LSG vs RR: ಇಂದು ಲಕ್ನೋ-ರಾಜಸ್ಥಾನ ನಡುವೆ ಹಣಾಹಣಿ: ಸಂಭಾವ್ಯ ಆಟಗಾರರ ಪಟ್ಟಿ ಇಂತಿದೆ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಉಭಯ ತಂಡಗಳು ಅದ್ಭುತ ಪ್ರದರ್ಶನ ನೀಡುತ್ತಿದೆ. ಕನ್ನಡಿಗ ಕೆ.ಎಲ್‌ ರಾಹುಲ್‌ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಟೂರ್ನಿಯಲ್ಲಿ ಭರ್ಜರಿ ಹವಾ ಶುರು ಮಾಡಿದೆ.   

Written by - Bhavishya Shetty | Last Updated : May 15, 2022, 10:21 AM IST
  • ರಾಜಸ್ಥಾನ ರಾಯಲ್ಸ್‌ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ನಡುವೆ ಪಂದ್ಯ
  • ಮುಂಬೈನ ಬ್ರಬೋರ್ಬ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಆಟ
  • ರಾಜಸ್ಥಾನಕ್ಕೆ ಗೆಲ್ಲಲೇ ಬೇಕಾದ ಅನಿವಾರ್ಯತೆ
LSG vs RR: ಇಂದು ಲಕ್ನೋ-ರಾಜಸ್ಥಾನ ನಡುವೆ ಹಣಾಹಣಿ: ಸಂಭಾವ್ಯ ಆಟಗಾರರ ಪಟ್ಟಿ ಇಂತಿದೆ title=
Rajasthan Royals

ಇಂದು ಸಂಜೆ 7.30ಕ್ಕೆ ಮುಂಬೈನ ಬ್ರಬೋರ್ಬ್‌ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್‌ ಮತ್ತು ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಡುವೆ ಹಣಾಹಣಿ ನಡೆಯಲಿದೆ. ಉಭಯ ತಂಡಗಳು ಪ್ಲೇ ಆಫ್‌ ಪ್ರವೇಶೀಸಲು ಕಾದಾಟ ನಡೆಸಲಿದ್ದು, ಈ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ. 

ಇದನ್ನು ಓದಿ: Gold-Silver: ಗ್ರಾಹಕರೇ ಗಮನಿಸಿ... ಬಂಗಾರ-ಬೆಳ್ಳಿ ಖರೀದಿದಾರರಿಗೆ ಇಲ್ಲಿದೆ ಶುಭ ಸುದ್ದಿ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಉಭಯ ತಂಡಗಳು ಅದ್ಭುತ ಪ್ರದರ್ಶನ ನೀಡುತ್ತಿದೆ. ಕನ್ನಡಿಗ ಕೆ.ಎಲ್‌ ರಾಹುಲ್‌ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಟೂರ್ನಿಯಲ್ಲಿ ಭರ್ಜರಿ ಹವಾ ಶುರು ಮಾಡಿದೆ. 

ಇಲ್ಲಿವರೆಗೆ ಹನ್ನೆರಡು ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಎಂಟರಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಅನುಭವಿಸಿದ ಸೋಲು ಸೇರಿ ಒಟ್ಟಾರೆಯಾಗಿ ನಾಲ್ಕು ಪಂದ್ಯಗಳಲ್ಲಿ ಪತನ ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. 

ಇನ್ನೊಂದೆಡೆ ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನ ರಾಯಲ್ಸ್‌ ತಂಡವೂ ಸಹ ಅದ್ಭುತವಾಗಿ ಆಡುತ್ತಿದ್ದು ಇಲ್ಲಿವರೆಗೆ ಹನ್ನೆರಡು ಪಂದ್ಯಗಳನ್ನಾಡಿದೆ. ಇದರಲ್ಲಿ ಏಳು ಪಂದ್ಯ ಗೆದ್ದಿದ್ದರೆ ಐದರಲ್ಲಿ ಸೋಲು ಕಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. 

ಐಪಿಎಲ್‌ ಟೂರ್ನಿಯಲ್ಲಿ ಅಗ್ರಸ್ಥಾನ ಪಡೆದ ಎರಡು ತಂಡಗಳ ನಡುವೆ ಇಂದು ಹಣಾಹಣಿ ನಡೆಯಲಿದೆ. ಈ ಪಂದ್ಯದಲ್ಲಿ ವಿಜಯ ಮಾಲೆ ಯಾರಿಗೆ ಲಭಿಸಲಿದೆ ಎಂದು ಕಾದುನೋಡಬೇಕಿದೆ. 

ಇದನ್ನು ಓದಿ: CSK vs GT: ಗುಜರಾತ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕುತ್ತಾ ಚೆನ್ನೈ!

ಸಂಭಾವ್ಯ ಆಟಗಾರರ ಪಟ್ಟಿ: 
ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ವಿ.ಕೀ), ಕೆಎಲ್ ರಾಹುಲ್ (ಕ್ಯಾ), ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕರಣ್ ಶರ್ಮಾ, ಅವೇಶ್ ಖಾನ್, ದುಷ್ಮಂತ ಚಮೀರಾ, ಮೊಹ್ಸಿನ್ ಖಾನ್

ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ಕ್ಯಾ &ವಿ.ಕೀ), ದೇವದತ್ ಪಡಿಕ್ಕಲ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಕುಲದೀಪ್ ಸೇನ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News