Virat Kohli ‌: ʼನಿಮ್ಮ ಅತ್ತಿಗೆ ಜೊತೆ ಬ್ಯುಸಿ ಇದ್ದಿನ್ರೋ... ಪ್ಲೀಸ್ ಡಿಸ್ಟರ್ಬ್‌ ಮಾಡಬೇಡಿʼ

ಮ್ಯಾಚ್‌ ಮುಗಿಸಿಕೊಂಡು ಬಸ್‌ನಲ್ಲಿ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ವಿರಾಟ್‌ ಕೊಹ್ಲಿ ನೋಡಿ ಕೂಗಿದ ಅಭಿಮಾನಿಗಳಿಗೆ ಅನುಷ್ಕಾ ಶರ್ಮಾ ಜೊತೆ ವಿಡಿಯೋ ಕಾಲಿಂಗ್‌ನಲ್ಲಿ ಬ್ಯುಸಿ ಇದ್ದೀನಿ ಎಂದು ಮೊಬೈಲ್‌ ತೋರಿಸಿ ಫ್ಯಾನ್ಸ್‌ಗೆ ನಗುತ್ತಾ ಹೇಳಿದ ಪ್ರಸಂಗ ತಿರುವನಂತಪುರಂನಲ್ಲಿ ನಡೆದಿದ್ದು, ವಿಡಿಯೋ ವೈರಲ್‌ ಆಗಿದೆ.

Written by - Krishna N K | Last Updated : Sep 29, 2022, 07:19 PM IST
  • ಅನುಷ್ಕಾ ಶರ್ಮಾ ಜೊತೆ ವಿರಾಟ್‌ ಕೊಹ್ಲಿ ವಿಡಿಯೋ ಕಾಲಿಂಗ್‌
  • ಬ್ಯುಸಿ ಇದ್ದೀನಿ ಎಂದು ಮೊಬೈಲ್‌ ತೋರಿಸಿ ಫ್ಯಾನ್ಸ್‌ಗೆ ನಗುತ್ತಾ ಹೇಳಿದ ಕಿಂಗ್‌ ಕೊಹ್ಲಿ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
Virat Kohli ‌: ʼನಿಮ್ಮ ಅತ್ತಿಗೆ ಜೊತೆ ಬ್ಯುಸಿ ಇದ್ದಿನ್ರೋ... ಪ್ಲೀಸ್ ಡಿಸ್ಟರ್ಬ್‌ ಮಾಡಬೇಡಿʼ title=

ಕೇರಳ : ಮ್ಯಾಚ್‌ ಮುಗಿಸಿಕೊಂಡು ಬಸ್‌ನಲ್ಲಿ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ವಿರಾಟ್‌ ಕೊಹ್ಲಿ ನೋಡಿ ಕೂಗಿದ ಅಭಿಮಾನಿಗಳಿಗೆ ಅನುಷ್ಕಾ ಶರ್ಮಾ ಜೊತೆ ವಿಡಿಯೋ ಕಾಲಿಂಗ್‌ನಲ್ಲಿ ಬ್ಯುಸಿ ಇದ್ದೀನಿ ಎಂದು ಮೊಬೈಲ್‌ ತೋರಿಸಿ ಫ್ಯಾನ್ಸ್‌ಗೆ ನಗುತ್ತಾ ಹೇಳಿದ ಪ್ರಸಂಗ ತಿರುವನಂತಪುರಂನಲ್ಲಿ ನಡೆದಿದ್ದು, ವಿಡಿಯೋ ವೈರಲ್‌ ಆಗಿದೆ.

ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ 20 ಅನ್ನು ಬುಧವಾರ 8 ವಿಕೆಟ್‌ಗಳಿಂದ ಗೆದ್ದಿತು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯ ಅಕ್ಟೋಬರ್ 2 ರಂದು ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡ ಬುಧವಾರ ರಾತ್ರಿ ತಿರುವನಂತಪುರಂನಿಂದ ವಿಮಾನ ನಿಲ್ದಾಣಕ್ಕೆ ಬಸ್‌ನಲ್ಲಿ ಹೊರಟಿತು. ಅಭಿಮಾನಿಗಳು ಅದಾಗಲೇ ಹೋಟೆಲ್ ಹೊರಗೆ ಜಮಾಯಿಸಿದ್ದರು. ಟೀಂ ಇಂಡಿಯಾ ಕ್ರಿಕೆಟಿಗರು ಬಸ್ ಹತ್ತಿದಾಗ ಅಭಿಮಾನಿಗಳು ಜೋರಾಗಿ ಕೇಕೆ ಹಾಕಿದರು.

ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಕೊರತೆ ನೀಗಿಸಲು ಈ ಸ್ಪೀಡ್ ಬೌಲರ್​ಗೆ ಚಾನ್ಸ್!

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ನೋಡಿದ ಅಭಿಮಾನಿಗಳು ಮತ್ತಷ್ಟು ಪುಳಕಿತರಾದರು. ಕೊಹ್ಲಿ, ಕೊಹ್ಲಿ ಎಂದು ಕೂಗಿದರು. ಬಸ್ಸಿನಲ್ಲಿದ್ದ ವಿರಾಟ್ ಕೊಹ್ಲಿಗೆ ಅಭಿಮಾನಿಗಳ ಕಿರುಚಾಟ ಕೇಳಿಸಿತು. ಆ ಸಮಯದಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ವಿಡಿಯೋ ಕಾಲ್‌ನಲ್ಲಿದ್ದರು. ಅಭಿಮಾನಿಗಳ ಕರೆಗೆ ಸ್ಪಂದಿಸಿದ ಕೊಹ್ಲಿ, ಬಸ್ಸಿನ ಕನ್ನಡಿಯಿಂದ ಅನುಷ್ಕಾ ಜೊತೆ ವಿಡಿಯೋ ಕಾಲ್ ಮಾಡುತ್ತಿದ್ದೇನೆ ಎಂದು ತಕ್ಷಣ ತಮ್ಮ ಫೋನ್ ತೋರಿಸಿದರು. ಅಭಿಮಾನಿಗಳು ಇನ್ನಷ್ಟು ಜೋರಾಗಿ ಕೂಗಿದರು. ವಿರಾಟ್ ನಗುತ್ತಾ ಅನುಷ್ಕಾ ಜೊತೆ ಮಾತು ಮುಂದುವರೆಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News