Fans Reaction in IPL Ticket Rate: ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22 ರಂದು ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈನಲ್ಲಿ ಸೆಣಸಲಿದೆ. ಭಾರತೀಯ ಕ್ರಿಕೆಟ್ ಸೂಪರ್ ಸ್ಟಾರ್’ಗಳಾದ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮತ್ತೆ ಕಣಕ್ಕಿಳಿಯಲಿದ್ದು, ತಮ್ಮ ನೆಚ್ಚಿನ ಆಟಗಾರರ ಆಟ ಕಣ್ತುಂಬಿಕೊಳ್ಳಲು ಕಾತುರರಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: Shreyas Iyer: ತನಗಿಂತ 8 ವರ್ಷ ಹಿರಿಯ ನಟಿ ಜೊತೆ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಡೇಟಿಂಗ್! ಯಾರು ಗೊತ್ತಾ ಆ ಚೆಲುವೆ?
ಅಂದಹಾಗೆ ಮಾರ್ಚ್ 22ರಿಂದ ಏಪ್ರಿಲ್ 7ರ ವರೆಗಿನ ವೇಳಾಪಟ್ಟಿ ಈಗಾಗಲೇ ಪ್ರಕಟಗೊಂಡಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎರಡನೇ ವೇಳಾಪಟ್ಟಿ ಬಿಡುಗಡೆಯಾಗಬೇಕಿದೆ. ಇನ್ನು ಮೊದಲ ವೇಳಾಪಟ್ಟಿ ಅನುಸಾರ ನೋಡುವುದಾದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ಮೂರು ಪಂದ್ಯಗಳನ್ನಾಡಲಿದೆ.
ಮಾರ್ಚ್ 25ರಂದು ಪಂಜಾಬ್ ವಿರುದ್ಧ, ಮಾರ್ಚ್ 29 ರಂದು ಕೋಲ್ಕತಾ ವಿರುದ್ಧ, ಏಪ್ರಿಲ್ 2ರಂದು ಲಖನೌ ವಿರುದ್ಧ ಪಂದ್ಯವನ್ನಾಡಲಿದೆ. ಈ ಪಂದ್ಯಗಳ ಕನಿಷ್ಠ ಟಿಕೆಟ್ ಬೆಲೆ ರೂ. 2,300 ಹಾಗೂ ಗರಿಷ್ಠ ಮೌಲ್ಯ ರೂ. 42,350 ವರೆಗೂ ಇದೆ ಎಂದು ಹೇಳಲಾಗುತ್ತಿದೆ. ಈ ಟಿಕೆಟ್’ಗಳನ್ನು ಆರ್ ಸಿ ಬಿ ವೆಬ್‌ಸೈಟ್’ನಲ್ಲಿ ಮಾರಾಟಕ್ಕೆ ಇಡಲಾಗಿದೆ.
ಸದ್ಯ ಟಿಕೆಟ್ ದರ ಕಂಡ ಅಭಿಮಾನಿಗಳು, ಮನೆಯಲ್ಲೇ ಖರ್ಚಿಲ್ಲದೆ ಟಿವಿಯಲ್ಲಿ ಐಪಿಎಲ್ ನೋಡುತ್ತೇವೆ. ಬದಲಾಗಿ ಇಷ್ಟೆಲ್ಲಾ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಹೋದರ ಯಾರು? ಏನ್ಮಾಡ್ತಾರೆ ಎಲ್ಲಿರ್ತಾರೆ ಗೊತ್ತೇ!
ಅಂದಹಾಗೆ ಕಳೆದ ವರ್ಷವೂ ಆರ್ ಸಿ ಬಿ ಪಂದ್ಯಗಳ ಟಿಕೆಟ್ ಬೆಲೆ ಗಗನಮುಖಿಯಾಗಿತ್ತು. ಈ ಬೆಳವಣಿಗೆ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಆದರೆ ಈ ಬಾರಿಯೂ ಟಿಕೆಟ್ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಇನ್ನೊಂದೆಡೆ ಕಳೆದ ವರ್ಷ ಬಾಕ್ಸ್ ಆಫೀಸ್’ನಲ್ಲಿ ಟಿಕೆಟ್ ಬೆಲೆ 1200 ರೂ. ಇತ್ತು. ಆದರೆ ಈ ಬಾರಿ ಆ ಪ್ರಕ್ರಿಯೆ ಮೂಲಕ ಟಿಕೆಟ್ ಮಾರಾಟ ಮಾಡುತ್ತಾರೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.