ನವದೆಹಲಿ: ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ವೆಸ್ಟ್ಇಂಡೀಸ್ ತಂಡವನ್ನು ಕೇವಲ 122 ರನ್ ಗಳಿಗೆ ಆಲ್ ಔಟ್ ಮಾಡಿದೆ.
ಇದನ್ನೂ ಓದಿ: Australia vs India: 'ಭಾರತ ತಂಡವನ್ನು ಎಂದೆಂದಿಗೂ ಲಘುವಾಗಿ ಪರಿಗಣಿಸಬೇಡಿ'
🔹 7.2 overs
🏏 Eight runs
💥 Four wicketsShakib Al Hasan has recorded the best ODI bowling figures by a Bangladesh bowler against West Indies 🙌#BANvWI | https://t.co/76LmNVz1EG pic.twitter.com/vRIGxGPrtG
— ICC (@ICC) January 20, 2021
ಟಾಸ್ ಗೆದ್ದು ಮೊದಲು ಕ್ಷೇತ್ರ ರಕ್ಷಣೆಯನ್ನು ಆಯ್ದುಕೊಂಡ ಬಾಂಗ್ಲಾದೇಶ ತಂಡವು ತನ್ನ ನಿರ್ಧಾರ ಸರಿ ಎನ್ನುವಂತೆ ಬೌಲಿಂಗ್ ದಾಳಿ
ಮಾಡಿತು.ಅದರಲ್ಲೂ ಬಾಂಗ್ಲಾದ ಶಕಿಬ್ ಅಲ್ ಹಸನ್ (Shakib Al Hasan) ಅವರು (7.2/2/8/4) ಅವರ ಮಾರಕ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ತಂಡವು ಬೇಗನೆ ಸರ್ವಪತನವನ್ನು ಕಂಡಿತು.ಇವರಿಗೆ ಸಾಥ್ ನೀಡಿದ ಹಸನ್ ಮಹಮದ್ ಹಾಗೂ ಮುಸ್ತಾಫಿರ್ ಕ್ರಮವಾಗಿ 3 ಮತ್ತು 2 ವಿಕೆಟ್
ಗಳನ್ನು ಪಡೆದರು.
ಇದನ್ನೂ ಓದಿ: India vs England 2021: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ ತಂಡ ಪ್ರಕಟ..!
ಇನ್ನೊಂದೆಡೆ ವೆಸ್ಟ್ ಇಂಡಿಸ್ ಪರವಾಗಿ ಕೆ.ಮೇಯರ್ ಹಾಗೂ ರೋವ್ಮನ್ ಪಾವೆಲ್ ಅವರು ಗಳಿಸಿದ 40 ಮತ್ತು 28 ರನ್ ಗಳೇ ಅಧಿಕಮೊತ್ತವಾಗಿದ್ದವು.ಈಗ ಗೆಲುವಿನ ಗುರಿಯನ್ನು ಬೆನ್ನತ್ತಿರುವ ಬಾಂಗ್ಲಾದೇಶವು 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದೆ.ಗೆಲ್ಲಲು ಇನ್ನೂ 30 ರನ್ ಗಳ ಅಗತ್ಯವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.