ಟೆಸ್ಟ್ ಸರಣಿ ಗೆಲುವಿನ ನಂತರ ಸ್ವಗ್ರಾಮದಲ್ಲಿ ನಟರಾಜನ್ ಗೆ ಭವ್ಯ ಸ್ವಾಗತ...ಸೆಹ್ವಾಗ್ ಹೇಳಿದ್ದೇನು..?

 ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಗುರುವಾರ ಟಿ ನಟರಾಜನ್ ಅವರಿಗೆ ತಮ್ಮ ಸ್ವಗ್ರಾಮದಲ್ಲಿ ಭವ್ಯ ಸ್ವಾಗತ ಕೋರುವ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Last Updated : Jan 21, 2021, 09:31 PM IST
  • ಆಸ್ಟ್ರೇಲಿಯಾದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮುಕ್ತಾಯದ ನಂತರ ಎಡಗೈ ವೇಗಿ ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮಕ್ಕೆ ಆಗಮಿಸಿದ್ದು ಸಾಕಷ್ಟು ಸಂಭ್ರಮಕ್ಕೆ ಕಾರಣವಾಯಿತು.
  • ಬ್ರಿಸ್ಬೇನ್‌ನ ದಿ ಗಬ್ಬಾದಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ನಟರಾಜನ್ ತಮ್ಮ ಪಾದಾರ್ಪಣೆ ಪಂದ್ಯದಲ್ಲಿಯೇ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಗಮನಸೆಳೆದಿದ್ದರು.
 ಟೆಸ್ಟ್ ಸರಣಿ ಗೆಲುವಿನ ನಂತರ ಸ್ವಗ್ರಾಮದಲ್ಲಿ ನಟರಾಜನ್ ಗೆ ಭವ್ಯ ಸ್ವಾಗತ...ಸೆಹ್ವಾಗ್ ಹೇಳಿದ್ದೇನು..? title=
Photo Courtesy: Instagram

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಗುರುವಾರ ಟಿ ನಟರಾಜನ್ ಅವರಿಗೆ ತಮ್ಮ ಸ್ವಗ್ರಾಮದಲ್ಲಿ ಭವ್ಯ ಸ್ವಾಗತ ಕೋರುವ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮುಕ್ತಾಯದ ನಂತರ ಎಡಗೈ ವೇಗಿ ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಗ್ರಾಮಕ್ಕೆ ಆಗಮಿಸಿದ್ದು ಸಾಕಷ್ಟು ಸಂಭ್ರಮಕ್ಕೆ ಕಾರಣವಾಯಿತು. ಇದಕ್ಕೆ ಪ್ರತಿಕ್ರಿಯಿಸಿರುವ ಸೆಹ್ವಾಗ್ "ಇದು ಇಂಡಿಯಾ. ಇಲ್ಲಿ ಕ್ರಿಕೆಟ್  ಕೇವಲ ಆಟವಲ್ಲ. ಸೇಲಂ ಜಿಲ್ಲೆಯ ತಮ್ಮ ಚಿನ್ನಪ್ಪಂಪಟ್ಟಿ ಗ್ರಾಮಕ್ಕೆ ಆಗಮಿಸಿದ ನಂತರ ನಟರಾಜನ್ (T Natarajan) ಅವರಿಗೆ ಭರ್ಜರಿ ಸ್ವಾಗತ. ಎಂಥಹ ಅದ್ಬುತ ಸ್ಟೋರಿ' ಎಂದು ಬರೆದುಕೊಂಡು ವೀಡಿಯೊವನ್ನು ಸೆಹ್ವಾಗ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: IND vs AUS : T Natarajan ಅವರ ಸ್ಕ್ರಿಪ್ಟ್ ಅನ್ನು ಯಾರು ಬರೆಯುತ್ತಿದ್ದಾರೆ ? RP Singh

ಬ್ರಿಸ್ಬೇನ್‌ನ ದಿ ಗಬ್ಬಾದಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ನಟರಾಜನ್ ತಮ್ಮ ಪಾದಾರ್ಪಣೆ ಪಂದ್ಯದಲ್ಲಿಯೇ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಗಮನಸೆಳೆದಿದ್ದರು. ಇದರಿಂದಾಗಿ ಭಾರತ ಆಸ್ಟ್ರೇಲಿಯಾದಲ್ಲಿ 2-1 ರಿಂದ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿತು.

ಅಂತಿಮ ದಿನದ ಪಂದ್ಯದಲ್ಲಿ ಕೇವಲ ಮೂರು ಓವರ್‌ಗಳು ಮಾತ್ರ ಬಾಕಿ ಇರುವಾಗ ತಂಡ ಭಾರತ 328 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ರಿಷಭ್ ಪಂತ್, ಶುಬ್ಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ ಅವರ ಅರ್ಧಶತಕಗಳ ನೆರವಿನಿಂದ ಭಾರತ ಐತಿಹಾಸಿಕ ಗೆಲುವನ್ನು ಸಾಧಿಸಿತು. ಆ ಮೂಲಕ 1988 ರಿಂದ ಆಸಿಸ್ ನ ಭದ್ರಕೋಟೆಯಾಗಿದ್ದ ಗಬ್ಬಾದಲ್ಲಿ ದಾಖಲೆಯ ಗೆಲುವಿನ ಗುರಿ ಸಾಧಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News