Best Batter at Number-4, ODI Records: ಏಷ್ಯಾ ಕಪ್, ವಿಶ್ವಕಪ್ ಅಥವಾ ಇತರ ಯಾವುದೇ ದೊಡ್ಡ ಟೂರ್ನಿಯಾಗಿರಲಿ, ಕಳೆದ ಕೆಲವು ವರ್ಷಗಳಿಂದ ಭಾರತವು ನಂಬರ್-4 ಬ್ಯಾಟ್ಸ್‌ಮನ್’ಗಾಗಿ ಹುಡುಕಾಡುತ್ತಿದೆ. ಈ ಹಿಂದೆ ಯುವರಾಜ್ ಸಿಂಗ್ ಹಲವು ವರ್ಷಗಳ ಕಾಲ ಆ ಜಾಗವನ್ನು ತುಂಬಿದ್ದರು. ಅದಕ್ಕೆ ತಕ್ಕ ಫಲಿತಾಂಶವನ್ನೂ ನೀಡಿದ್ದರು. ವಿರಾಟ್ ಕೊಹ್ಲಿ, ಮೊಹಮ್ಮದ್ ಅಜರುದ್ದೀನ್ ಮತ್ತು ಶ್ರೇಷ್ಠ ಸಚಿನ್ ತೆಂಡೂಲ್ಕರ್ ಕೂಡ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಈಗ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಈ ಜವಾಬ್ದಾರಿ ಶ್ರೇಯಸ್ ಅಯ್ಯರ್ ಹೆಗಲ ಮೇಲಿದೆ. ಆದರೆ, ವಿಶ್ವ ಬ್ಯಾಟ್ಸ್‌ಮನ್ ಒಬ್ಬರು ನಂಬರ್ 4 ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅದೆಷ್ಟೋ ದಾಖಲೆಗಳನ್ನು ಬರೆದಿದ್ದಾರೆ. ಇನ್ನು ಈ ಆಟಗಾರನನ್ನು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನ ರಾಜ ಎಂದು ಕರೆದರೂ ತಪ್ಪಿಲ್ಲ.
ಇದನ್ನೂ ಓದಿ: ಭಾರತ vs ಪಾಕ್ ಹೈವೋಲ್ಟೇಜ್ ಪಂದ್ಯ ಉಚಿತವಾಗಿ ವೀಕ್ಷಿಸಬೇಕೇ? ಹಾಗಾದ್ರೆ ಈ ಸಣ್ಣ ಕೆಲಸ ಮಾಡಿ...
ಮೊದಲಿಗೆ, ನಾವು ಭಾರತೀಯ ಕ್ರಿಕೆಟ್ ಬಗ್ಗೆ ಮಾತನಾಡೋಣ. ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ನ 4 ನೇ ಕ್ರಮಾಂಕದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಆಲ್ ರೌಂಡರ್ ಯುವರಾಜ್ ಸಿಂಗ್ ನೀಡಿದ್ದಾರೆ. ಯುವಿ 304 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 14 ಶತಕ ಮತ್ತು 52 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಈ ಮಾದರಿಯಲ್ಲಿ ಒಟ್ಟು 8701 ರನ್’ಗಳನ್ನು ಹೊಂದಿದ್ದಾರೆ. ಅತ್ಯುತ್ತಮ ಸ್ಕೋರ್ 150 ರನ್ ಆಗಿದೆ, 2017ರಲ್ಲಿ ಕಟಕ್’ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಈ ಸಾಧನೆ ಮಾಡಿದ್ದರು. 1998 ರಲ್ಲಿ ಕಟಕ್ ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧ ನಂಬರ್ 4ನೇ ಸ್ಥಾನದಲ್ಲಿ ಬ್ಯಾಟ್ ಬೀಸಿದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಔಟಾಗದೆ 153 ರನ್ ಕಲೆಹಾಕಿದ್ದರು. ಇದು ODI ನಂಬರ್ 4 ಸ್ಥಾನದಲ್ಲಿ ಭಾರತದ ಪರ ಓರ್ವ ಕ್ರಿಕೆಟಿಗ ಕಲೆಹಾಕಿದ ಅತೀ ಹೆಚ್ಚು ಸ್ಕೋರ್ ಆಗಿದೆ.
ಯುವರಾಜ್ ಅವರ ನಿವೃತ್ತಿಯ ನಂತರ, ಅನೇಕ ಆಟಗಾರರು ಈ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರೂ ಕೂಡ, ಅವರಂತೆ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಇದೀಗ ಗಾಯದ ಸಮಸ್ಯೆಯಿಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಂಡದಿಂದ ಹೊರಗುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ನಂಬರ್ 4ರಲ್ಲಿ ಶ್ರೇಯಸ್ ಅಯ್ಯರ್ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್’ನಲ್ಲಿ ಶ್ರೇಯಸ್ ಟೀಂ ಇಂಡಿಯಾಗೆ 4 ನೇ ಸ್ಥಾನದಲ್ಲಿ ಬಲವನ್ನು ನೀಡಬೇಕಾಗಿದೆ.
ನಂಬರ್-4ರಲ್ಲಿ ಯಾರು ಬೆಸ್ಟ್?
ನೀವೆಲ್ಲರೂ ಸರ್ ವಿವಿಯನ್ ರಿಚರ್ಡ್ಸ್ ಹೆಸರನ್ನು ಕೇಳಿರಬಹುದು. ಅವರನ್ನು ವಿವ್ ರಿಚರ್ಡ್ಸ್ ಎಂದೂ ಕರೆಯುವುದುಂಟು. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 4 ನೇ ಸ್ಥಾನದಲ್ಲಿ ಬ್ಯಾಟ್ ಬೀಸಿದ ಅತ್ಯುತ್ತಮ ಕ್ರಿಕೆಟಿಗ ಇವರೇ.. ವಿವ್ ಅವರ ಹೆಸರು ಅಗ್ರಸ್ಥಾನದಲ್ಲಿ ಕಂಡುಬರುತ್ತದೆ. 1984 ರಲ್ಲಿ ಮ್ಯಾಂಚೆಸ್ಟರ್’ನಲ್ಲಿ ಇಂಗ್ಲೆಂಡ್ ವಿರುದ್ಧ 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಅಜೇಯ 189 ರನ್ ಗಳಿಸಿದ್ದರು. ಇನ್ನು ಎರಡನೇ ಅಗ್ರ ಸ್ಕೋರರ್ ಕೂಡ ಅವರೇ... 1987 ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನದ ಬೌಲರ್’ಗಳನ್ನು ಸೋಲಿಸಿ 181 ರನ್ ಗಳಿಸಿದ್ದರು.
71 ವರ್ಷ ವಯಸ್ಸಿನ ವಿವಿಯನ್ ರಿಚರ್ಡ್ಸ್ ತಮ್ಮ ವೃತ್ತಿಜೀವನದಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ, ಅಷ್ಟೇ ಏಕೆ ಬ್ರೇಕ್ ಕೂಡ ಮಾಡಿದ್ದಾರೆ. ಕ್ರೀಸ್‌ನಲ್ಲಿ ಅವರಿದ್ದರೆ ಸಾಕು, ಬೌಲರ್‌ಗಳಿಗೆ ನಡುಕ ಗ್ಯಾರಂಟಿ. ವಿವಿಯನ್ ತಮ್ಮ ವೃತ್ತಿಜೀವನದಲ್ಲಿ 187 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6721 ರನ್ ಗಳಿಸಿದ್ದಾರೆ. ಇದರಲ್ಲಿ 11 ಶತಕಗಳು ಮತ್ತು 45 ಅರ್ಧ ಶತಕಗಳು ಸೇರಿವೆ. ಇದಲ್ಲದೇ 118 ವಿಕೆಟ್’ಗಳನ್ನು ಸಹ ಪಡೆದಿದ್ದಾರೆ.
ಇದನ್ನೂ ಓದಿ: ಭಾರತ vs ಪಾಕ್ ‘ಸೂಪರ್’ ಹಣಾಹಣಿಗೆ ತಪ್ಪಿದ್ದಲ್ಲ ಮಳೆ ಅಡಚಣೆ... ಕೊಲಂಬೊ ಹವಾಮಾನ ವರದಿ ಹೀಗಿದೆ
ಏಕದಿನದಲ್ಲಿ 1000 ರನ್, 50 ವಿಕೆಟ್ ಮತ್ತು 50 ಕ್ಯಾಚ್’ಗಳನ್ನು ಪೂರೈಸಿದ ಮೊದಲ ಆಟಗಾರ ಇವರೇ. ವಿವಿಯನ್ ಸತತ 12 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅರ್ಧಶತಕ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.