Virat Kohli Dance to Lungi Dance in IND vs AUS 3rd ODI: ಮೈದಾನದಲ್ಲಾಗಲಿ, ಹೊರಗಾಗಲಿ. ವಿರಾಟ್ ಕೊಹ್ಲಿ ಎಷ್ಟು ಮಜವಾಗಿರುತ್ತಾರೆ ಎಂದು ನಿಮಗೇ ಗೊತ್ತಿದೆ. ರನ್ ಮಾಡುವುದಷ್ಟೇ ಅಲ್ಲ, ಎದುರಾಳಿ ಆಟಗಾರರು ಸೇರಿದಂತೆ ಸಹ ಆಟಗಾರರೊಂದಿಗೆ ಮೋಜಿನ ಆಟವಾಡುವುದೂ ಅವರಿಗೆ ಗೊತ್ತಿದೆ. ಕೊಹ್ಲಿ ತಮ್ಮ ಹಾವಭಾವ, ಆಂಗಿಕ ಭಾಷೆ ಮತ್ತು ನೃತ್ಯದಿಂದ ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ. ಇದೀಗ ಚೆಪಾಕ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿಯೂ ಸಹ ವಿರಾಟ್ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: Rohit Sharma-Virat Kohli: ಬೇಕಾಗಿರೋದು ಜಸ್ಟ್ 2 ರನ್… ರೋಹಿತ್-ಕೊಹ್ಲಿ ಜೋಡಿ ನಿರ್ಮಿಸಲಿದೆ ಆ ವಿಶ್ವದಾಖಲೆ!
ಮೂರು ಏಕದಿನ ಸರಣಿಯ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಪಂದ್ಯ ಇಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆಸೀಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತದ ಆಟಗಾರರು ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಆಗಮಿಸಲು ಸಿದ್ಧರಾಗುತ್ತಿದ್ದರು. ತಮ್ಮ ಸಹ ಆಟಗಾರರೊಂದಿಗೆ ಬೌಂಡರಿ ಲೈನ್‌ನಲ್ಲಿದ್ದ ವಿರಾಟ್ ಕೊಹ್ಲಿ ‘ಚೆನ್ನೈ ಎಕ್ಸ್‌ಪ್ರೆಸ್’ ಚಿತ್ರದ ಪ್ರಸಿದ್ಧ ಲುಂಗಿ ಡ್ಯಾನ್ಸ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಒಮ್ಮೆ ಸ್ಪಿನ್ನರ್ ರವೀಂದ್ರ ಜಡೇಜಾ ಬಳಿ ಬಂದು ಡ್ಯಾನ್ಸ್ ಮಾಡಿದರು. ಮತ್ತೆ ಎಲ್ಲರ ಮಧ್ಯದಲ್ಲಿ ನಿಂತು ನೃತ್ಯ ಮಾಡಿದರು.
ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡಿದರೆ ಉಳಿದ ಭಾರತೀಯ ಆಟಗಾರರು ನಕ್ಕರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಟ್ವಿಟರ್ ಬಳಕೆದಾರ 'ಜಾವೇದ್ ಅನ್ಸಾರಿ' ಎಂಬವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ನಗುತ್ತಿದ್ದಾರೆ.
— javed ansari (@javedan00643948) March 22, 2023
ಈ ವಿಡಿಯೋಗೆ ಲೈಕ್’ಗಳು ಮತ್ತು ಕಾಮೆಂಟ್’ಗಳ ಮಹಾಪೂರವೇ ಹರಿದು ಬರುತ್ತಿದೆ. ವಿರಾಟ್ ಕೊಹ್ಲಿಗೆ ಏನಾಯಿತು’ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ‘ವಿರಾಟ್ ಕೊಹ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಆರ್‌ಸಿಬಿ ನಾಯಕ
ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ 37.3 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿದೆ. ಭಾರತದ ಬೌಲರ್’ಗಳು ಕಟ್ಟುನಿಟ್ಟಾಗಿ ಬೌಲಿಂಗ್ ಮಾಡುತ್ತಿದ್ದು, ಆಸೀಸ್ ಬ್ಯಾಟ್ಸ್‌ಮನ್’ಗಳು ಬಿಗಿಯಾಗಿ ಆಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಸತತ ವಿಕೆಟ್ ಉರುಳಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.