GT vs MI: ಇಂದು ʼಅಗ್ರʼ ಗುಜರಾತ್‌ ಟೈಟಾನ್ಸ್‌ಗೆ ಮುಂಬೈ ಮುಖಾಮುಖಿ

ಸದ್ಯ ಗುಜರಾತ್‌ ಟೈಟಾನ್ಸ್‌ ತಂಡ ಮೊದಲ ಬಾರಿಗೆ ಟೂರ್ನಿ ಪ್ರವೇಶಿಸಿದ್ದರೂ ಸಹ ಅದ್ಭುತ ಪ್ರದರ್ಶನ ನೀಡುತ್ತಿದೆ. ಹಾರ್ದಿಕ್‌ ಪಾಂಡ್ಯ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಗುಜರಾತ್‌ ಟೈಟಾನ್ಸ್‌ ತಂಡವು ಆಡಿರುವ 10 ಪಂದ್ಯಗಳಲ್ಲಿ ಎಂಟರಲ್ಲಿ ಗೆಲುವು ಸಾಧಿಸಿದ್ದು, ಎರಡಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ. 

Written by - Bhavishya Shetty | Last Updated : May 6, 2022, 09:24 AM IST
  • ಇಂದು ಗುಜರಾತ್‌ ಟೈಟಾನ್ಸ್‌-ಮುಂಬೈ ಇಂಡಿಯನ್ಸ್‌ ಹಣಾಹಣಿ
  • ಸಂಜೆ 7.30ಕ್ಕೆ ಮುಂಬೈನಲ್ಲಿ ಪಂದ್ಯ
  • ಉಭಯ ತಂಡಗಳ ಪಂದ್ಯ ವೀಕ್ಷಿಸಲು ಕಾತುರ
GT vs MI: ಇಂದು ʼಅಗ್ರʼ ಗುಜರಾತ್‌ ಟೈಟಾನ್ಸ್‌ಗೆ ಮುಂಬೈ ಮುಖಾಮುಖಿ title=
Indian premier league

ಐಪಿಎಲ್‌ ಟೂರ್ನಿಯ 51 ನೇ ಪಂದ್ಯ ಗುಜರಾತ್‌ ಟೈಟಾನ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವೆ ನಡೆಯಲಿದೆ. ಈ ಪಂದ್ಯ ಸಂಜೆ 7.30ಕ್ಕೆ ಮುಂಬೈನ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ. ಈ ಪಂದ್ಯವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡ ಮತ್ತು ಕೊನೆ ಸ್ಥಾನ ಗಳಿಸಿರುವ ತಂಡಗಳ ನಡುವೆ ನಡೆಯಲಿದೆ.

ಇದನ್ನು ಓದಿ: ವಾತಾವರಣದಲ್ಲಿ ಏರುಪೇರು ಪ್ರಭಾವ.. ಇಂದಿನ ತರಕಾರಿ ಬೆಲೆಯಲ್ಲಿ ಹೀಗಿದೆ ಬದಲಾವಣೆ

ಸದ್ಯ ಗುಜರಾತ್‌ ಟೈಟಾನ್ಸ್‌ ತಂಡ ಮೊದಲ ಬಾರಿಗೆ ಟೂರ್ನಿ ಪ್ರವೇಶಿಸಿದ್ದರೂ ಸಹ ಅದ್ಭುತ ಪ್ರದರ್ಶನ ನೀಡುತ್ತಿದೆ. ಹಾರ್ದಿಕ್‌ ಪಾಂಡ್ಯ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಗುಜರಾತ್‌ ಟೈಟಾನ್ಸ್‌ ತಂಡವು ಆಡಿರುವ 10 ಪಂದ್ಯಗಳಲ್ಲಿ ಎಂಟರಲ್ಲಿ ಗೆಲುವು ಸಾಧಿಸಿದ್ದು, ಎರಡಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ. 

ಇನ್ನು ಮುಂಬೈ ಇಂಡಿಯನ್ಸ್‌ ತಂಡವು ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದು, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಆಡಿರುವ ಒಂಬತ್ತು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಕಂಡಿದ್ದು, ಉಳಿದೆಲ್ಲಾ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲೂ ಕೊನೆಯ ಸ್ಥಾನವನ್ನು ಪಡೆದಿದೆ. 

ಪ್ಲೇ ಆಫ್‌ಗೆ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿರುವ ಮುಂಬೈ ಇಂಡಿಯನ್ಸ್‌ ತಂಡ ಇಂದು ಗುಜರಾತ್‌ ಟೈಟಾನ್ಸ್‌ಗೆ ಎದುರಾಳಿಯಾಗಿ ಆಡಲಿದೆ. ಈ ಪಂದ್ಯದಲ್ಲಿ ಉಭಯ ತಂಡಗಳು ಯಾವರೀತಿ ಪ್ರದರ್ಶನ ತೋರಲಿದೆ ಎಂಬುದನ್ನು ಕಾದುನೋಡಬೇಕಿದೆ. 

ಇದನ್ನು ಓದಿ: ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್: ಸ್ಪ್ಲಿಟ್ ಇನ್ವರ್ಟರ್ ಎಸಿ ಮೇಲೆ ಭರ್ಜರಿ ರಿಯಾಯಿತಿ

ಸಂಭಾವ್ಯ ಆಟಗಾರರ ಪಟ್ಟಿ 
ಗುಜರಾತ್‌ ಟೈಟಾನ್ಸ್‌: 
ವೃದ್ಧಿಮಾನ್ ಸಹಾ (ವಿ.ಕೀ), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ಕ್ಯಾ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ

ಮುಂಬೈ ಇಂಡಿಯನ್ಸ್‌: 
ಇಶಾನ್ ಕಿಶನ್ (ವಿ.ಕೀ), ರೋಹಿತ್ ಶರ್ಮಾ (ಕ್ಯಾ), ಟಿಮ್ ಡೇವಿಡ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಹೃತಿಕ್ ಶೋಕೀನ್, ಡೇನಿಯಲ್ ಸಾಮ್ಸ್, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ರಿಲೆ ಮೆರೆಡಿತ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News