Virat Kohli: ಮೈದಾನದಲ್ಲೇ 'ನಾಟು ನಾಟು' ಹುಕ್ ಸ್ಟೆಪ್ ಹಾಕಿದ ವಿರಾಟ್ ಕೊಹ್ಲಿ, ವಿಡಿಯೋ ನೋಡಿ

Virat Kohli Naatu Naatu Dance: ಮುಂಬೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಆಸ್ಕರ್ ಪ್ರಶಸ್ತಿ ವಿಜೇತ 'ನಾಟು ನಾಟು' ಹುಕ್‌ ಸ್ಟೆಪ್‌ ಹಾಕಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್‌ ವೈರಲ್ ಆಗಿದೆ.   

Written by - Chetana Devarmani | Last Updated : Mar 18, 2023, 07:45 AM IST
  • ಪ್ರಸಿದ್ಧ 'ನಾಟು ನಾಟು' ಹುಕ್ ಸ್ಟೆಪ್ ಹಾಕಿದ ವಿರಾಟ್ ಕೊಹ್ಲಿ
  • ಕೊಹ್ಲಿ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್
  • RRR ನ ಈ ಹಾಡು ಇತ್ತೀಚೆಗ ಆಸ್ಕರ್‌ ಅವಾರ್ಡ್‌ ಗೆದ್ದಿತು
Virat Kohli: ಮೈದಾನದಲ್ಲೇ 'ನಾಟು ನಾಟು' ಹುಕ್ ಸ್ಟೆಪ್ ಹಾಕಿದ ವಿರಾಟ್ ಕೊಹ್ಲಿ, ವಿಡಿಯೋ ನೋಡಿ  title=
Virat Kohli Naatu Naatu Dance

Virat Kohli Naatu Naatu Dance: ನಾಟು ನಾಟು ಹಾಡಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಡು ಬಿಡುಗಡೆಯಾದಾಗಿನಿಂದ ನಾಟು ನಾಟು ಹಾಡಿನ ಜನಪ್ರಿಯತೆ ಯಾವ ಹಂತದಲ್ಲೂ ಕಡಿಮೆಯಾಗಿಲ್ಲ. ಆದರೆ, ಯಾವಾಗ ವಿದೇಶಿ ಚಿತ್ರರಂಗದ ಸೆಲೆಬ್ರಿಟಿಗಳು, ಹಾಲಿವುಡ್ ತಾರೆಯರು ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲು ಆರಂಭಿಸಿದರೋ ಅಂದಿನಿಂದ ನಾಟು ನಾಟು ಹಾಡು ಸದಾ ಟ್ರೆಂಡಿಂಗ್ ಆಗಿದೆ. ಇದು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಗೆದ್ದಾಗಿನಿಂದ, ಈ ಹಾಡಿನ ಕ್ರೇಜ್ ಉತ್ತುಂಗಕ್ಕೇರಿದೆ. ಇತ್ತೀಚೆಗಷ್ಟೇ ಬಂದಿರುವ ಆಸ್ಕರ್ ಪ್ರಶಸ್ತಿ ಈ ಕ್ರೇಜ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ.  

 

 

ಇತ್ತೀಚೆಗಷ್ಟೇ ಮೈದಾನದಲ್ಲಿ ನಾಟು ನಾಟು ಹಾಡಿಗೆ ವಿರಾಟ್ ಕೊಹ್ಲಿ ಡ್ಯಾನ್ಸ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ. ಶುಕ್ರವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಯಿತು. ಇತ್ತೀಚಿಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಇಬ್ಬರೂ ಪಠಾಣ್ ಸಿನಿಮಾದ ಟೈಟಲ್ ಟ್ರ್ಯಾಕ್‌ಗೆ ಹೆಜ್ಜೆ ಹಾಕಿದ್ದು ಗೊತ್ತೇ ಇದೆ. ಆ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿತ್ತು.ಇದೀಗ ನಾಟು ನಾಟು ಹಾಡಿಗೆ ಕೊಹ್ಲಿ ಡ್ಯಾನ್ಸ್ ಮಾಡಿದ್ದು, ವೈರಲ್ ಆಗುತ್ತಿದೆ. 

 

 

ಇದನ್ನೂ ಓದಿ:  Team India : ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನು ನಡುಗಿಸಿದ ಭಾರತ ಈ ಬೌಲರ್..!

ವಿರಾಟ್ ಕೊಹ್ಲಿ ಅವರ ನಾಟು ನಾಟು ಡ್ಯಾನ್ಸ್ ಅನ್ನು ಆರ್‌ಆರ್‌ಆರ್ ಮೂವೀ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿದೆ. ಆದರೆ, ಹಕ್ಕುಸ್ವಾಮ್ಯ ಸಮಸ್ಯೆಯಿಂದಾಗಿ ವಿಡಿಯೋದ ಮೂಲ ಮಾಲೀಕರ ಕೋರಿಕೆಯಂತೆ ಟ್ವಿಟರ್ ವಿಡಿಯೋವನ್ನು ತೆಗೆದುಹಾಕಿದೆ ಎಂದು ತೋರುತ್ತದೆ. ಅದೇನೇ ಇದ್ದರೂ, ಅದೇ ವಿಡಿಯೋವನ್ನು RRR ತಯಾರಕರು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈಗ ಆ ವಿಡಿಯೋ ಸಾಕಷ್ಟು ಕೂಡ ವೈರಲ್ ಆಗುತ್ತಿದೆ.

 

 
 
 
 

 
 
 
 
 
 
 
 
 
 
 

A post shared by RRR Movie (@rrrmovie)

 

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 189 ರನ್ ಗಳ ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿದ ಭಾರತದ ಪರ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಮೋಡಿ ಮಾಡಲಿಲ್ಲ. 9 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು. ಇದೀಗ ಇದೇ ಪಂದ್ಯದಲ್ಲಿ ವಿರಾಟ್ ಕೊಹ್ಲಿಯವರ ಈ ನಾಟು ನಾಟು ವಿಡಿಯೋ ಎಲ್ಲಾ ಅಭಿಮಾನಿಗಳ ಮನಗೆಲ್ಲುತ್ತಿದೆ. 

ಇದನ್ನೂ ಓದಿ:  ಕೊಹ್ಲಿ ಫಾರ್ಮ್‌ಗೆ ಮರಳಿರುವುದು ಎದುರಾಳಿಗಳಿಗೆ ನಡುಕ ತಂದಿದೆ: ಕಾಲಿಂಗ್‌ವುಡ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News