IPL 2024 Eight Big Players Injury Ruled Out: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 17 ನೇ ಆವೃತ್ತಿಯು ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಕೆಲ ತಂಡಗಳಿಗೆ ಶಾಕಿಂಗ್ ನ್ಯೂಸ್ ಕೇಳಿಬಂದಿದೆ. ಮುಂಬರುವ ಐಪಿಎಲ್‌ನಿಂದ ಬಲಿಷ್ಠ 8 ಆಟಗಾರರು ಹೊರಗುಳಿದಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕೊಪ್ಪಳ, ಗಂಗಾವತಿ, ಕಲಬುರಗಿ, ಬೀದರ್ ಮಾರ್ಗಕ್ಕೆ ನೂತನ ಸಾರಿಗೆ ಆರಂಭ
ಇದಲ್ಲದೇ ಮೂವರು ಹೊಸ ಆಟಗಾರರು ಕೂಡ ಬದಲಿಯಾಗಿ ಐಪಿಎಲ್ 17ಕ್ಕೆ ಪ್ರವೇಶಿಸಿದ್ದಾರೆ. ಇದರೊಂದಿಗೆ ಆರು ತಂಡಗಳು ಗಾಯದ ಕಾರಣದಿಂದಾಗಿ ಆಟಗಾರರನ್ನು ಮಿಸ್ ಮಾಡಿಕೊಂಡು ತೊಂದರೆಯಲ್ಲಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೆಕೆಆರ್ ಹೆಸರುಗಳು ಸೇರಿವೆ.
ಹಲವು ಆಟಗಾರರ ಫಿಟ್ನೆಸ್ ಕೂಡ ಇದೀಗ ಚರ್ಚೆಗೆ ಗ್ರಾಸವಾಗಿದೆ. ಅವರ ಕಂಬ್ಯಾಕ್ ಬಗ್ಗೆಯೂ ಸಸ್ಪೆನ್ಸ್ ಇದೆ. ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ದೊಡ್ಡ ಹೆಸರುಗಳೂ ಈ ಪಟ್ಟಿಯಲ್ಲಿರುವುದು ಗೊಂದಲಕ್ಕೆ ಕಾರಣವಾಗಿದೆ.
ಯಾವ 8 ಆಟಗಾರರು ಔಟ್?
ಗಾಯದಿಂದಾಗಿ ಐಪಿಎಲ್ 2024 ರಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ಅವರೇ ಈ ಪಟ್ಟಿಯಲ್ಲಿರುವ ಪ್ರಬಲ ಹೆಸರು. ಇವರಲ್ಲದೆ, ಶೆಫರ್ಡ್ ಶೀಲ್ಡ್’ನಿಂದಾಗಿ ಮೊದಲ ಕೆಲವು ಪಂದ್ಯಗಳಿಂದ ಹೊರಗುಳಿಯಲಿರುವ ಮ್ಯಾಥ್ಯೂ ವೇಡ್, ಗುಜರಾತ್ ಟೈಟಾನ್ಸ್’ಗೆ ಹೊಡೆತ ನೀಡಿದ್ದಾರೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಕೂಡ ಟೂರ್ನಿಯಿಂದ ಹೊರಗುಳಿದಿದ್ದಾರೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ CSK ಆರಂಭಿಕ ಆಟಗಾರ ಡೆವೊನ್ ಕಾನ್ವೇ ಸಂಪೂರ್ಣ ಮುಂಬರುವ ಋತುವಿನಿಂದ ಹೊರಗುಳಿದಿದ್ದಾರೆ.
ಫಿಟ್ ಆಗಿದ್ದರೂ ವಿನಾಕಾರಣ ತಮ್ಮ ಹೆಸರನ್ನು ಹಿಂಪಡೆದಿರುವ ಇಂಗ್ಲೆಂಡ್’ನ ನಾಲ್ವರು ಆಟಗಾರರಿದ್ದಾರೆ. ಆ ನಾಲ್ವರು ಆಟಗಾರರು ಬೇರಾರು ಅಲ್ಲ, ಕೆಕೆಆರ್ ಭಾಗವಾಗಿದ್ದ ಜೇಸನ್ ರಾಯ್ ಮತ್ತು ಗಸ್ ಅಟ್ಕಿನ್ಸನ್. ಲಕ್ನೋ ಸೂಪರ್ ಜೈಂಟ್ಸ್‌ನ ವೇಗಿ ಮಾರ್ಕ್ ವುಡ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್’ನ ಹ್ಯಾರಿ ಬ್ರೂಕ್.
ಇದನ್ನೂ ಓದಿ: Lokasabha Election 2024: ಕರಾವಳಿಯಲ್ಲಿ ಬಿಜೆಪಿಯ ಭದ್ರಕೋಟೆ ಭೇದಿಸುತ್ತಾ ಕೈ ಪಡೆ?
ಇದಲ್ಲದೆ, ಕೆಲವು ಆಟಗಾರರು ಔಟಾಗಿರುವ ಆಟಗಾರರಿಗೆ ಬದಲಿಯಾಗಿ IPL 2024 ಅನ್ನು ಪ್ರವೇಶಿಸುತ್ತಿದ್ದಾರೆ. ಲಕ್ನೋ ತಂಡ ಮಾರ್ಕ್ ವುಡ್ ಬದಲಿಗೆ ಶಮರ್ ಜೋಸೆಫ್ ಅವರನ್ನು ಸಹಿ ಮಾಡಿತ್ತು. ಇದಲ್ಲದೆ, ಕೆಕೆಆರ್ ಜೇಸನ್ ರಾಯ್ ಬದಲಿಗೆ ಫಿಲ್ ಸಾಲ್ಟ್ ಮತ್ತು ಅಟ್ಕಿನ್ಸನ್ ಬದಲಿಗೆ ದುಷ್ಮಂತ ಚಮೀರಾ ಅವರನ್ನು ಸೇರಿಸಿತ್ತು. ಇದೀಗ ಫ್ರಾಂಚೈಸಿಗಳು ಕೆಲವು ಆಟಗಾರರ ಬದಲಿಯನ್ನು ಹುಡುಕುತ್ತಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.