Thomas Cup : ಥಾಮಸ್ ಕಪ್ ಗೆದ್ದು ಇತಿಹಾಸ ಬರೆದ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡ!

ಥಾಮಸ್ ಕಪ್ ಗೆದ್ದು ಭಾರತ ತಂಡದ ಜೊತೆ ಪಿಎಂ ಮೋದಿಯವರು ಕರೆ ಮಾಡಿ ಮಾತನಾಡಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಥಾಮಸ್ ಕಪ್ ಗೆದ್ದು 135 ಕೋಟಿ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ ನಮ್ಮ ಬ್ಯಾಡ್ಮಿಂಟನ್ ಚಾಂಪಿಯನ್‌ಗಳೊಂದಿಗೆ ವಿಶೇಷ ಸಂವಾದ ಎಂದು ಬರೆದುಕೊಂಡಿದ್ದಾರೆ.

Last Updated : May 15, 2022, 11:51 PM IST
  • ಬ್ಯಾಂಕಾಕ್‌ನಲ್ಲಿ ಭಾನುವಾರ ನಡೆದ ಥಾಮಸ್ ಕಪ್ ಪುರುಷರ ಬ್ಯಾಡ್ಮಿಂಟನ್ ಪಂದ್ಯ
  • ಇಂಡೋನೇಷ್ಯಾವನ್ನು ನಿರ್ದಯವಾಗಿ 3-0 ಅಂತರದಿಂದ ಸೋಲಿಸಿದ ಭಾರತ
  • ಥಾಮಸ್ ಕಪ್ ಗೆಲುವು: ಟೀಂ ಇಂಡಿಯಾಗೆ ವಿಶ್ ಮಾಡಿದ ಗಣ್ಯರು
Thomas Cup : ಥಾಮಸ್ ಕಪ್ ಗೆದ್ದು ಇತಿಹಾಸ ಬರೆದ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡ! title=

ನವದೆಹಲಿ : ಬ್ಯಾಂಕಾಕ್‌ನಲ್ಲಿ ಭಾನುವಾರ ನಡೆದ ಥಾಮಸ್ ಕಪ್ ಪುರುಷರ ಬ್ಯಾಡ್ಮಿಂಟನ್ ಪಂದ್ಯವನ್ನ ಹಾಲಿ ಚಾಂಪಿಯನ್ ಇಂಡೋನೇಷ್ಯಾವನ್ನು ನಿರ್ದಯವಾಗಿ 3-0 ಅಂತರದಿಂದ ಸೋಲಿಸಿ, ಭಾರತ ಪುರುಷರ ತಂಡ ಚೊಚ್ಚಲ ಬಾರಿಗೆ ಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.

ಭಾರತದ ಪುರುಷರ ತಂಡ ಚಾಂಪಿಯನ್‌ಶಿಪ್‌ ನಲ್ಲಿ ಮೊದಲ ಬಾರಿಗೆ ಫೈನಲ್‌ನಲ್ಲಿ ಸ್ಪರ್ಧಿಸಿತ್ತು, ವಿಶ್ವದ 11 ನೇ ಶ್ರೇಯಾಂಕಿತ ಕಿಡಂಬಿ ಶ್ರೀಕಾಂತ್ 21-15, 23-21 ರಿಂದ ಉನ್ನತ ಶ್ರೇಯಾಂಕದ ಜೊನಾಟನ್ ಕ್ರಿಸ್ಟಿ ಅವರನ್ನು ಸೋಲಿಸಿದಾಗ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಇದನ್ನೂ ಓದಿ : ಸೌತ್ ಸಿನಿ ಇಂಡಸ್ಟ್ರಿ ಎಂಟ್ರಿಗೆ ಆರತಿ ಬೇಡಿ ರೆಡಿ... ಯಾರು ಗೊತ್ತಾ ಈ ಬ್ಯೂಟಿ..?

ಈ ಹಿಂದೆ 14 ಬಾರಿ ಚಾಂಪಿಯನ್‌ಶಿಪ್‌ ಆಗಿದ್ದ ಇಂಡೋನೇಷ್ಯಾ ತಂಡವನ್ನ  ಟೀಂ ಇಂಡಿಯಾ ಬಡೆದು ಬಾಯಿಗೆ ಹಾಕಿಕೊಂಡಿತು.

ಥಾಮಸ್ ಕಪ್ ಗೆಲುವು: ಟೀಂ ಇಂಡಿಯಾಗೆ ವಿಶ್ ಮಾಡಿದ ಗಣ್ಯರು

ಥಾಮಸ್ ಕಪ್ ಗೆದ್ದು ಭಾರತ ತಂಡದ ಜೊತೆ ಪಿಎಂ ಮೋದಿಯವರು ಕರೆ ಮಾಡಿ ಮಾತನಾಡಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಥಾಮಸ್ ಕಪ್ ಗೆದ್ದು 135 ಕೋಟಿ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ ನಮ್ಮ ಬ್ಯಾಡ್ಮಿಂಟನ್ ಚಾಂಪಿಯನ್‌ಗಳೊಂದಿಗೆ ವಿಶೇಷ ಸಂವಾದ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Harbhajan Vs Symonds: ‘ಮಂಕಿಗೇಟ್’ ಪ್ರಕರಣದ ಬಗ್ಗೆ ನಿಮಗೆಷ್ಟು ಗೊತ್ತು..?

ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವಿಟ್ಟರ್ ನಲ್ಲಿ ಭಾರತ ತಂಡವನ್ನ ಹಾಡಿಹೊಗಳಿದ್ದಾರೆ. 

ಭಾರತ ತಂಡ ಥಾಮಸ್ ಕಪ್ ಅನ್ನು ತನ್ನದಾಗಿಸಿಕೊಂಡಿದೆ. 

ಭಾರತೀಯ ಬ್ಯಾಡ್ಮಿಂಟನ್ ತಂಡಕ್ಕೆ ಇದು ಮಹತ್ವದ ದಿನವಾಗಿದ್ದು ಅದು ನಮ್ಮ ಕ್ರೀಡಾ ಇತಿಹಾಸದಲ್ಲಿ ಅಚ್ಚೊತ್ತಿದೆ. 

ಈ ಮಹಾನ್ ಸಾಧನೆಗಾಗಿ ನಾನು ನಮ್ಮ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಪ್ರತಿಯೊಬ್ಬ ಭಾರತೀಯನೂ ಇಂದು ಅಪಾರ ಹೆಮ್ಮೆಪಡುವ ದಿನ ಎಂದು ಬರೆದುಕೊಂಡಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News