WPL 2023: ಮುಂಬೈ ವಿರುದ್ಧ ಗೆದ್ದು ಬೀಗಿದ ದೆಹಲಿ ಕ್ಯಾಪಿಟಲ್ಸ್: ಪಾಯಿಂಟ್ ಲಿಸ್ಟ್’ನಲ್ಲಿ ಹೈ ಜಂಪ್

Women's Premier League 2023: ಇಂದು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್’ನಲ್ಲಿ ಮುಂಬೈ ವಿರುದ್ಧ ದೆಹಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದೆ. ಈ ಮೂಲಕ ಪಾಯಿಂಟ್ ಟೇಬಲ್’ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

Written by - Bhavishya Shetty | Last Updated : Mar 20, 2023, 10:22 PM IST
    • ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
    • ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 109 ರನ್ ಗಳಿಸಲಷ್ಟೇ ಶಕ್ತವಾಯಿತು.
    • ಡೆಲ್ಲಿ ಒಂಬತ್ತು ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 110 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು

Trending Photos

WPL 2023: ಮುಂಬೈ ವಿರುದ್ಧ ಗೆದ್ದು ಬೀಗಿದ ದೆಹಲಿ ಕ್ಯಾಪಿಟಲ್ಸ್: ಪಾಯಿಂಟ್ ಲಿಸ್ಟ್’ನಲ್ಲಿ ಹೈ ಜಂಪ್ title=

Women's Premier League 2023: ಮಹಿಳಾ ಪ್ರೀಮಿಯರ್ ಲೀಗ್‌ 18 ನೇ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ಅನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಒಂಬತ್ತು ಓವರ್‌ಗಳಲ್ಲಿ 110 ರನ್‌ಗಳ ಗುರಿಯನ್ನು ತಲುಪುವ ಮೂಲಕ ಗೆಲುವು ಸಾಧಿಸಿದೆ.

ಇದನ್ನೂ ಓದಿ: MS Dhoni : ಕ್ಯಾಪ್ಟನ್ ಕೂಲ್ ಧೋನಿಗೆ ಈ ಪಾನಕ ಅಂದ್ರೆ ತುಂಬಾ ಇಷ್ಟ: ಪ್ರ್ಯಾಕ್ಟೀಸ್ ಟೈಂನಲ್ಲೂ ಹೇಗೆ ಕುಡಿಯುತ್ತಿದ್ದಾರೆ ನೋಡಿ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 109 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಒಂಬತ್ತು ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 110 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.

ಮುಂಬೈ ಇಂಡಿಯನ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಒಂಬತ್ತು ವಿಕೆಟ್‌ಗಳಿಂದ ಸೋಲಿಸಿದೆ. 110 ರನ್‌ಗಳ ಗುರಿಯನ್ನು ಕೇವಲ ಒಂಬತ್ತು ಓವರ್‌ಗಳಲ್ಲಿ ಸಾಧಿಸಿದೆ. ಡೆಲ್ಲಿ ಪರ ನಾಯಕಿ ಮೆಗ್ ಲ್ಯಾನಿಂಗ್, ಆಲಿಸ್ ಕ್ಯಾಪ್ಸೆ ಮತ್ತು ಶೆಫಾಲಿ ವರ್ಮಾ ಬಿರುಸಿನ ಇನ್ನಿಂಗ್ಸ್ ಆಡಿದ್ದಾರೆ.

ಇದನ್ನೂ ಓದಿ: ತಿಗಳ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆ; ಸಿಎಂ ಬೊಮ್ಮಾಯಿಯವರಿಗೆ ಸನ್ಮಾನ

ಎಲ್ಲಿಸ್ ಕ್ಯಾಪ್ಸಿ ಅಜೇಯ 38 ರನ್ ಗಳಿಸಿದರೆ, 17 ಎಸೆತಗಳ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಬೌಂಡರಿ ಹೊಡೆದರು. ಕ್ಯಾಪ್ಸಿ ಅವರ ಬ್ಯಾಟ್‌ನಿಂದ ಐದು ದೀರ್ಘ ಸಿಕ್ಸರ್‌ಗಳು ಹೊರಬಂದವು. ನಾಯಕಿ ಮೆಗ್ ಲ್ಯಾನಿಂಗ್ 22 ಎಸೆತಗಳಲ್ಲಿ 32 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರು ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಶೆಫಾಲಿ ವರ್ಮಾ 15 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 33 ರನ್ ಗಳಿಸಿದರು. ಲ್ಯಾನಿಂಗ್ ಮತ್ತು ಶೆಫಾಲಿ ಕೂಡ ತಲಾ ಒಂದು ಸಿಕ್ಸರ್ ಬಾರಿಸಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News