ನವದೆಹಲಿ: ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ನ್ನು ಗೆದ್ದ ರೀತಿ ಮಾತ್ರ ಇನ್ನು ಹಚ್ಚ ಹಸಿರಾಗಿದೆ. ಇಂತಹ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ಜಿಮ್ಮಿ ನಿಶಂ ಈಗ ತಮ್ಮ ಟ್ವಿಟ್ಟರ್ ಮೂಲಕ ಮೂರು ಪದಗಳ ಕುರಿತಾದ ನೋಟಿಫಿಕೆಶನನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದಾರೆ.
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡದ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಪಂದ್ಯ ಎನ್ನಬಹುದು. ವಿಶೇಷವೆಂದರೆ ಈ ಫೈನಲ್ ಪಂದ್ಯ ಟೈ ಆಗಿತ್ತು, ಕೊನೆಗೆ ಸೂಪರ್ ಓವರ್ ಆಡಿಸಿದಾಗ ಅಲ್ಲಿಯೂ ಕೂಡ ಮ್ಯಾಚ್ ಟೈ ಆಗಿತ್ತು. ಆದರೆ ಕೊನೆಗೆ ಓವರ್ ವೊಂದರಲ್ಲಿನ ಬೌಂಡರಿಗಳ ಆಧಾರದ ಮೇಲೆ ಇಂಗ್ಲೆಂಡ್ ತಂಡವನ್ನು ವಿಶ್ವಕಪ್ ವಿಜೇತ ತಂಡವೆಂದು ಘೋಷಿಸಲಾಯಿತು.
I think that just about covers it. pic.twitter.com/IAetFuXk4W
— Jimmy Neesham (@JimmyNeesh) October 26, 2019
ಈ ಹಿನ್ನಲೆಯಲ್ಲಿ ಈಗ ಇದರ ನೆನಪನ್ನು ಅಪ್ಪಿ ತಪ್ಪಿಯೂ ಕೂಡ ಸ್ಮರಿಸಿಕೊಳ್ಳಬಾರದು ಎಂದು ನಿರ್ಧರಿಸಿರುವ ನ್ಯೂಜಿಲೆಂಡ್ ತಂಡದ ಜಿಮ್ಮಿ ನಿಶಂ ತಮ್ಮ ಟ್ವಿಟ್ಟರ್ ಖಾತೆಯಿಂದ '2019, ಇಂಗ್ಲೆಂಡ್ ಮತ್ತು ವಿಶ್ವಕಪ್ ' ಈ ಮೂರು ಪದಗಳಿಗೆ ಸಂಬಂಧಿಸಿದ ನೋಟಿಫಿಕೇಶನ್ ನ್ನು ಅವರು ಮ್ಯೂಟ್ ಮಾಡಿದ್ದಾರೆ.