ನವದೆಹಲಿ: ವಿರಾಟ್ ಕೊಹ್ಲಿ ಕ್ರೀಡಾ ವಿಭಾಗದ ಇನ್ಸ್ಟಾಗ್ರಾಂ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖ ಭಾರತೀಯರಾಗಿದ್ದಾರೆ. 9ನೇ ಸ್ಥಾನವನ್ನು ಪಡೆದಿರುವ ಕೊಹ್ಲಿ ಪ್ರತಿ ಪೋಸ್ಟ್ ಗೆ 120,000 ಡಾಲರಗಳಷ್ಟು ಹಣವನ್ನು ಗಳಿಸುತ್ತಾರೆ ಎಂದು ಹೋಪ್ಪರ್ ಹೆಚ್ ಕ್ಯು ತಿಳಿಸಿದೆ. ಅಮೆರಿಕಾದ ಕಲೀ ಜೆನ್ನರ್ ಅವರು ಪ್ರತಿ ಪೋಸ್ಟ್ ಗೆ ಸುಮಾರು $ 1.1 ದಶಲಕ್ಷ ಹಣವನ್ನು ಸಂಪಾಧಿಸುವ ಮೂಲಕ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಂ ಫೋಟೋ-ಹಂಚಿಕೆ ಅಪ್ಲಿಕೇಶನ್ ಆಗಿದ್ದು ಈ ಪಟ್ಟಿಯನ್ನು ಫಾಲೋವರ್ಸ್ ಗಳ ಸಂಖ್ಯೆ, ಪೋಸ್ಟ್ ಗಳ ಶೇರ್ ಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಕ್ರೀಡಾ ವಿಭಾಗದಲ್ಲಿ ಕ್ರಿಸ್ಟಿಯಾನೊ ರೋನಾಲ್ಡೋ ಅವರು ಪ್ರತಿ ಪೋಸ್ಟ್ ಗೆ $750,000 ಗಳಿಸುತ್ತಿದ್ದಾರೆ, ಬ್ರೆಜಿಲ್ನ ನೇಮ್ಮಾರ್ ಮತ್ತು ಅರ್ಜಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಕ್ರಮವಾಗಿ ಸುಮಾರು $ 600,000 ಮತ್ತು $ 500,000 ಡಾಲರ್ ಹಣವನ್ನು ಗಳಿಸುತ್ತಾರೆ.
ಈ ಪಟ್ಟಿಯಲ್ಲಿ, ಜೆನ್ನರ್ ಮತ್ತು ನಟಿ / ಗಾಯಕ ಸೆಲೆನಾ ಗೊಮೆಜ್ (ಪ್ರತಿ ಪೋಸ್ಟ್ಗೆ $ 800,000) ಅಗ್ರ ಎರಡು ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ನಂತರ ರೊನಾಲ್ಡೊ ಮತ್ತು ಡೇವಿಡ್ ಬೆಕ್ಹ್ಯಾಮ್ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ $ 300,000 ಡಾಲರ್ ಹಣವನ್ನು ಗಳಿಸುತ್ತಾರೆ.
ವೇಲ್ಸ್ ಅಂತರರಾಷ್ಟ್ರೀಯ ಮತ್ತು ರಿಯಲ್ ಮ್ಯಾಡ್ರಿಡ್ನ ಎದುರಾಳಿ ಗರೆಥ್ ಬೇಲ್, ಸ್ವೀಡನ್ನ ಝ್ಲಾಟನ್ ಇಬ್ರಾಹಿಮೊವಿಕ್, ಬಾರ್ಸಿಲೋನಾ ಸ್ಟ್ರೈಕರ್ ಲೂಯಿಸ್ ಸೌರೆಜ್ ಮತ್ತು ಕಾನರ್ ಮೆಕ್ಗ್ರೆಗರ್ ಅವರು ವಿರಾಟ್ ಕೊಹ್ಲಿಗಿಂತ ಮುಂದಿರುವ ವ್ಯಕ್ತಿಗಳಾಗಿದ್ದಾರೆ.
ಕೊಹ್ಲಿ ಕ್ರೀಡಾ ವಿಭಾಗದಲ್ಲಿ ಅಮೆರಿಕದ ವೃತ್ತಿಪರ ಬ್ಯಾಸ್ಕೆಟ್ಬಾಲ್ ಆಟಗಾರ ಸ್ಟೀಫನ್ ಕರಿ ಮತ್ತು ಮಾಜಿ ವೃತ್ತಿಪರ ಬಾಕ್ಸರ್ ಫ್ಲಾಯ್ಡ್ ಮೇವೆದರ್ (ಕ್ರಮವಾಗಿ $ 110,000 ಮತ್ತು $ 107,000) ಅವರನ್ನು ಹಿಂದಿಕ್ಕುವ ಮೂಲಕ 9ನೆ ಸ್ಥಾನವನ್ನು ಅಲಂಕರಿಸಿದ್ದಾರೆ.