Virat Kohli: ಟಿ20ಯಲ್ಲಿ 4 ಸಾವಿರ ರನ್ ಗಳ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ಕಿಂಗ್ ಕೊಹ್ಲಿ

Virat Kohli New Record: ಈಗಾಗಲೇ ಮೂರು ವಿಕೆಟ್ ನಷ್ಟಕ್ಕೆ 118 ರನ್ ಕಲೆ ಹಾಕಿರುವ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಆಧಾರದಲ್ಲಿ ಆಟವಾಡುತ್ತಿದೆ. ಈ ಮಧ್ಯೆ ವಿರಾಟ್ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಮತ್ತೆ ಕಿಂಗ್ ಕೊಹ್ಲಿ ಎಂಬುದನ್ನು ನಿರೂಪಿಸಿದ್ದಾರೆ.

Written by - Bhavishya Shetty | Last Updated : Nov 10, 2022, 03:01 PM IST
    • 4000 T20 ರನ್‌ಗಳ ಮೈಲಿಗಲ್ಲನ್ನು ತಲುಪಿದ ಮೊದಲ ಬ್ಯಾಟರ್ ವಿರಾಟ್
    • ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ್ದಾರೆ
    • ಈಗಾಗಲೇ ಸೆಮಿ ಫೈನಲ್ ನಲ್ಲಿ ಅರ್ಧ ಶತಕ ಸಿಡಿಸಿರುವ ಕೊಹ್ಲಿ
Virat Kohli: ಟಿ20ಯಲ್ಲಿ 4 ಸಾವಿರ ರನ್ ಗಳ ಮೈಲಿಗಲ್ಲು ತಲುಪಿದ ಮೊದಲ ಆಟಗಾರ ಕಿಂಗ್ ಕೊಹ್ಲಿ title=
virat kohli

Virat Kohli Record: ಟೀಂ ಇಂಡಿಯಾ ಅಡಿಲೇಡ್ ನಲ್ಲಿ ಇಂಗ್ಲೆಂಡ್ ವಿರುದ್ಧ ಹೋರಾಡುತ್ತಿದೆ. ಟಿ20 ವಿಶ್ವಕಪ್ ನ ಎರಡನೇ ಸೆಮಿಫೈನಲ್ ನಲ್ಲಿ ಕಾದಾಟ ನಡೆಸುತ್ತಿರುಬ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ಫೈನಲ್ ಗೆ ಕಾಲಿಡಲು ಉತ್ಸುಕವಾಗಿದೆ. ಇನ್ನು ಮೊದಲ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿದೆ. ಟೀಂ ಇಂಡಿಯಾ ಬ್ಯಾಟಿಂಗ್ ಮಾಡಿತ್ತಿದೆ.

ಇದನ್ನೂ ಓದಿ: IND vs ENG: ಇಂಡೋ-ಆಂಗ್ಲರ ಸೆಮಿ ಫೈನಲ್ ಹಣಾಹಣಿ: ಟೀಂ ಇಂಡಿಯಾದಲ್ಲಿ ಆಯ್ತು ಈ ಪ್ರಮುಖ ಬದಲಾವಣೆ!

ಈಗಾಗಲೇ 4 ವಿಕೆಟ್ ನಷ್ಟಕ್ಕೆ  156 ರನ್ ಕಲೆ ಹಾಕಿರುವ ಟೀಂ ಇಂಡಿಯಾ ಹಾರ್ದಿಕ್ ಪಾಂಡ್ಯ ಮತ್ತು ರಿಷಬ್ ಪಂತ್ ಅವರ ಆಧಾರದಲ್ಲಿ ಆಟವಾಡುತ್ತಿದೆ. ಈ ಮಧ್ಯೆ ವಿರಾಟ್ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಮತ್ತೆ ಕಿಂಗ್ ಕೊಹ್ಲಿ ಎಂಬುದನ್ನು ನಿರೂಪಿಸಿದ್ದಾರೆ.

 

 

ಕೊಹ್ಲಿ 4000 T20 ರನ್‌ಗಳ ಮೈಲಿಗಲ್ಲನ್ನು ತಲುಪಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ್ದಾರೆ. ಅಷ್ಟೇ ಅಲ್ಲದೆ, ಈಗಾಗಲೇ ಅರ್ಧ ಶತಕ ಸಿಡಿಸಿರುವ ಕೊಹ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ಭಾರತದ ಗೆಲುವಿಗಾಗಿ ಪಾಕಿಸ್ತಾನ ಬ್ಯೂಟಿಯ ಪ್ರಾರ್ಥನೆ: ವೈರಲ್ ಆಯ್ತು ವಿಡಿಯೋ

ಇಂದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆದ್ದರೆ ಫೈನಲ್ ಪ್ರವೇಶ ಮಾಡಲಿದೆ. ಈಗಾಗಲೇ ಮೊದಲ ಸೆಮಿ ಫೈನಲ್ ನಲ್ಲಿ ಪಾಕಿಸ್ತಾನ ಗೆದ್ದು ಫೈನಲ್ ಗೆ ಎಂಟ್ರಿ ಕೊಟ್ಟಿದ್ದು, ಅವರ ಎದುರಾಳಿ ಯಾರೆಂಬುದು ತಿಳಿಯಬೇಕಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News