IND vs AUS: ಶತಕ ಬಾರಿಸುತ್ತಿದ್ದಂತೆ ಮೈದಾನದಲ್ಲಿಯೇ ಭಾವುಕರಾದ ವಿರಾಟ್ ಕೊಹ್ಲಿ: ವಿಡಿಯೋ ನೋಡಿ

Virat Kohli gets emotional Video: 'ಚೇಸ್-ಮಾಸ್ಟರ್' ಎಂದು ಕರೆಯಲ್ಪಡುವ ವಿರಾಟ್ ಕೊಹ್ಲಿ 241 ಎಸೆತಗಳನ್ನು ಎದುರಿಸುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ 28 ನೇ ಶತಕವನ್ನು ಬಾರಿಸಿದ್ದಾರೆ. ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮಾತ್ರ ಈಗ ಶತಕಗಳ ವಿಷಯದಲ್ಲಿ ವಿರಾಟ್ ಕೊಹ್ಲಿಗಿಂತ ಮುಂದಿದ್ದಾರೆ.

Written by - Bhavishya Shetty | Last Updated : Mar 12, 2023, 06:16 PM IST
    • 3 ವರ್ಷಗಳ ನಂತರ ಟೆಸ್ಟ್ ಮಾದರಿಯಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿ
    • ಶತಕ ಬಾರಿಸುತ್ತಿದ್ದಂತೆ ಮೈದಾನದಲ್ಲಿಯೇ ಭಾವುಕರಾದ ವಿರಾಟ್ ಕೊಹ್ಲಿ
    • ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ವಿರಾಟ್ ಅಬ್ಬರಿಸಿದ್ದಾರೆ
IND vs AUS: ಶತಕ ಬಾರಿಸುತ್ತಿದ್ದಂತೆ ಮೈದಾನದಲ್ಲಿಯೇ ಭಾವುಕರಾದ ವಿರಾಟ್ ಕೊಹ್ಲಿ: ವಿಡಿಯೋ ನೋಡಿ title=
Virat Kohli

Virat Kohli gets emotional Video: ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು. ಸುಮಾರು 3 ವರ್ಷಗಳ ನಂತರ ಟೆಸ್ಟ್ ಮಾದರಿಯಲ್ಲಿ ಶತಕ ಬಾರಿಸಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ವಿರಾಟ್ ಅಬ್ಬರಿಸಿದ್ದಾರೆ. ಇದು ಅವರ ವೃತ್ತಿ ಜೀವನದ 75ನೇ ಅಂತಾರಾಷ್ಟ್ರೀಯ ಶತಕವಾಗಿದೆ.

ಇದನ್ನೂ ಓದಿ: ಅಹಮದಾಬಾದ್ ಟೆಸ್ಟ್ ಗೆಲ್ಲೋದಕ್ಕೆ ಸ್ವತಃ ಟೀಂ ಇಂಡಿಯಾಗೆ ಮನಸಿಲ್ಲವಂತೆ!

'ಚೇಸ್-ಮಾಸ್ಟರ್' ಎಂದು ಕರೆಯಲ್ಪಡುವ ವಿರಾಟ್ ಕೊಹ್ಲಿ 241 ಎಸೆತಗಳನ್ನು ಎದುರಿಸುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನದ 28 ನೇ ಶತಕವನ್ನು ಬಾರಿಸಿದ್ದಾರೆ. ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮಾತ್ರ ಈಗ ಶತಕಗಳ ವಿಷಯದಲ್ಲಿ ವಿರಾಟ್ ಕೊಹ್ಲಿಗಿಂತ ಮುಂದಿದ್ದಾರೆ. ಸಚಿನ್ ಅವರ ಶ್ರೇಷ್ಠ ದಾಖಲೆಯನ್ನು ವಿರಾಟ್ ಮಾತ್ರ ಮುರಿಯಲು ಸಾಧ್ಯ ಎಂದು ಈಗ ಮತ್ತೊಮ್ಮೆ ಹೇಳಲಾಗುತ್ತಿದೆ. ಸಚಿನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಬಾರಿಸಿದ್ದು ವಿಶ್ವದಾಖಲೆಯಾಗಿದೆ.

 

ಅಹಮದಾಬಾದ್’ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶತಕ ಬಾರಿಸಿದ ಬಳಿಕ ವಿರಾಟ್ ಕೊಹ್ಲಿ ಭಾವುಕರಾದರು. ಅವರು ಯಾವುದೇ ಆಕ್ರಮಣಕಾರಿ ಮನೋಭಾವವನ್ನು ತೋರಿಸಲಿಲ್ಲ. ವಿರಾಟ್ ಬ್ಯಾಟ್ ಎತ್ತಿಹಿಡಿದು ತಲೆ ಬಾಗಿದರು. ಭಾವೋದ್ವೇಗದಿಂದ ಈ ರೀತಿ ಮಾಡುತ್ತಿದ್ದಾರೆ ಎಂನಿಸಿತು. ಅವರ ಮುಖಭಾವವೂ ಹಾಗೆಯೇ ಇತ್ತು. ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಸಹ ಆಟಗಾರರು ಚಪ್ಪಾಳೆ ತಟ್ಟುತ್ತಿರುವುದು ಕಂಡು ಬಂತು. ಅಷ್ಟೇ ಅಲ್ಲ ಕ್ರೀಡಾಂಗಣದಲ್ಲಿ ಚಪ್ಪಾಳೆಯ ಸದ್ದು ಕೂಡ ಕೇಳಿ ಬಂದಿತ್ತು. ಇದರ ವಿಡಿಯೋವನ್ನು ಬಿಸಿಸಿಐ ಶೇರ್ ಮಾಡಿದೆ.

ಇದನ್ನೂ ಓದಿ: IND vs AUS: 30 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಇತಿಹಾಸ ಬರೆದ ಟೀಂ ಇಂಡಿಯಾ: ಏನಪ್ಪಾ ಆ ದಾಖಲೆ?

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 480 ರನ್ ಗಳಿಸಿತ್ತು. ಉಸ್ಮಾನ್ ಖವಾಜಾ ತಂಡಕ್ಕೆ ಗರಿಷ್ಠ 180 ರನ್‌ಗಳ ಕೊಡುಗೆ ನೀಡಿದರು. ಇವರಲ್ಲದೆ ಕ್ಯಾಮರೂನ್ ಗ್ರೀನ್ 170 ಎಸೆತಗಳಲ್ಲಿ 114 ರನ್ ಗಳಿಸಿದರು. ಟಾಡ್ ಮರ್ಫಿ 61 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 41 ರನ್ ಗಳಿಸಿದರು. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಹೆಸರಿನಲ್ಲಿ 6 ವಿಕೆಟ್ ಪಡೆದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News