Virat Kohli: ವಿರಾಟ್ ಕೊಹ್ಲಿಯನ್ನು ನಿಷೇಧಿಸಿ, ಇಲ್ಲವೇ ಭಾರಿ ದಂಡ ವಿಧಿಸಿ ಎಂದ ಮೈಕಲ್ ವಾನ್!

DRS ವಿಷಯವಾಗಿ ವಿರಾಟ್ ಕೊಹ್ಲಿ ನಡೆದುಕೊಂಡಿರುವ ರೀತಿಗೆ ಮಾಜಿ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದು, ಮುಂದೆ ಈ ರೀತಿಯ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಅಂತಾ ಸಲಹೆ ನೀಡಿದ್ದಾರೆ.

Written by - Puttaraj K Alur | Last Updated : Jan 16, 2022, 11:59 AM IST
  • 3ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತೋರಿದ ವರ್ತನೆಗೆ ಮಾಜಿ ಕ್ರಿಕೆಟಿಗರಿಂದ ಆಕ್ರೋಶ
  • ಡೀನ್ ಎಲ್ಗರ್ DRS ವಿಷಯವಾಗಿ ಕೊಹ್ಲಿ & ಟೀಂ ನಡೆದುಕೊಂಡ ರೀತಿಗೆ ಬೇಸರ
  • ವಿರಾಟ್ ಕೊಹ್ಲಿಗೆ ಭಾರೀ ದಂಡ ವಿಧಿಸಿ ಇಲ್ಲವೇ ಬ್ಯಾನ್ ಎಂದು ಆಗ್ರಹಿಸಿದ ಮೈಕೆಲ್ ವಾನ್
Virat Kohli: ವಿರಾಟ್ ಕೊಹ್ಲಿಯನ್ನು ನಿಷೇಧಿಸಿ, ಇಲ್ಲವೇ ಭಾರಿ ದಂಡ ವಿಧಿಸಿ ಎಂದ ಮೈಕಲ್ ವಾನ್! title=
ವಿರಾಟ್ ವರ್ತನೆಗೆ ಮಾಜಿ ಕ್ರಿಕೆಟಿಗರ ಆಕ್ರೋಶ

ಕೇಪ್‌ಟೌನ್‌: ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ನಲ್ಲಿ ಡೀನ್ ಎಲ್ಗರ್ ನೇತೃತ್ವದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಮತ್ತು ಅಂತಿಮ ಟೆಸ್ಟ್‌(India vs South Africa)ನಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಆಫ್ರಿಕಾ ಗೆಲುವಿಗೆ ಟೀಂ ಇಂಡಿಯಾ 212 ರನ್ ಟಾರ್ಗೆಟ್ ನೀಡಿತ್ತು. 4ನೇ ದಿನದಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಫ್ರಿಕಾ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ 2-1 ಅಂತರದಿಂದ ಸರಣಿ ಗೆದ್ದು Freedom Trophy ಎತ್ತಿಹಿಡಿಯಿತು. ಭಾರತ ಸೋತ ಬಳಿಕ ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ ಹೇಳಿರುವ ವಿರಾಟ್ ಕೊಹ್ಲಿ(Virat Kohli) ವಿರುದ್ದ ಟೀಕಾ ಪರ್ವ ಮುಂದುವರೆದಿದೆ.

3ನೇ ಟೆಸ್ಟ್ ಪಂದ್ಯದಲ್ಲಿ ಏನಾಗಿತ್ತು..?  

ಈ ಟೆಸ್ಟ್ ಪಂದ್ಯದಲ್ಲಿ ಮೈದಾನದಲ್ಲಿ ಹಲವು ಗದ್ದಲಗಳು ಸಂಭವಿಸಿವೆ. ಇದರಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಡಿಆರ್‌ಎಸ್‌(DRS Rant)ನಲ್ಲಿ ಔಟಾಗದೇ ಇರುವುದು ದೊಡ್ಡ ವಿವಾದವಾಗಿತ್ತು. ಈ ನಿರ್ಧಾರದ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಇಡೀ ಭಾರತ ತಂಡವು ಕೋಪಗೊಂಡಿತು ಮತ್ತು ಮೈದಾನದಲ್ಲಿಯೇ ತೀವ್ರ ವಿವಾದವನ್ನು ಸೃಷ್ಟಿಸಿತು.

ಇದನ್ನೂ ಓದಿ: India vs South Africa 2021: ಟ್ರೋಲ್ ಮಾಡಿದ ಮೈಕಲ್ ವಾನ್ ಗೆ ವಾಸೀಂ ಜಾಫರ್ ನೀಡಿದ ತಿರುಗೇಟು ಏನು ಗೊತ್ತಾ?

ವಿವಾದಕ್ಕೆ ಕಾರಣವೇನು..?

3ನೇ ಟೆಸ್ಟ್ ಪಂದ್ಯದ 3ನೇ ದಿನದಾಟ(India Vs South Africa Test)ದಲ್ಲಿ ಕೊಹ್ಲಿ ತೋರಿದ ವರ್ತನೆಗೆ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಫ್ರಿಕಾ ನಾಯಕ ಡೀನ್ ಎಲ್ಗರ್ (Dean Elgar) DRS ವಿಷಯವಾಗಿ ಟೀಂ ಇಂಡಿಯಾ ಆಟಗಾರರು ನಡೆದುಕೊಂಡ ಘಟನೆಗೆ ಹಾಗೂ ಕೊಹ್ಲಿ ಸ್ಟಂಪ್ಸ್ ಮೈಕ್ ಬಳಿ ತರಳಿ ಪ್ರಸಾರಕರನ್ನು ಉದ್ದೇಶಿಸಿ ಮಾತನಾಡಿದ ರೀತಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಈಗಾಗಲೇ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭಿರ್ ಟೀಕಿಸಿದ್ದು, ವಿರಾಟ್ ಕೊಹ್ಲಿ ಅನುಚಿತ ವರ್ತನೆ ತೋರಿದ್ದಾರೆಂದು ಹೇಳಿದ್ದಾರೆ. ಇದೀಗ ‘ರನ್ ಮಷಿನ್’ ವಿರುದ್ಧ ಕಿಡಿಕಾರಿರುವ ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್(Mchael Vaughan), ಕೊಹ್ಲಿಗೆ ಭಾರೀ ದಂಡವನ್ನು ವಿಧಿಸಬೇಕು ಇಲ್ಲವೇ ಅವರನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.  

ಈ ಬಗ್ಗೆ ಮಾತನಾಡಿರುವ ಅವರು, ‘ಆಟದ ವೇಳೆ ಮೈದಾನದಲ್ಲಿ ಪ್ರತಿಯೊಬ್ಬರೂ ಭಾವೋದ್ವೇಗಳಿಗೆ ಒಳಗಾಗುವುದು ಸಹಜ. ಆದರೆ ತಂಡದ ನಾಯಕನೇ ಹೀಗೆ ಮಾಡುವುದು ಸರಿಯಲ್ಲ. ಈ ಬಗ್ಗೆ ಐಸಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು’ ಅಂತಾ ವಾನ್ ಮನವಿ ಮಾಡಿಕೊಂಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ ಮನ್ ಡ್ಯಾರಿಲ್ ಕೂಡ ಕೊಹ್ಲಿ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ‘ಭಾರತೀಯ ನಾಯಕನ ಈ ರೀತಿಯ ನಡವಳಿಕೆ ಸ್ವೀಕಾರಾರ್ಹವಲ್ಲ, ಕೊಹ್ಲಿ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು’ ಆಗ್ರಹಿಸಿದ್ದಾರೆ.   

ಇದನ್ನೂ ಓದಿ: Ind vs SA : ಟೀಂ ಇಂಡಿಯಾಗೆ ಎಂಟ್ರಿ ನೀಡಿದ ಬುಮ್ರಾಗಿಂತ ಸ್ಫೋಟಕ ಬೌಲರ್‌!

ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಆಡಮ್‌ ಗಿಲ್‌ಕ್ರಿಸ್ಟ್(Adam Gilchrist) ಕೂಡ ಟೀಂ ಇಂಡಿಯಾ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಅದನ್ನು ದಾಟಿದರೆ ನಿರ್ಲಕ್ಷಿಸುವ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. ಶೇನ್ ವಾರ್ನ್ ಪ್ರತಿಕ್ರಿಯಿಸಿ, ‘ಅಂತಾರಾಷ್ಟ್ರೀಯ ತಂಡದ ನಾಯಕನಿಂದ ಈ ರೀತಿ ವರ್ತನೆಯನ್ನು ನಾನು ನಿರೀಕ್ಷಿಸರಲಿಲ್ಲ. ಒಮ್ಮೊಮ್ಮೆ ಅಸಹನೆ ಮಿತಿ ಮೀರುತ್ತದೆ. ಪದೇ ಪದೇ ಹೀಗೆ ಮಾಡುವುದು ಸರಿಯಲ್ಲ. ಇದು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು’ ಅಂತಾ ಹೇಳಿದ್ದಾರೆ.

ಒಟ್ಟಿನಲ್ಲಿ DRS ವಿಷಯವಾಗಿ ವಿರಾಟ್ ಕೊಹ್ಲಿ(Virat Kohli) ನಡೆದುಕೊಂಡಿರುವ ರೀತಿಗೆ ಮಾಜಿ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದು, ಮುಂದೆ ಈ ರೀತಿಯ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಅಂತಾ ಸಲಹೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News