ಹರ್ಭಜನ್ ತನ್ನ ಇರುವಿಕೆಯನ್ನು ತೋರಿಸುತ್ತಲೇ ಇದ್ದರು. ರಾತ್ರಿ ವೇಳೆ ಕಾರ್ಯಾಚರಣೆ ಮಾಡುವ ಯೋಧರು ಅಪ್ಪಿತಪ್ಪಿ ನಿದ್ದೆ ಮಾಡಿದರೆ, ಏನಾದರೂ ಶಬ್ದ ಮಾಡಿ ಅವರನ್ನು ಎಚ್ಚರಗೊಳಿಸುವುದು, ಶತ್ರುಗಳ ದಾಳಿಯ ಬಗ್ಗೆ ಮುನ್ಸೂಚನೆ ನೀಡುವುದು ಹೀಗೆಲ್ಲಾ ಹರ್ಭಜನ್ ಆತ್ಮ ತನ್ನ ಕರ್ತವ್ಯವನ್ನು ಮಾಡುತ್ತಿತ್ತು. ಅಂದಿನಿಂದ ಬಾಬಾ ಹರ್ಭಜನ್ ಸಿಂಗ್ ಅವರ ಬಂಕರ್ ಅನ್ನು ದೇವಸ್ಥಾನವಾಗಿ ಪರಿವರ್ತಿಸಲಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.