Team India: ಟೀಂ ಇಂಡಿಯಾದ ಮಾರಕ ಅಸ್ತ್ರವಾಗಿದ್ದ ಈ ಆಟಗಾರ ಇದ್ದಕ್ಕಿದ್ದಂತೆ ನಿವೃತ್ತಿ ಹೊಂದಬೇಕಾಯಿತು!

ಏಕದಿನ, ಟಿ-20 ಹಾಗೂ ಟೆಸ್ಟ್ ಸೇರಿದಂತೆ ಎಲ್ಲಾ ಮಾದರಿಯ ಪಂದ್ಯಗಳಲ್ಲಿಯೂ ಓಜಾ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದರು. ಆದರೆ ಅವಕಾಶಗಳ ಕೊರತೆ ಅವರ ವೃತ್ತಿಜೀವನಕ್ಕೆ ದೊಡ್ಡ ಪೆಟ್ಟು ನೀಡಿತು.

Written by - Puttaraj K Alur | Last Updated : Mar 1, 2022, 08:18 PM IST
  • ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ 33ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಬೇಕಾಯಿತು
  • ಟೆಸ್ಟ್ ಕ್ರಿಕೆಟ್ ನಲ್ಲಿ 10 ವಿಕೆಟ್ ಸಾಧನೆ ಮಾಡಿದರೂ ಪ್ರಗ್ಯಾನ್ ಓಜಾಗೆ ಸಿಗದ ಅವಕಾಶ
  • ಸಚಿನ್ ತೆಂಡೂಲ್ಕರ್ ವಿದಾಯದ ಸಂಭ್ರಮದ ‍ಮಧ್ಯೆ ಮರೆತುಹೋದ ಓಜಾ ಸಾಧನೆ
Team India: ಟೀಂ ಇಂಡಿಯಾದ ಮಾರಕ ಅಸ್ತ್ರವಾಗಿದ್ದ ಈ ಆಟಗಾರ ಇದ್ದಕ್ಕಿದ್ದಂತೆ ನಿವೃತ್ತಿ ಹೊಂದಬೇಕಾಯಿತು! title=
ಜಡೇಜಾರಿಂದ ಈ ಆಟಗಾರನ ಕೆರಿಯರ್ ಹಾಳಾಗಿದೆ!

ನವದೆಹಲಿ: ಭಾರತ ಕ್ರಿಕೆಟ್‌ ತಂಡ(Team India)ದಲ್ಲಿ ಆಯ್ಕೆಯಾಗುವುದು ಎಷ್ಟು ಕಷ್ಟವೋ, ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವುದು ಅಷ್ಟೇ ಕಷ್ಟ. ಏಕೆಂದರೆ ಇಂದು ಅನೇಕ ಆಟಗಾರರು ತಮ್ಮ ಅತ್ಯುತ್ತಮ ಫಾರ್ಮ್ ಮೂಲಕ ಅನುಭವಿ ಆಟಗಾರರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಟೆಸ್ಟ್ ಮ್ಯಾಚ್‌ನಲ್ಲಿ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿಯೂ, ಟೀಂ ಇಂಡಿಯಾದ ಮಾರಕ ಅಸ್ತ್ರವಾಗಿ ಮಿಂಚಿಯೂ ಅವಕಾಶ ಸಿಗದೆ ಹೋದರೆ ಹೇಗಾಗಬೇಡಿ ಹೇಳಿ.

ಹೌದು, ಅದ್ಭುತ ಬೌಲಿಂಗ್ ಪ್ರದರ್ಶನದ ಹೊರತಾಗಿಯೂ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ(Pragyan Ojha) ಅವರನ್ನು ಭಾರತೀಯ ತಂಡದಿಂದ ಕೈಬಿಡಲಾಗಿದೆ. ಅವರು ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಒಂದು ಕಾಲದಲ್ಲಿ ಈ ಬೌಲರ್ ಟೀಂ ಇಂಡಿಯಾದ ದೊಡ್ಡ ಅಸ್ತ್ರವಾಗಿದ್ದರು. ಓಜಾ ಮತ್ತು ಆರ್.ಅಶ್ವಿನ್ ಅವರನ್ನು ಹಿಟ್ ಜೋಡಿ ಎಂದೇ ಕರೆಯಲಾಗುತ್ತಿತ್ತು. ಆದರೂ ಸರಿಯಾದ ಅವಕಾಶಗಳು ಸಿಗದೆ ಪ್ರಗ್ಯಾನ್ ಓಜಾರ ವೃತ್ತಿಜೀವನವೇ ಡೋಲಾಯಮಾನವಾಯಿತು.

ಇದನ್ನೂ ಓದಿ: Women's ODI Rankings: ಎರಡನೇ ಸ್ಥಾನ ಉಳಿಸಿಕೊಂಡ ಮಿಥಾಲಿ ರಾಜ್, 20 ನೇ ಸ್ಥಾನದಲ್ಲಿ ಹರ್ಮನ್ಪ್ರೀತ್ ಕೌರ್

ಜಡೇಜಾರಿಂದ ಈ ಆಟಗಾರನ ಕೆರಿಯರ್ ಹಾಳಾಗಿದೆ!

ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ(Pragyan Ojha) 33ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಬೇಕಾಯಿತು ಮತ್ತು ರವೀಂದ್ರ ಜಡೇಜಾ(Ravindra Jadeja) ಇದಕ್ಕೆ ದೊಡ್ಡ ಕಾರಣವೆಂದು ಹೇಳಲಾಗಿದೆ. ಪ್ರಗ್ಯಾನ್ ಓಜಾ ಅವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ 14 ನವೆಂಬರ್ 2013ರಂದು ಆಡಿದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಸಚಿನ್ ತೆಂಡೂಲ್ಕರ್(Sachin Tendulkar) ಅವರ ವಿದಾಯ ಪಂದ್ಯವಾಗಿತ್ತು. ಮುಂಬೈನಲ್ಲಿ ನಡೆದ ಈ ಟೆಸ್ಟ್ ಪಂದ್ಯದಲ್ಲಿ ಪ್ರಗ್ಯಾನ್ ಎರಡೂ ಇನಿಂಗ್ಸ್‌ಗಳಲ್ಲಿ 89 ರನ್‌ಗಳಿಗೆ 10 ವಿಕೆಟ್‌ಗಳನ್ನು ಕಬಳಿಸಿದ್ದರು. 40 ರನ್‌ಗಳಿಗೆ 5 ವಿಕೆಟ್ ಮತ್ತು 49 ರನ್‌ಗಳಿಗೆ 5 ವಿಕೆಟ್ ಪಡೆದು ಓಜಾ ಮಿಂಚಿದ್ದರು.

ಇದರ ನಂತರ ಓಜಾರ ಫಾರ್ಮ್ ಬಗ್ಗೆ ಪ್ರಶ್ನಿಸಲಾಯಿತು. ಈ ಕಾರಣಕ್ಕಾಗಿಯೇ ಟೀಂ ಇಂಡಿಯಾ(Team India)ದಿಂದ ಅವರು ಹೊರಗುಳಿಯಬೇಕಾಯಿತು. ಇದರ ನಂತರ ತಮ್ಮ ಫಾರ್ಮ್ ಸುಧಾರಿಸಲು ಓಜಾ ಸಾಕಷ್ಟು ಶ್ರಮಿಸಿದರು ಮತ್ತು ಐಸಿಸಿ(ICC)ಯಿಂದ ಕ್ಲೀನ್ ಚಿಟ್ ಕೂಡ ಪಡೆದರು. ಆದರೆ ಅಷ್ಟೊತ್ತಿಗೆ ಆಗಿನ ನಾಯಕ ಎಂಎಸ್ ಧೋನಿ ಜೊತೆ ಗುರುತಿಸಿಕೊಂಡಿದ್ದ ರವೀಂದ್ರ ಜಡೇಜಾ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಇದೇ ಕಾರಣದಿಂದ ಓಜಾ ತಂಡಕ್ಕೆ ಮತ್ತೆ ಮರಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: ಕೊಹ್ಲಿಯ ಉತ್ತರಾಧಿಕಾರಿಯನ್ನು ನಾಯಕನಾಗಿ ಘೋಷಿಸಲು ಆರ್‌ಸಿಬಿ ವಿಳಂಬ ಮಾಡುತ್ತಿರುವುದೇಕೆ?

ಸಚಿನ್ ವಿದಾಯ ಪಂದ್ಯದಿಂದ ಮರೆಯಾಯ್ತು 10 ವಿಕೆಟ್ ಸಾಧನೆ

ಒಡಿಶಾದಲ್ಲಿ ಸೆಪ್ಟೆಂಬರ್ 5, 1986ರಂದು ಜನಿಸಿದ ಓಜಾ ಅವರ ಕೊನೆಯ ಟೆಸ್ಟ್ ಅತ್ಯಂತ ಐತಿಹಾಸಿಕವಾಗಿತ್ತು. ಓಜಾ ಈ ಟೆಸ್ಟ್‌ನಲ್ಲಿ 10 ವಿಕೆಟ್‌ಗಳನ್ನು ಗಳಿಸಿದ್ದು ಮಾತ್ರವಲ್ಲದೆ, ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್(Sachin Tendulkar Retirement) ಅವರ ವೃತ್ತಿಜೀವನದ ಕೊನೆಯ ಟೆಸ್ಟ್ ಆಗಿತ್ತು. ನವೆಂಬರ್ 14, 2013ರಂದು ಮುಂಬೈನಲ್ಲಿ ನಡೆದ ಈ ಟೆಸ್ಟ್‌ನಲ್ಲಿ ಓಜಾ ಅವರ ಮಾರಕ ಬೌಲಿಂಗ್ ದಾಳಿಗೆ ಕೆರಿಬಿಯನ್ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ತಿಣುಕಾಡಬೇಕಾಯಿತು. ಕೇವಲ 3 ದಿನಗಳಲ್ಲಿ ಮುಕ್ತಾಯವಾದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಇರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಈ ಪಂದ್ಯದಲ್ಲಿ ಸಚಿನ್ ಅವರಿಗೆ ಸಂಭ್ರಮದ ವಿದಾಯ ಹೇಳಲಾಯಿತು. ಓಜಾ ಈ ಪಂದ್ಯದಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಪಡೆದರೂ ಅವರ 10 ವಿಕೆಟ್ ಸಾಧನೆ ಸಚಿನ್ ಅವರ ವಿದಾಯದ ಸಂಭ್ರಮದ ‍ಮಧ್ಯೆ ಯಾರಿಗೂ ತಿಳಿಯದಂತೆ ಮೆರೆತು ಹೋಯಿತು.  

ಏಕದಿನ, ಟಿ-20 ಹಾಗೂ ಟೆಸ್ಟ್ ಸೇರಿದಂತೆ ಎಲ್ಲಾ ಮಾದರಿಯ ಪಂದ್ಯಗಳಲ್ಲಿಯೂ ಓಜಾ(Pragyan Ojha) ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದರು. ಆದರೆ ಅವರಿಗೆ ಅವಕಾಶಗಳ ಕೊರತೆ ವೃತ್ತಿಜೀವನಕ್ಕೆ ದೊಡ್ಡ ಪೆಟ್ಟು ನೀಡಿತು. ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶಗಳು ಸಿಗದೆ ಓಜಾ ವೃತ್ತಿಜೀವನದ ಬಂಡಿ ಹಳಿತಪ್ಪಿದಂತಾಯಿತು. ಹೀಗಾಗಿ ವಿಧಿ ಇಲ್ಲದೆ ಅವರು ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್ ಬೈ ಹೇಳಬೇಕಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News